ಇಂದು ಶಿಲ್ಪವನ ಉದ್ಘಾಟನೆ
ಶಿರಹಟ್ಟಿ: ಶ್ರೀ ಕ್ಷೇತ್ರ ವರವಿ ಮೌನೇಶ್ವರ ಮಠದಲ್ಲಿ ಮೇ. 8ರ ಮಧ್ಯಾಹ್ನ 4ಕ್ಕೆ ಶಿಲ್ಪ ಗುರು ಪ್ರಶಸ್ತಿ ಪುರಸ್ಕೃತ ಎನ್.ಜಿ. ನೀಲಕಂಠಾಚಾರ್ ಇವರ ಸ್ಮರಣಾರ್ಥ ಶಿಲ್ಪವನ ಉದ್ಘಾಟನೆ ಸಮಾರಂಭ ಜರುಗಲಿದೆ. ಮೌನೇಶ್ವರ ಮಠದ ವಿರೂಪಾಕ್ಷ ಶ್ರೀ, ಗುರುನಾಥೇಂದ್ರ ಸರಸ್ವತಿ ಶ್ರೀ, ಶಿವಸುಜ್ಞಾನತೀರ್ಥ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ನಾಗರಾಜ ವಿ. ಅಧ್ಯಕ್ಷತೆ ವಹಿಸಲಿದ್ದಾರೆ. ಷಣ್ಮುಖಪ್ಪ ಕಾಶಪ್ಪ ಯರಕದ ಉದ್ಘಾಟನೆ ಮಾಡಲಿದ್ದಾರೆ. ಡಾ. ಶೀಲಾಕಾಂತ ಪತ್ತಾರ, ಡಾ. ಕೆ.ಪಿ. ಈರಣ್ಣ, ಸುಭಾಷ ಕಮ್ಮಾರ, ಶಂಕರ ಡಿ. ಕಡ್ಲಿಕೊಪ್ಪ ಆಗಮಿಸಲಿದ್ದಾರೆ. ಶಿಲ್ಪಿಗಳಾದ ರಾಘವೇಂದ್ರ, ಸುರೇಶ, ಬಿ. ಕೊಟ್ರೇಶ, ವಿ.ಕೆ. ಚಿದಾನಂದ, ಬಿ. ಅಣ್ಣಪ್ಪ ಆಚಾರ್, ಚಿದಾನಂದ ಈರಪ್ಪ ಕಮ್ಮಾರ, ಬಿ. ಮೌನೇಶ, ಪ್ರಶಾಂತ ಎನ್. ಸೋನಾರ್, ಎಂ.ಪಿ. ವಿನಯಕುಮಾರ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ
ನೀರು ಪೂರೈಕೆ ಮಾಹಿತಿ
ಗದಗ: ನಗರದ ಖಾನತೋಟ, ಅಂಬೇಡ್ಕರ್ ನಗರ, ಕುಂಬಾರ ಓಣಿ, ಜನತಾ ಕಾಲೋನಿ, ಹಳೆ ಬಸ್ನಿಲ್ದಾಣದ ರಸ್ತೆ, ಬಸವೇಶ್ವರ ನಗರ, ಡಿ.ಸಿ. ಮಿಲ್ರೋಡ್, ಕೆ.ಸಿ. ರಾಣಿ ರಸ್ತೆಯ ಕೆಲವು ಭಾಗ, ಜವುಳ ಗಲ್ಲಿ, ಡೋರಗಲ್ಲಿ ಈ ಭಾಗಗಳಲ್ಲಿ ಬುಧವಾರ ನೀರು ಪೂರೈಕೆ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.
ಮೈಲವ್ವ ಹರಿಜನ ನಿಧನ
ಮುಂಡರಗಿ: ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ನಿವೃತ್ತ ಪೌರಸೇವಾ ನೌಕರಳಾದ ಮೈಲವ್ವ ಹರಿಜನ (94) ಈಚೆಗೆ ಸ್ವಗ್ರಾಮ ಶಿರೋಳದಲ್ಲಿ ನಿಧನರಾದರು. ಮೃತರು ಪುರಸಭೆ ದಪೇದಾರ ಮೈಲಪ್ಪ ಹರಿಜನ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಇವರ ನಿಧನಕ್ಕೆ ಪುರಸಭೆಯ ಪೌರಸೇವಾ ಸೌಕರರ ಸಂಘ ಸಂತಾಪ ಸೂಚಿಸಿದೆ.
ಪಾರ್ವತೆವ್ವ ನಿಧನ
ಗದಗ: ನಗರದ ವಕೀಲ ಚಾಳದ ನಿವಾಸಿ ಪಾರ್ವತೆವ್ವ ಪರಪ್ಪ ಮಂದಾಲಿ (78) ಶನಿವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಬಂಧುಗಳಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಸಂತಾಪ ಸೂಚಿಸಿದ್ದಾರೆ.
ಎಸ್ಸೆಸ್ಸೆಲ್ಸಿ: ಮುಂಡರಗಿ ಶೇ. 85.22 ಫಲಿತಾಂಶ
ಮುಂಡರಗಿ: ಕಳೆದ ಏಪ್ರಿಲ್ನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮುಂಡರಗಿ ತಾಲೂಕಿನ ಫಲಿತಾಂಶವು ಶೇ. 85.22 ರಷ್ಟಾಗಿದೆ. ತಾಲೂಕಿನಲ್ಲಿರುವ ಸರ್ಕಾರಿ ಪ್ರೌಢಶಾಲೆ ಶೇ. 88.95, ಅನುದಾನಿತ ಪ್ರೌಢಶಾಲೆ ಶೇ. 82.95 ಹಾಗೂ ಅನುದಾನ ರಹಿತ ಪ್ರೌಢಶಾಲೆಯ ಫಲಿತಾಂಶವು ಶೇ. 78.98 ರಷ್ಟಾಗಿದೆ. ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಹೊಳಲಮ್ಮ ಶಿದ್ದನಗೌಡರ ಶೇ. 94.72 ಅಂಕಗಳನ್ನು ಪಡೆದು ಪ್ರಥಮ, ಇದೇ ಶಾಲೆಯ ಶೃತಿ ಶಿವಪ್ಪ ರೂಪನವರ ಶೇ. 94.08 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಬಾಗೇವಾಡಿ ಗ್ರಾಮದ ಪೌಢಶಾಲೆಯ ಪಲ್ಲವಿ ಸೂಸಂಗಿ ಶೇ. 93.68 ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ತಾಲೂಕಿನ ಯಕ್ಲಾಸಪುರ ಪ್ರೌಢಶಾಲೆ, ಹಿರೇವಡ್ಡಟ್ಟಿ ಮೊರಾರ್ಜಿ ವಸತಿ ಶಾಲೆ ಹಾಗೂ ಮುಂಡರಗಿಯ ಎಸ್.ಎಫ್.ಎಸ್. ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿವೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

