ತಹಸೀಲ್ದಾರ್ ಕಿರುಕುಳ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 13
ಗದಗ ತಹಸೀಲ್ದಾರ್ ಎಸ್.ಡಿ. ಗಣಾಚಾರಿ ತನ್ನ ಕೆಳಗಿರುವ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ. ಸಿಬ್ಬಂದಿ ಕೆಲಸ ಮಾಡಲು ಉಸಿರು ಗಟ್ಟಿಸುವ ವಾತಾವರಣ ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿನ ನೌಕರರು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗದಗ ತಹಸೀಲ್ದಾರ್ ತನ್ನ ಕೈ ಕೆಳಗೆ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕೀಳು ದೃಷ್ಟಿಯಿಂದ ನೋಡುವ ಪರಿಪಾಠವನ್ನು ಕಳೆದ ಹಲವು ವರ್ಷಗಳಿಂದಲೂ ರೂಢಿಸಿಕೊಂಡು ಬಂದಿದ್ದಾರೆಂದು ನೌಕರರು ತಿಳಿಸಿದರು. ತಮ್ಮ ಇಲಾಖೆಯ ನೌಕರರನ್ನು ಬಾಯಿಗೆ ಬಂದಂತೆ ಬೈಯುವುದಲ್ಲದೇ ಕೆಲಸವನ್ನೂ ಸರಿಯಾಗಿ ನಿರ್ವಹಿಸುವುದಿಲ್ಲ. ತಹಸೀಲ್ದಾರ್ ಗಣಾಚಾರಿಯವರ ಈ ವರ್ತನೆ ಕೇವಲ ಬೈಗುಳಕ್ಕೆ ಸೀಮಿತವಾಗಿಲ್ಲ. ಇವರ ಇನ್ನೂ ಕೆಲವು ವರ್ತನೆಗಳು ಸಿಬ್ಬಂದಿ ಜೀವನ ನಿರ್ವಹಣೆಗೂ ತೊಂದರೆಯಾಗಿದೆ. ಗ್ರಾಮಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಹಾಗೂ ತಮ್ಮ ಕಚೇರಿಯ ಕೆಲ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವನ್ನೇ ಬಿಡುಗಡೆಗೊಳಿಸಿಲ್ಲ. ಇದನ್ನು ಕೇಳಿದರೆ ನಾವು ಸಂಬಳ ಹಾಕಿದಾಗ ತೆಗೆದುಕೊಳ್ಳಿ ಎನ್ನುವ ಉತ್ತರ ನೀಡುತ್ತಾರಂತೆ. ಅಲ್ಲದೇ ಗೌಪ್ಯವಾಗಿ ಇಡಬೇಕಾದ ಎಷ್ಟೋ ವಿಷಯಗಳನ್ನೂ ಸಹ ಸಾರ್ವಜನಿಕವಾಗಿ ಬಹಿರಂಗ ಪಡಿಸುವುದರಿಂದ ಕೆಲಸ ನಿರ್ವಹಿಸುವುದು ಸಹ ಕಷ್ಟವಾಗಿದೆ. ಇಂತಹ ಅಧಿಕಾರಿಯನ್ನು ಜಿಲ್ಲೆಯಿಂದಲೇ ವರ್ಗ ಮಾಡಬೇಕೆಂದು ಆಗ್ರಹಿಸಿದರು. ಬುಧವಾರ ಸಾಮೂಹಿಕ ರಜೆ ನೀಡಿದ್ದ ತಹಸೀಲ್ದಾರ್ ಕಚೇರಿ ನೌಕರರು ಅಪರ ಜಿಲ್ಲಾಧಿಕಾರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು, ಮತ್ತೆ ಕೆಲಸಕ್ಕೆ ಹಾಜರಾದರು. ಹಿರಿಯ ಶಿರಸ್ತೇದಾರರು ಸೇರಿದಂತೆ ಗದಗ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

