ಏ. 3ರಿಂದ ಆಯುರ್ವೇದ ವೈದ್ಯರಿಗೆ ತರಬೇತಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 30
ಅಖಿಲ ಭಾರತ ಪಾರಂಪರಿಕ ವೈದ್ಯ ಪರಿಷತ್ ಟ್ರಸ್ಟ್, ಕರ್ನಾಟಕ ಗ್ರಾಮೀಣ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಆಯುಷ್ ಬೋರ್ಡ್ ಗದಗ ಸಹಯೋಗದಲ್ಲಿ ಏ. 3 ಹಾಗೂ 4ರಂದು ಬೆಳಗ್ಗೆ 10.30ಕ್ಕೆ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದ ಗಂಗಿಭಾವಿಮಠ ಕಲ್ಯಾಣ ಮಂಟಪದಲ್ಲಿ ಆಯುರ್ವೇದ ವೈದ್ಯರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನಿಡಗುಂದಿಕೊಪ್ಪ ಶಿವಯೋಗ ಮಂದಿರ ಶಾಖಾಮಠದ ಶಿವಬಸವ ಶ್ರೀಗಳು ಹೇಳಿದರು.
ನಗರದ ಹಾಲಕೇರಿ ಅನ್ನದಾನೀಶ್ವರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಎಲ್ಲ ರೋಗಗಳನ್ನೂ ಆಯುರ್ವೇದ ಪದ್ಧತಿಯಲ್ಲಿ ಗುಣಪಡಿಸಲು ಸಾಧ್ಯ. ಆದರೆ ಇದರ ಜನಪ್ರಿಯತೆ ಕಡಿಮೆಯಾಗುತ್ತಿದೆ. ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ. ಪಾರಂಪರಿಕ ಆಯುರ್ವೇದದ ಕುರಿತು ಲಿಂ. ಹಾನಗಲ್ಲ ಕುಮಾರ ಶ್ರೀಗಳು ತಮ್ಮ ಶಿಷ್ಯ ಬಳಗಕ್ಕೆ ತರಬೇತಿ ನೀಡಿ, ಈ ಪದ್ಧತಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ.
250ಕ್ಕೂ ಹೆಚ್ಚು ವೈದ್ಯರು: ಆಯುರ್ವೇದ ಗಿಡಮೂಲಿಕೆ ಹೊಂದಿರುವ ಕಪ್ಪತ್ತಗುಡ್ಡದಲ್ಲಿ ಆಯುರ್ವೇದ ವೈದ್ಯರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಗದಗ, ಧಾರವಾಡ, ಬೆಳಗಾವಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ಹಾವೇರಿ ಜಿಲ್ಲೆಗಳ 250ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳಲಿದ್ದಾರೆ. ಏ. 3ರಂದು ಬೆಳಗ್ಗೆ 10.30ಕ್ಕೆ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಉದ್ಘಾಟಿಸುವರು. ಆಡಿ-ಜಿಗಳೂರಿನ ಸಿದ್ದೇಶ್ವರ ಸಂಸ್ಥಾನಮಠದ ಸಿದ್ದೇಶ್ವರ ಶ್ರೀಗಳು ಅಧ್ಯಕ್ಷತೆ, ಮಲ್ಲೂರಿನ ಶಿವೋಹಂ ಸಿದ್ಧಾಶ್ರಮದ ಮಲ್ಲಿಕಾರ್ಜುನ ಶ್ರೀಗಳು, ಚನ್ನಬಸವ ಶ್ರೀಗಳು, ಶ್ರೀಶೈಲ ಮಲ್ಲಿಕಾರ್ಜುನ ಶ್ರೀಗಳು, ಲೋಕೇಶ್ವರ ಶ್ರೀಗಳು ಸಮ್ಮುಖ ವಹಿಸುವರು.
ಅತಿಥಿಗಳಾಗಿ ಆಯುಷ್ ನಿರ್ದೇಶನಾಲಯದ ನಿರ್ದೇಶಕ ಜಿ.ಎನ್. ಶ್ರೀಕಂಠಯ್ಯ, ಗದಗ ವಿಭಾಗದ ಉಪ ಅರಣ್ಣ ಸಂರಕ್ಷಣಾಧಿಕಾರಿ ಡಿ.ಎಸ್. ಅಘೋರೆ, ಡಿಎಚ್ಓ ಡಾ ಡಿ.ಬಿ. ಚನ್ನಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ ಬಿ.ಜಿ. ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಗೌಡರ, ಡಾ ಜಿ.ಬಿ.ಪಾಟೀಲ, ಜಿ.ಎಸ್. ಹಿರೇಮಠ, ರಾಜಶೇಖರ ಹಿರೇಮಠ, ಜಿ.ವಿ. ಮುಳಗುಂದ, ಎಸ್.ಬಿ. ತೋಟದ ಆಗಮಿಸುವರು. ಮಧ್ಯಾಹ್ನ 3 ಗಂಟೆಗೆ ಡಾ ಜಿ.ಎಸ್. ಹಿರೇಮಠ ಅವರಿಂದ ಉಪನ್ಯಾಸ ಹಾಗೂ ಸಂಜೆ 5.30ಕ್ಕೆ ಶಿವಕುಮಾರ ಶ್ರೀಗಳಿಂದ ವನಸ್ಪತಿ ಸಸ್ಯಗಳ ಪ್ರಾತ್ಯಕ್ಷಿಕೆ ಹಾಗೂ ಪರಿಚಯ ನೆರವೇರಲಿದೆ.
ಸಮಾರೋಪ, ಸನ್ಮಾನ: ಏ. 4ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಲ್ಲಿಕಾರ್ಜುನ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಗೋಕಾಕ ಶಿವಯೋಗಿ ಮಠದ ಲೋಕೇಶ್ವರ ಶ್ರೀಗಳು, ಕಪ್ಪತ್ತಗುಡ್ಡದ ಶ್ರೀಶೈಲ ಮಲ್ಲಿಕಾರ್ಜುನ ಶ್ರೀಗಳು ವಹಿಸುವರು. ಅತಿಥಿಗಳಾಗಿ ಬಿ.ಎಂ. ಶಾಂತಮೂರ್ತಿ, ಪಂಚಯ್ಯ ಅಥಣಿಮಠ, ಪವಾಡಿಗೌಡ್ರ, ಗುರುಶಾಂತಪ್ಪ ಇಟಗಿ, ಮಹಾಲಿಂಗಯ್ಯ ತಡೆದಮಠ ಆಗಮಿಸುವರು. ಉಪನ್ಯಾಸಕರಾಗಿ ಗುರುಶಾಂತಸ್ವಾಮಿ, ಅಲ್ಲಯ್ಯ ಹಿರೇಮಠ, ಸೋಮಲಿಂಗಪ್ಪ ಏಣಗಿ, ಬಸವರಾಜ ಹಿರೇಮಠ, ವಿ.ಎಸ್. ಹಿರೇಮಠ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಶಿ ವಿರಕ್ತಿಮಠದ ಚನ್ನಬಸವ ಶ್ರೀಗಳು, ಸಿದ್ದೇಶ್ವರ ಶ್ರೀಗಳು, ಬಸವರಾಜ ಹಿರೇಮಠ, ಮಹಾಂತೇಶ ಹಿರೇಮಠ, ಎಸ್.ಎಫ್. ಕೆಂಭಾವಿಮಠ, ಚಂದ್ರು ಬಾಳೆವಾಡಿಮಠ, ಎಸ್.ಬಿ. ತೋಟದ ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

