ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ತಳವಾರ
ಲಕ್ಷ್ಮೇಶ್ವರ: ರಾಜ್ಯದ ತಾಂತ್ರಿಕ ಶಿಕ್ಷಣ ಮಂಡಳಿಯ ಇತಿಹಾಸದಲ್ಲೇ ಇಂತಹ ಅಚ್ಚುಕಟ್ಟಾದ ತಾಂತ್ರಿಕ ವಸ್ತು ಪ್ರದರ್ಶನ ಏರ್ಪಡಿಸಿರುವುದು ಇದೇ ಮೊದಲ ಬಾರಿಗೆ. ಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಎಚ್.ಯು. ತಳವಾರ ಹೇಳಿದರು.
ಅವರು ಶನಿವಾರ ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಜರುಗಿದ ತಾಂತ್ರಿಕ ವಸ್ತುಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಂಶೋಧನಾತ್ಮಕ ತಾಂತ್ರಿಕ ವಸ್ತುಗಳ ಪ್ರದರ್ಶನವು ಶೇ 2.5ರಷ್ಟು ಇರುವುದು ನೋವಿನ ಸಂಗತಿ. ಸಂಶೋಧನಾತ್ಮಕ ತಾಂತ್ರಿಕ ವಸ್ತುಗಳ ಪ್ರದರ್ಶನವು ಇನ್ನು ಹೆಚ್ಚಾಗಬೇಕಾಗಿದೆ. ಇದರಿಂದ ಹೊಸ ಹೊಸ ಆವಿಷ್ಕಾರಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಿ ದೇಶವು ತಾಂತ್ರಿಕವಾಗಿ ಇನ್ನೂ ಮುಂದುವರಿದು ಜಗತ್ತಿನ ಮುಂದುವರಿದ ದೇಶವಾಗಬಲ್ಲದು. ತಾಂತ್ರಿಕ ವಸ್ತುಗಳ ಉತ್ಪಾದನೆಯಲ್ಲಿ ಪ್ರಭುತ್ವ ಸಾಧಿಸಲು ಸಾಧ್ಯ ಎಂದರು.
ಧಾರವಾಡದ ಹ್ಯಾಪಿ ಲಿವಿಂಗ್ ಫೌಂಡೇಶನ್ನ ಗುರೂಜಿ ಎ.ಪಿ. ಪಾಟೀಲ ಮಾತನಾಡಿ, ಇಂದು ಜಗತ್ತಿನ ಎಲ್ಲ ರಂಗಗಳಲ್ಲಿ ತಾಂತ್ರಿಕತೆ ಹಾಸು ಹೊಕ್ಕಾಗಿದೆ. ತಾಂತ್ರಿಕತೆ ಇಲ್ಲದೆ ಯಾವೊಂದು ವಸ್ತುವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಅದಕ್ಕಾಗಿ ತಾಂತ್ರಿಕ ಶಿಕ್ಷಣ ಇಂದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ನೆಲವಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 86 ತಾಂತ್ರಿಕ ಕಾಲೇಜುಗಳು ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ಉಪನ್ಯಾಸಕ ನಾಗರಾಜ ಕುಲಕರ್ಣಿ ಮಾತನಾಡಿದರು. ಗದಗ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಲಲಿತಾ ನೆಲವಿಗಿ, ಮಹಾಂತೇಶ ನೆಲವಿಗಿ, ಪ್ರಶಾಂತ ನೆಲವಿಗಿ, ಲೋಹಿತ್ ನೆಲವಿಗಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಚಾರ್ಯರು ಆಗಮಿಸಿದ್ದರು. ಆಡಳಿತಾಧಿಕಾರಿ ಆರ್.ಎಕೆ. ಕುಲಕರ್ಣಿ ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದರು. ರಾಧಿಕಾ ಬೆಟಗೇರಿ, ಮಹೇಶ ಉಪ್ಪಿನ ಹಾಗೂ ರಾಜೇಶ ಹೊಂಗಲ್ ನಿರೂಪಿಸಿದರು. ಪ್ರಾಚಾರ್ಯ ವೈ.ಬಿ. ಗೊಡ್ಡೆಮ್ಮಿಯವರ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

