ಗದಗ

ಬಿರು ಬಿಸಿಲಿನಲ್ಲೂ ಕೇಳುವವರೇ ಇಲ್ಲ

Published On :

ಅಜೀಜಅಹ್ಮದ ಬಳಗಾನೂರ
ಗದಗ: ಹಿಂದಿನ ಕಾಲದಲ್ಲಿ ಬಡವರ ಫ್ರಿಜ್ (ಮಡಕೆ)ಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಪ್ರತಿ ಮನೆಯಲ್ಲಿಯೂ ಮಡಿಕೆಯನ್ನು ಉಪಯೋಗಿಸುತ್ತಿದ್ದರು. ಆದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಜನತೆ ತುಂಪು ಪಾನೀಯ, ಫ್ರಿಜ್‌ಗೆ ಮಾರು ಹೋಗಿರುವುದರಿಂದ ಮಡಕೆಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಇದನ್ನೇ ನಂಬಿಕೊಂಡು ಬದುಕುತ್ತಿರುವ ನೂರಾರು ಕುಟುಂಬಗಳು ಇಂದು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುವಂತಾಗಿದೆ.
ಬೇಸಿಗೆ ಕಾಲದಲ್ಲಿ ಸೂರ್ಯನ ಪ್ರಖರತೆ ಜೋರಾಗಿರುತ್ತದೆ. ಹಾಗಾಗಿ ಈ ಹಿಂದೆ ಜನರು ಕುಡಿಯುವ ನೀರನ್ನು ಸಂಗ್ರಹಿಸಲು ಈ ಮಡಕೆಗಳನ್ನು ಅವಲಂಬಿಸಿದ್ದರು. ಅವರವರ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದ ಆಕಾರದ ಮಡಿಕೆಗಳನ್ನು ಕೊಂಡುಕೊಳ್ಳುತ್ತಿದ್ದರು. ಜೇಡಿ ಮಣ್ಣಿನಿಂದ ತಯಾರಿಸಲಾಗುವ ಈ ಮಡಕೆಯು ಬೇಸಿಗೆ ಕಾಲದಲ್ಲಿಯೂ ನೀರನ್ನು ತಂಪಾಗಿರಿಸುತ್ತದೆ. ಹಾಗಾಗಿಯೇ ಇದನ್ನು ಬಡವರ ಫ್ರಿಜ್ ಎಂದು ಕರೆಯಲಾಗುತ್ತದೆ.
ಅಸ್ತಿತ್ವ ಕಳೆದುಕೊಳ್ಳುತ್ತಿರುವ ಮಡಕೆ: ಬೇಸಿಗೆ ಬಿರು ಬಿಸಿಲಿನಲ್ಲಿ ತಂಪು ನೀರಿಗಾಗಿ ಜನರು ಈ ಮೊದಲು ಮಡಿಕೆಗಳನ್ನೇ ನೆಚ್ಚಿಕೊಂಡಿದ್ದರು. ಈದರೆ. ಇವತ್ತಿನ ದಿನಗಳಲ್ಲಿ ಜನರು ಹೆಚ್ಚಾಗಿ ಮಾರುಕಟ್ಟೆಯಲ್ಲಿನ ತಂಪು ಪಾನೀಯಗಳಾದ ಪೆಪ್ಸಿ, ಥಮ್ಸಪ್, ಜ್ಯೂಸ್‌ಗಳಿಗೆ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುವ ನೀರು ಶುದ್ಧೀಕರಣ ಯಂತ್ರಗಳಿಗೆ, ಫ್ರಿಜ್‌ಗಳಿಗೆ ಮಾರುಹೋಗಿರುವ ಕಾರಣ ಮಡಕೆಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ.
ಬದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಬಸಮ್ಮ ಕುಂಬಾರ ಕಳೆದ 35 ವರ್ಷಗಳಿಂದ ಗದಗನಲ್ಲಿ ವಾಸವಾಗಿದ್ದು, ಇವರು ಕುಂಬಾರಿಕೆಯನ್ನೇ ತಮ್ಮ ಪ್ರಮುಖ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಆದರೆ, ಪ್ರತಿ ವರ್ಷವು ಕುಂಬಾರಿಕೆಯಲ್ಲಿ ಅರಳುವ ಮಡಕೆಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಇವರು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಬೇರೆ ಯಾವುದೇ ಉದ್ಯೋಗದ ಗೋಜಿಗೆ ಹೋಗದೆ ಕಳೆದ 68 ವರ್ಷಗಳಿಂದ ಇದೇ ವೃತ್ತಿಯನ್ನೇ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.