ಗದಗ

ಕಾರ್ಮಿಕರ ಪರಿಶ್ರಮವೇ ರಾಷ್ಟ್ರಾಭಿವೃದ್ಧಿ ಮೂಲ

Published On :

ಗದಗ: ಕಾರ್ಮಿಕರ ಪರಿಶ್ರಮವೇ ರಾಷ್ಟ್ರದ ಅಭಿವೃದ್ಧಿಗೆ ಮೂಲ ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಈಚೆಗೆ ಅವರು ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2117ನೇ ಶಿವಾನುಭವದಲ್ಲಿ ನಡೆದ ಕಾರ್ಮಿಕ ದಿನಾಚರಣೆ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಈರ್ವರು ಶ್ರಮ ಜೀವಿಗಳನ್ನು ಸನ್ಮಾನಿಸಿ, ಆಶೀರ್ವಚನ ನೀಡಿದರು.
ದೇಶದ ಬಹುಸಂಖ್ಯಾತ ಕಾರ್ಮಿಕರು ಶ್ರಮವಹಿಸಿ ದುಡಿದರೂ ಕೂಡ ಅವರ ಶ್ರಮಕ್ಕೆ ತಕ್ಕ ಫಲ ಅವರಿಗೆ ಸಿಗುವುದಿಲ್ಲ. ಕಾರ್ಮಿಕರು ಬಂಡವಾಳಗಾರರ ಹಿಡಿತಕ್ಕೆ ಸಿಕ್ಕು ನಲುಗುತ್ತಾರೆ. ಇಂತಹ ಸ್ಥಿತಿ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ. ಆದ್ದರಿಂದಲೇ ಫ್ರಾನ್ಸ್ ದೇಶದಲ್ಲಿ 14ನೇ ಲೂಯಿ ನಿಕೋಲಸನ ವಿರುದ್ಧ ಕ್ರಾಂತಿ ನಡೆಯಿತು. ಕಾರ್ಲಮಾರ್ಕ್ಸ್ ಮತ್ತು ಲೆನಿನ್ ಕಾರ್ಮಿಕರ ಬಾಳಿಗೆ ಶಾಂತಿ ನೆಮ್ಮದಿ ತಂದು ಕೊಟ್ಟರು. ಕಾರ್ಲ ಮಾರ್ಕ್ಸ್‌ನ ಕೃತಿ ದಾಸ್ ಕ್ಯಾಪಿಟಲ್ ಕಾರ್ಮಿಕರಿಗೆ ಬೈಬಲ್ ಇದ್ದ ಹಾಗೆ. ಇದರಿಂದ ಪ್ರಭಾವಿತನಾದ ಲೆನಿನ್ ರಷ್ಯಾದಲ್ಲಿ ಕಾರ್ಮಿಕರ ಕ್ರಾಂತಿಯ ನಾಯಕನಾದನು. ಇವನ ನಂತರ ಗೋರ್ಬಚೇವ್‌ನ ಗ್ಲಾಸ್‌ನಾಷ್ಟ ಮತ್ತು ಪೆರೆಸ್ಟ್ರೊಯಿಕಾ ಎಂಬ ಕೃತಿಗಳು ಕಾರ್ಮಿಕನ ಬಾಳಿಗೆ ಆಕಾಶ ದೀಪವಾದವು.
ಕರ್ನಾಟಕದ ದಾವಣಗೆರೆಯನ್ನು ಸಹ ಮೊದಲು ಮ್ಯಾಂಚೆಸ್ಟರ್ ಎಂದು ಕರೆಯುತ್ತಿದ್ದರು. ಜವಳಿ ಬಟ್ಟೆಯಲ್ಲಿ ಪ್ರಸಿದ್ಧಿಯಾಗಿದ್ದ ಕಾರ್ಮಿಕ ನಾಯಕರ ತಪ್ಪು ದಾರಿಯ ಮುಷ್ಕರ ಕಾರ್ಖಾನೆಗಳನ್ನೆ ಹಾಳು ಮಾಡಿತು. ಇಂದು ಜಗತ್ತಿನಾದ್ಯಂತ ಕಾರ್ಮಿಕರ ಶ್ರಮಕ್ಕೆ ಗೌರವ ಸಿಗಬೇಕಾಗಿದೆ. ಕಾರ್ಮಿಕರನ್ನು ಗೌರವಿಸಬೇಕಾಗಿದೆ. ಈ ದಿಸೆಯಲ್ಲಿ ಲಿಂಗಾಯತ ಪ್ರಗತಿಶೀಲ ಸಂಘವು ಗದುಗಿನ ಇಬ್ಬರು ಶ್ರಮಿಕ ಕಾರ್ಮಿಕರನ್ನು ಗೌರವಿಸಿ ಅವರಿಗೆ ಗೌರವಧನ ನೀಡಿರುವುದು ಪ್ರಶಂಸನಾರ್ಹ ಎಂದರು.
 ಹೊಳೆಆಲೂರು ಕಲ್ಮೇಶ್ವರ ಕಾಲೇಜಿನ ಉಪನ್ಯಾಸಕ ಎಚ್.ಎನ್. ಕಾಳೆ, ಸಮಾಜ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಕುರಿತು ಉಪನ್ಯಾಸ ನೀಡಿದರು. ಅಶೋಕ ಸುತಾರ ಧರ್ಮಗ್ರಂಥ ಪಠಣ ಮಾಡಿದರು. ಈ ಸಂದರ್ಭದಲ್ಲಿ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಈರಣ್ಣ ಹೊನಗಣ್ಣವರ, ಗುರುಬಸವಲಿಂಗ ತಡಸದ, ಪ್ರಭಯ್ಯ ಹಿರೇಮಠ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಹಿಂದಿನ ಎಲ್ಲ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡರ ಸ್ವಾಗತಿಸಿದರು. ಶಿವಾನುಭವ ಸಮಿತಿ ಚೇರಮನ್ ಪ್ರೊ. ಎಸ್.ಎನ್.ಆದಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.