ಹಸ್ತಪ್ರತಿ ಸಂರಕ್ಷಣೆ ಆವಶ್ಯಕ: ಬಡಿಗೇರ
ಗದಗ: ಇಂದಿನ ವೈಜ್ಞಾನಿಕ ಯುಗದಲ್ಲಿ ದೇಶಿಯ ಜ್ಞಾನ, ಸಂಸ್ಕೃತಿ ಮತ್ತು ಸಂಪತ್ತು ಉಳಿಸಿಕೊಳ್ಳಬೇಕಾದರೆ ಬರವಣಿಗೆ ಪರಂಪರೆ ಅತಿ ಮುಖ್ಯ, ಅದನ್ನು ಉಳಿಸಿ, ಬೆಳೆಸಿಕೊಂಡು ಬರುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಕನ್ನಡ ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಹೇಳಿದರು. ಈಚೆಗೆ ಅವರು ಸ್ಥಳೀಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ಹಸ್ತಪ್ರತಿ ಸಂಪನ್ಮೂಲ ಹಾಗೂ ಸಂರಕ್ಷಣೆ ಕೇಂದ್ರ ಕನ್ನಡ ವಿವಿ ಹಂಪಿ ಹಾಗೂ ನ್ಯಾಷನಲ್ ಮಿಷನ್ ಫಾರ್ ಮ್ಯಾನುಸ್ಕ್ರಿಪ್ಟ್ಸ್ ನವದೆಹಲಿ ಆಶ್ರಯದಲ್ಲಿ ಜರುಗಿದ 1 ದಿನದ ರಾಷ್ಟ್ರೀಯ ಹಸ್ತಪ್ರತಿ ಜಾಗೃತಿ ಅಭಿಯಾನ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಮಕ್ಕಳಂತೆ ಪ್ರೀತಿಸಿ ಸಂರಕ್ಷಿಸಿದಂತೆ ಪ್ರತಿಯೊಬ್ಬರು ಹಸ್ತಪ್ರತಿಗಳನ್ನು ಕೂಡಾ ಸಂರಕ್ಷಣೆ ಮಾಡುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಪ್ರಾ. ಬಿ.ಬಿ. ಗೌಡರ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲಾ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಎಸ್.ಎಚ್. ಮೇರವಾಡೆ ಸ್ವಾಗತಿಸಿದರು. ಪ್ರೊ. ಸಿ.ಎಂ. ಕಾಳನ್ನವರ ನಿರೂಪಿಸಿದರು. ಬಿ.ಡಿ. ಬೇವೂರ ವಂದಿಸಿದರು.
ಮಾನವ ಅಭಿವೃದ್ಧಿ ವರದಿ ಕಾರ್ಯಾಗಾರ
ಗದಗ: ಜನರಿಂದ, ಜನರಿಗಾಗಿ, ಜನರೇ ತೀರ್ಮಾನಿಸುವ ವಿಧಾನವೇ ಮಾನವ ಅಭಿವೃದ್ಧಿಯ ಮೂಲಮಂತ್ರವಾಗಿದೆ. ಅದು ಆದಾಯಕ್ಕಿಂತ ಹೆಚ್ಚಾಗಿ ಅದರ ಫಲಿತಾಂಶಗಳ ಬಗ್ಗೆ ಗಮನ ಹರಿಸುವುದಾಗಿದೆ ಎಂದು ಜಿಪಂ ಸಿಇಓ ವೀರಣ್ಣ ತುರಮರಿ ಹೇಳಿದರು. ಜಿಪಂ ಸಭಾಂಗಣದಲ್ಲಿ ಗದಗ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾಯಿತ ಪ್ರತಿನಿಧಿಗಳಿಗೆ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗ ಯೋಜನೆಗಳನ್ನು ತಯಾರು ಮಾಡುವುದು ಮುಖ್ಯ. ಯೋಜನೆಗಳ ಫಲಿತಾಂಶಗಳ ಬಗ್ಗೆ ತಿಳಿದುಕೊಳ್ಳುವುದು, ಜನರ ಅನುಕೂಲಕ್ಕಾಗಿ ಕ್ರಿಯಾ ಯೋಜನೆ ತಯಾರಿಸುವ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳಿಗೆ ಕಾರ್ಯಾಗಾರ ಪ್ರಯೋಜನವಾಗಲಿದೆ ಎಂದರು. ಅರ್ಥಶಾಸ್ತ್ರ ವಿಭಾಗದ ಆರ್.ಆರ್. ಬಿರಾದಾರ ಮಾತನಾಡಿ, ಮಾನವ ಅಭಿವೃದ್ಧಿ ಸೂಚ್ಯಂಕದ ಹಿನ್ನೆಲೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಾನವ ಅಭಿವೃದ್ಧಿಯ ಸೂಚ್ಯಂಕಗಳ ವಿವರ, ಮಾನವ ಅಭಿವೃದ್ಧಿಗೆ ಬೇಕಾದ ಮಾಹಿತಿಯನ್ನು ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಉಮೇಶ, ಯೋಜನಾ ನಿರ್ದೇಶಕ ದಿನೇಶ, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜಿಪಂ. ಮುಖ್ಯ ಯೋಜನಾಧಿಕಾರಿ ಜಿ.ಎಂ. ಶಬ್ಬೀರ ಅಹ್ಮದ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

