ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ: ಡಾ. ದಂಡಿನ
ಕನ್ನಡಪ್ರಭ ವಾರ್ತೆ, ಗದಗ, ಮಾ. 28
ನಗರದ ಕನಕದಾಸ ಶಿಕ್ಷಣ ಸಮಿತಿಯ ಕೆಎಸ್ಎಸ್ ಮಹಾವಿದ್ಯಾಲಯದಲ್ಲಿ ಮಾ. 30 ರಂದು ಭಾರತದಲ್ಲಿ ವಿದ್ಯುನ್ಮಾನ ಬ್ಯಾಂಕಿಂಗ್ನ ಸವಾಲು, ಅವಕಾಶ ಹಾಗೂ ತಂತ್ರಗಳು ಎನ್ನುವ ವಿಷಯ ಕುರಿತು ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹೇಳಿದರು.
ಅವರು ಗುರುವಾರ ನಗರದ ಕನಕದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದ್ದು, ಡಾ. ಬಿ.ಎಫ್. ದಂಡಿನ ಅಧ್ಯಕ್ಷತೆ ವಹಿಸುವರು. ಕವಿವಿಯ ಉಪ ಕುಲಪತಿ ಡಾ. ಎಚ್.ಬಿ. ವಾಲಿಕಾರ ಉದ್ಘಾಟಿಸುವರು. ರಾಷ್ಟ್ರಮಟ್ಟದ ಹೆಸರಾಂತ ವಿದ್ವಾಂಸರಿಂದ ಎರಡು ಗೋಷ್ಠಿಗಳು ನಡೆಯಲಿವೆ. ಕವಿವಿಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಜಿ. ಹುಂಡೇಕಾರ ಆಶಯ ಭಾಷಣ ಮಾಡುವರು.
ಪ್ರಥಮ ಗೋಷ್ಠಿಯು ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗಳು ಹಾಗೂ ಇ-ಬ್ಯಾಂಕಿಂಗ್, ಇ-ಪೇಮೆಂಟ್, ಇಂಟರನೆಟ್ ಬ್ಯಾಂಕಿಂಗ್ ಇನ್ ಇಂಡಿಯಾ ಎನ್ನುವ ವಿಷಯವನ್ನು ಒಳಗೊಂಡಿದೆ. ಅಧ್ಯಕ್ಷತೆಯನ್ನು ಹೈದ್ರಾಬಾದ್ನ ಮೌಲಾನಾ ಆಜಾದ್ ರಾಷ್ಟ್ರೀಯ ವಿವಿಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಎನ್.ಐ. ಮುಲ್ಲಾ ವಹಿಸುವರು. ಸಂಪನ್ಮೂಲ ಬೋಧಕರಾಗಿ ಕವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಟಿ. ಬಾಗಲಕೋಟಿ ನಿರ್ವಹಿಸುವರು.
2 ಗಂಟೆಗೆ ಜರುಗುವ 2ನೇ ಗೋಷ್ಠಿಯಲ್ಲಿ ಬ್ಯಾಂಕಿಂಗ್ ತಂತ್ರಜ್ಞಾನದ ಪಾತ್ರ ಹಾಗೂ ಇ-ಸೆಕ್ಯೂರಿಟಿಸ್ ಮತ್ತು ಸೈಬರ್ ಲಾ ವಿಷಯವನ್ನು ಒಳಗೊಂಡಿದೆ. ಅಧ್ಯಕ್ಷತೆಯನ್ನು ನಗರದ ಎ.ಎಸ್.ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ ವಹಿಸುವರು. ಸಂಪನ್ಮೂಲ ಬೋಧಕರಾಗಿ ಹುಲಕೋಟಿ ರೂರಲ್ ಎಂಜನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸುಧೀನಾ ಎಚ್ಕೆ ಆಗಮಿಸುವರು. ಸಂಜೆ 4.15 ಸಮಾರೋಪ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ ವಹಿಸುವರು. ಅತಿಥಿಗಳಾಗಿ ಕವಿವಿಯ ವಾಣಿಜ್ಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಮಿಶ್ರಕೋಟಿ ಹಾಗೂ ಸಮಾರೋಪ ಭಾಷಣಕಾರರಾಗಿ ಕವಿವಿ ವಾಣಿಜ್ಯ ವಿಭಾಗದ ಡೀನ್ ಡಾ. ಆರ್.ಎಲ್. ಹೈದರಾಬಾದ್ ಆಗಮಿಸುವರು.
ಬೇರೆ ಬೇರೆ ರಾಜ್ಯಗಳಿಂದ 40ಕ್ಕೂ ಹೆಚ್ಚು ಪ್ರಬಂಧ ಮಂಡನೆಕಾರರು ಭಾಗವಹಿಸುವರು. 200ಕ್ಕೂ ಹೆಚ್ಚು ಪ್ರತಿನಿಧಿಗಳು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಸಿ. ವಗ್ಗಿ, ಟಿ.ಎನ್. ಗೋಡಿ, ಎನ್.ಎಂ. ಅಂಬಲಿಯವರು, ಎಂ.ಎ. ರಾಟಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

