ಗದಗ

ಗರಿಷ್ಠ ಅಂತರ

Published On :

ಗದಗ:  2008ರಲ್ಲಿಯೇ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಎಚ್.ಕೆ. ಪಾಟೀಲ ಸೋಲುಂಡಿದ್ದರು. 2013ರಲ್ಲಿಯೂ ಎಚ್.ಕೆ. ಪಾಟೀಲ ಸ್ಪರ್ಧಿಸಿದ್ದರಿಂದ ಎಲ್ಲರ ಗಮನ ಗದಗ ಕ್ಷೇತ್ರದತ್ತ ನೆಟ್ಟಿತ್ತು. ಬುಧವಾರ ನಡೆದ ಮತ ಎಣಿಕೆಯಲ್ಲಿ ಎಚ್.ಕೆ. ಪಾಟೀಲ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿನ 33,727 ಮತಗಳ ಅಂತರದಿಂದ ಜಯ ಗಳಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ.
ಅತ್ಯಂತ ಕಡಿಮೆ ಅಂತರ
ಗದಗ:  ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಡಮನಿ ಕೇವಲ 315 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ವೇಳೆಯಲ್ಲಿ ಅಭ್ಯರ್ಥಿಯ ಗೆಲುವಿನ ಅಂತರ 1000ಕ್ಕಿಂತಲೂ ಕಡಿಮೆ ಇದ್ದಲ್ಲಿ ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕು ಎನ್ನುವ ನಿಯಮದನ್ವಯ, ಬುಧವಾರ ಶಿರಹಟ್ಟಿ ಕ್ಷೇತ್ರದ ಅಂಚೆ ಮತಗಳನ್ನು ಮರು ಎಣಿಕೆ ಮಾಡಲಾಗಿತ್ತು. ಒಂದು ಸುತ್ತಿನಲ್ಲಿ ಬಿಜೆಪಿಯ ಹಾಲಿ ಶಾಸಕ ರಾಮಣ್ಣ ಲಮಾಣಿ, ಮತ್ತೊಂದು ಸುತ್ತಿನಲ್ಲಿ ಕಾಂಗ್ರೆಸ್ ಮುಂದಿರುತ್ತಾ ಜನ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ ಫಲಿತಾಂಶ ಇದು. 14 ಸುತ್ತಿನ ಎಣಿಕೆ ಟಿ20 ಪಂದ್ಯದಂತೆ ಭಾಸವಾಯಿತು. ಕೊನೆಗೂ ಅದೃಷ್ಟಲಕ್ಷ್ಮಿ ಕಾಂಗ್ರೆಸ್ ಪರವಾಗಿ ನಿಂತು ಕಾರ್ಯಕರ್ತರ ಹರ್ಷಕ್ಕೆ ಕಾರಣವಾದಳು.
ನರೇಗಲ್: ವಿಜಯೋತ್ಸವ
ನರೇಗಲ್ಲ: ರೋಣ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಗೆಲವು ಸಾಧಿಸಿದ ಬಳಿಕ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ, ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಸ್ಥಳೀಯ ವೈದ್ಯಾಧಿಕಾರಿ ಡಾ. ಜಿ.ಕೆ. ಕಾಳೆ, ನ್ಯಾಯವಾದಿ ಹುಲಕೋಟಿ, ಅಂದಾನಗೌಡ ಪೊಲೀಸ್ ಪಾಟೀಲ, ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ, ಉಮೇಶ ಸಂಕನಗೌಡ್ರ, ಜಿ.ಎಸ್. ಪಾಟೀಲ, ಶ್ರೀಕಾಂತ ಹೊಸಮನಿ, ಉಮೇಶ ಅಣ್ಣಿಗೇರಿಮಠ, ಡಾ. ಕೃಷ್ಣ ಕಾಳೆ, ಕಿರಣ ಕಾಳೆ, ಶಮ್ಸುದ್ದೀನ್ ಕುದರಿ, ನೀಲಪ್ಪ ತೊಂಡಿಹಾಳ, ಉಮೇಶ ಹುನಗುಂದ, ಅಶೋಕ ಬಾರಕೇರ, ಗುರುರಾಜ ಕುಲಕರ್ಣಿ, ಆದರ್ಣ ಕುಲಕರ್ಣಿ, ಈರಪ್ಪ ಹುನಗುಂದ, ಕಿರಣ ಕಾಳೆ, ನಿಸ್ಸಾರ್‌ಅಹ್ಮದ ಕುದರಿ, ಈರಪ್ಪ ಬೆಡಗಲ್ಲ, ರಾಮಪ್ಪ ಕಳಕೊಣ್ಣವರ, ಶಿವಪ್ಪ ಬೆಡಗಲ್ಲ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.