ಗದಗ

ಆತ್ಮಜಾಗೃತಿ ಮಹತ್ವ ಸಾರುವುದೇ ಶಿವರಾತ್ರಿ: ಜ. ತೋಂಟದ ಶ್ರೀ

Published On :

ಗದಗ: ಶಿವಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ಎಚ್ಚರಿಕೆ ಹಾಗೂ ಆತ್ಮಜಾಗೃತಿಯ ಮಹತ್ವ ಸಾರುವುದೇ ಶಿವರಾತ್ರಿ ಸಂದೇಶವಾಗಿದೆ ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಈಚೆಗೆ ಅವರು ಜ. ತೋಂಟದಾರ್ಯ ಮಠದಲ್ಲಿ ಶಿವರಾತ್ರಿ ಅಂಗವಾಗಿ ಧಾರವಾಡದ ಶಾಸ್ತ್ರೀಯ ಸಂಗೀತ ಸಾಧಕಿ ಸುಜಾತಾ ಕಮ್ಮಾರ ಅವರಿಂದ ನಡೆದ ಶಿವಸ್ತುತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಶಿವ ಎಂದರೆ ಮಂಗಳಕರವಾದುದು, ಹಿತವಾದುದು, ಉಚಿತ, ಯೋಗ್ಯವಾದುದು ಎಂಬ ಅರ್ಥ ಕೂಡ ಇದೆ. ಶಿವಾನುಭವ ಎಂದರೆ ಸಮಾಜಕ್ಕೆ, ನಮ್ಮ ಮನಸ್ಸಿಗೆ, ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಚರಿಸುವುದಾಗಿದೆ. ಆದ್ದರಿಂದ ನಮ್ಮ ಲೌಕಿಕ, ಅಲೌಕಿಕವಾದ ಬದುಕು ಉತ್ತಮಗೊಳ್ಳಬೇಕು ಎಂಬ ಸದಾಶಯವೇ ಶಿವಾನುಭವವಾಗಿದೆ ಎಂದರು.
ಶಿವರಾತ್ರಿ ಶಿವಜಾಗರಣೆ ಎಂದರೆ ಕೇವಲ ವರ್ಷಕ್ಕೆ ಒಂದೇ ಒಂದು ದಿನ ಉಪವಾಸ ಮಾಡಿ, ಶಿವನಾಮಸ್ಮರಣೆಯಲ್ಲಿ ಕಾಲ ಕಳೆದುಬಿಟ್ಟರೆ ಆಯಿತು ಎಂಬ ಭಾವನೆ ಸಲ್ಲದು. ಪ್ರತಿ ನಿತ್ಯವೂ ಶರಣಸಾಧಕರು ಹೊಂದಿರಬೇಕಾದ ಶಿವಜಾಗೃತಿಯನ್ನು ಶಿವಾನುಭವ ಸಾಂಕೇತಿಸುವುದು ಎಂದರು. ಸುಜಾತಾ ಕಮ್ಮಾರ ಅವರು ಶಿವಸ್ತುತಿ, ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಮಲ್ಲಿಕಾರ್ಜುನ ಬುಳ್ಳಾ, ಪರಶುರಾಮ ಪೂಜಾರ, ಷಣ್ಮುಖ ಪೂಜಾರ, ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಅನ್ನಕ್ಕ ಬಡಿಗಣ್ಣವರ, ಖಜಾಂಚಿ ಸಿದ್ದಲಿಂಗಯ್ಯ ಹಿರೇಮಠ, ಸಹಕಾರ್ಯದರ್ಶಿ ವೀರೇಶ ಮುನವಳ್ಳಿ, ತೊಂಟೇಶ ಕುರಡಗಿ ಮುಂತಾದವರು ಪಾಲ್ಗೊಂಡಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.