ನರಗುಂದದಲ್ಲಿ ಗೆಲ್ಲೋರ್ಯಾರು?
ನರಗುಂದ: ಗದಗ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಕಣಗಳಲ್ಲಿ ಒಂದಾಗಿರುವ ನರಗುಂದ ವಿಧಾನಸಭಾ ಮತ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲೋರ್ಯಾರು ಎನ್ನುವ ಲೆಕ್ಕಾಚಾರ ಜೋರಾಗಿಯೇ ನಡೆದಿದೆ.
ಬುಧವಾರ ಪ್ರಕಟಗೊಳ್ಳಲಿರುವ ಫಲಿತಾಂಶದತ್ತ ಈಗ ಎಲ್ಲರ ಚಿತ್ತ ನೆಟ್ಟಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
ಈ ಕ್ಷೇತ್ರಕ್ಕೆ ರೋಣ, ನರಗುಂದ, ಗದಗ, ಮುಂಡರಗಿ ಭಾಗದ ಒಟ್ಟು 93 ಹಳ್ಳಿಗಳು ಬರುತ್ತವೆ. ಒಟ್ಟು 1,71,000 ಸಾವಿರ ಮತದಾರರನ್ನು ಹೊಂದಿದ್ದು, ಮೇ. 5 ರಂದು ಜರುಗಿದ ಚುನಾವಣೆ ಬಳಿಕ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು, ಎಷ್ಟು ಮತಗಳ ಅಂತರದಿಂದ ಗೆಲ್ಲಬಹುದೆಂಬ ಅನೇಕ ಲೆಕ್ಕಾಚಾರದಲ್ಲಿ ಕಾರ್ಯಕರ್ತರು ಮುಳುಗಿದ್ದಾರೆ.
ಲೆಕ್ಕಾಚಾರ: ಕೆಲವರಂತು ಈ ಬಾರಿ ಬಿಜೆಪಿ ಆಡಳಿತದಿಂದ ಜನತೆ ಬೇಸತ್ತು ಕಾಂಗ್ರೆಸ್ ಬೆಂಬಲಿಸಿದ್ದಾರೆ ಎನ್ನುತ್ತಿದ್ದಾರೆ. ಕೆಲವರು ನರಗುಂದ ಮತ ಕ್ಷೇತ್ರದಾದ್ಯಂತ ಈಗಾಗಲೇ 2 ಬಾರಿ ಶಾಸಕರು ಹಾಗೂ ಸಚಿವರಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಸಿ.ಸಿ. ಪಾಟೀಲರ ಜನಪರ ಕಾರ್ಯಗಳಿಗೆ ಮೆಚ್ಚಿ, ಜನರು ಬಿಜೆಪಿಗೆ ಬೆಂಬಲಿಸಿದ್ದಾರೆ ಎನ್ನುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ಗೆ ಈಗಾಗಲೇ ಅಧಿಕಾರ ನೀಡಿದ್ದಾಗಿದೆ. ಈ ಬಾರಿ ಜನತೆ ಹೊಸಬರ ಮುಖ ನೋಡುವ ತವಕದಲ್ಲಿದ್ದಾರೆಂದು ಜನ ಲೆಕ್ಕಚಾರ ನಡೆಸಿದ್ದಾರೆ.
ಗುಟ್ಟು ಬಿಡದ ಮತದಾರ: ಈ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಗೆಲವಿಗಾಗಿ ಹಗಲಿರುಳು ಶ್ರಮಿಸಿ, ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಆದರೆ, ಕ್ಷೇತ್ರದ ಮತದಾರ ಮಾತ್ರ ತನ್ನ ಗುಟ್ಟು ಬಿಡದೆ ಎಲ್ಲರಿಗೂ ಸೂಕ್ತವಾಗಿಯೇ ಸ್ಪಂದಿಸಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಲ್ಲಿ ತಮಗೇ ಗೆಲವು ದೊರೆಯಲಿದೆಯೇ ಎನ್ನುವ ಆತಂಕ ಶುರುವಾಗಿದೆ.
ರೈತರ ಮತಗಳೇ ಹೆಚ್ಚು: ನರಗುಂದ ಮತಕ್ಷೇತ್ರವು ಕೃಷಿ ಪ್ರಧಾನ ಕ್ಷೇತ್ರವಾಗಿದ್ದು, ಇಲ್ಲಿ ರೈತಾಪಿ ವರ್ಗದ ಮತದಾರರೇ ನಿರ್ಣಾಯಕರಾಗಿರುವುದರಿಂದ ಅವರ ಮೇಲೆ ಎಲ್ಲ ಅಭ್ಯರ್ಥಿಗಳು ಹೆಚ್ಚು ಪ್ರಭಾವ ಬೀರಲು ಪ್ರಯತ್ನಿಸಿದ್ದಂತೂ ನಿಜ. ಈ ಭಾಗದಲ್ಲಿ ಕಳೆದ 2 ವರ್ಷಗಳಿಂದ ಮಳೆ ಕೈ ಕೊಟ್ಟಿದ್ದರಿಂದ ರೈತ ಸಮುದಾಯ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೆಲವು ಭಾಗಗಳಲ್ಲಿ ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಸಹಕಾರ ಬ್ಯಾಂಕ್ಗಳಲ್ಲಿ ಬೆಳೆಸಾಲ ಮಾಡಿದವರಿಗೆ ರು. 25 ಸಾವಿರದವರೆಗೆ ಸಾಲ ಮನ್ನಾ, ಬೆಳೆವಿಮೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಎಕರೆಗೆ ರು. 1 ಸಾವಿರ ಸಹಾಯ ಧನ ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿತ್ತು.
ಇದು ಬಿಜೆಪಿ ಗೆಲವಿಗೆ ಸಹಕಾರಿಯಾಗಬಹುದೆಂಬ ಮಾತು ಕೇಳಿ ಬರುತ್ತಿದೆ. ಆದರೆ, ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎನ್ನುವುದು ಫಲಿತಾಂಶದ ನಂತರವಷ್ಟೇ ತಿಳಿಯಲಿದೆ.
-ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

