ಗದಗ: ಶೇ. 59 ಪಿಯು ಫಲಿತಾಂಶ
ಗದಗ: ಜಿಲ್ಲೆಯಲ್ಲಿ ಪಿಯು ಕಲಾ ವಿಭಾಗದಲ್ಲಿ ಒಟ್ಟು 5340 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 3066 ತೇರ್ಗಡೆಯಾಗಿದ್ದು, ಶೇ. 57.42ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 1676 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 1241 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 74.05 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 1879 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 986 ತೇರ್ಗಡೆಯಾಗಿದ್ದು, ಶೇ. 52.47 ಫಲಿತಾಂಶ ಬಂದಿದೆ. ಒಟ್ಟು 3 ವಿಭಾಗಗಳಲ್ಲಿ 8895 ವಿದ್ಯಾರ್ಥಿಗಳು ಹಾಜರಾಗಿದ್ದು, 5293 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 59.51 ಫಲಿತಾಂಶ ಬಂದಿದೆ.
ಕಳೆದ ಸಾಲಿನದ್ದು ಶೇ. 48, ಪ್ರಸ್ತುತ ಸಾಲಿನದ್ದು 59.51 ಹೆಚ್ಚಳವಾಗಿದೆ.
ಕಲಾ, ವಾಣಿಜ್ಯ, ವಿಜ್ಞಾನ ವಿಷಯದಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು.
ಕಲಾ ವಿಭಾಗದಲ್ಲಿ: ಬೆಳ್ಳಟ್ಟಿಯ ಯೋಗಿ ವೇಮನ ಪಪೂ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ ಹೊಂಬಾಳಿ ಶೇ. 91 ಅಂಕ ಪಡೆದು ಜಿಲ್ಲೆಗೆ ಪ್ರಥಮ, ಗದಗನ ಕೆ.ವಿ.ಎಸ್.ಆರ್. ಕಾಲೇಜಿನ ವಿದ್ಯಾರ್ಥಿ ಐ.ಟಿ.ದಾನಸೂರ ಶೇ. 90.66 ಹಾಗೂ ನರೇಗಲ್ಲನ ಎಸ್.ಎ. ಪಪೂ ಕಾಲೇಜಿನ ವಿದ್ಯಾರ್ಥಿ ಸುನೀಲ ಗಾಣಿಗೇರ ಶೇ. 90.66 ಅಂಕಗಳನ್ನು ಪಡೆದು ದ್ವಿತೀಯ. ಕಡಕೋಳದ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ರೇಷ್ಮಾ ಡಬಾಲಿ ಶೇ. 90.16, ಮುಂಡರಗಿಯ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಉಮಾ ಭಾರತಿ ಶೇ. 90.16 ಹಾಗೂ ಮುಳಗುಂದದ ಎಸ್.ಜೆ.ಜೆ.ಎಂ. ಪಪೂ ಕಾಲೇಜಿನ ವಿದ್ಯಾರ್ಥಿ ಆರ್.ಕೆ. ಬಾತಾಖಾನಿ ಶೇ. 90.16 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ: ಬೆಟಗೇರಿಯ ಎ.ಎಸ್.ಎಸ್. ಪಪೂ ಕಾಲೇಜಿನ ವಿದ್ಯಾರ್ಥಿನಿ ವಿನಿತಾ ಓಸ್ವಾಲ್ ಶೇ. 93.66 ಪಡೆದು ಪ್ರಥಮ, ಬೆಟಗೇರಿಯ ಎ.ಎಸ್.ಎಸ್. ಪಪೂ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಮೆಹರವಾಡೆ 93.50 ಅಂಕಗಳನ್ನು ಪಡೆದು ದ್ವಿತೀಯ, ಬೆಟಗೇರಿಯ ಎ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ಶೇ. 93.33 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗದ ಮೂರು ಸ್ಥಾನಗಳನ್ನು ಬೆಟಗೇರಿಯ ಎ.ಎಸ್.ಎಸ್. ಮಹಾವಿದ್ಯಾಲಯ ಪಡೆದಿರುವುದು ವಿಶೇಷವಾಗಿದೆ.
ವಿಜ್ಞಾನ ವಿಭಾಗ: ಗದಗನ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ದೀಪಾ ಯಾಳಗಿಶೆಟ್ಟರ ಶೇ. 95.50 ಅಂಕಗಳನ್ನು ಪಡೆದು ಪ್ರಥಮ, ಗದಗನ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿ ಅಭಿಲಾಷ ಸೂಗಿ ಶೇ. 94.5 ಅಂಕಗಳನ್ನು ಪಡೆದು ದ್ವಿತೀಯ, ಗದಗನ ಜೆ.ಟಿ. ಪಪೂ ಕಾಲೇಜಿನ ವಿದ್ಯಾರ್ಥಿ ಅಯೂಬ ನದಿಮುಲ್ಲಾ ಶೇ. 94.17 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.
ಜಿಲ್ಲೆಗೆ ಪ್ರಥಮ 3 ಸ್ಥಾನ ಪಡೆದ ಸರ್ಕಾರಿ ಪಪೂ ಕಾಲೇಜುಗಳು: ಬೆಳ್ಳಟ್ಟಿಯ ಸರ್ಕಾರಿ ಮಹಿಳಾ ಪಪೂ ಕಾಲೇಜು ಶೇ. 96.15 ಪಡೆದು ಜಿಲ್ಲೆಗೆ ಪ್ರಥಮ, ಹೊಳೆಇಟಗಿಯ ಸರ್ಕಾರಿ ಪಪೂ ಕಾಲೇಜು ಶೇ. 94.11 ಪಡೆದು ದ್ವಿತೀಯ, ಕುರ್ತಕೋಟಿಯ ಸರ್ಕಾರಿ ಪಪೂ ಕಾಲೇಜು ಶೇ. 92.5 ಪಡೆದು ತೃತೀಯ ಸ್ಥಾನ ಪಡೆದಿದೆ.
ಅನುದಾನಿತ ಪಪೂ ಕಾಲೇಜು: ಕಲಕೇರಿಯ ಎಂ.ಬಿ. ಪಾಟೀಲ ಪಪೂ ಕಾಲೇಜು ಶೇ. 89.85 ಪಡೆದು ಜಿಲ್ಲೆಗೆ ಪ್ರಥಮ, ನರೇಗಲ್ಲನ ಎಸ್.ಎ ಪಪೂ ಕಾಲೇಜು ಶೇ. 84.36 ಪಡೆದು ದ್ವಿತೀಯ, ಹುಲಕೋಟಿಯ ಜಿಸಿಟಿಎಂ ಪಪೂ ಕಾಲೇಜು ಶೇ. 82.7 ಪಡೆದು ತೃತೀಯ ಸ್ಥಾನ ಗಳಿಸಿದೆ.
ಅನುದಾನರಹಿತ ಪಪೂ ಕಾಲೇಜು: ಗದಗನ ಬಿಪಿನ್ ಚಿಕ್ಕಟ್ಟಿ ಪಪೂ ಕಾಲೇಜು ಶೇ. 84.21 ಪಡೆದು ಪ್ರಥಮ, ಬೆಟಗೇರಿಯ ಎ.ಎಸ್.ಎಸ್. ಪಪೂ ಕಾಲೇಜು 78.28 ಪಡೆದು ದ್ವಿತೀಯ, ಹುಲಕೋಟಿಯ ಸ್ವಾಮಿ ವಿವೇಕಾನಂದ ಪಪೂ ಕಾಲೇಜು ಶೇ. 75 ಪಡೆದು ತೃತೀಯ ಸ್ಥಾನ ಗಳಿಸಿದೆ. ಗದಗನ ಯಲ್ಲಮ್ಮ ಪಪೂ ಕಾಲೇಜು ಶೂನ್ಯ ಫಲಿತಾಂಶ ಪಡೆದುಕೊಂಡಿದ್ದು, ಒಟ್ಟಾರೆ ಕಳೆದ ಸಾಲಿನಲ್ಲಿ 25ನೇ ಸ್ಥಾನವನ್ನು ಈ ಸಾಲಿನಲ್ಲಿ ಉಳಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

