ಕಾಂಗ್ರೆಸ್ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ಹೊಳೆಆಲೂರ, ಮೇ 9
ನರಗುಂದ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್ ಗೆದ್ದ ಹಿನ್ನೆಲೆಯಲ್ಲಿ ಬುಧವಾರ ಹೊಳೆಆಲೂರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದರು.
ಬಣ್ಣಗಳಲ್ಲಿ ಮಿಂದೆದ್ದ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಮೆರವಣಿಗೆ ಆರಂಭಿಸಿದರು. ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಎಚ್ಚರೇಶ್ವರ ಗುಡಿ ತಲುಪಿ, ಆಲೂರ ವೆಂಕಟರಾಯರ ವೃತ್ತದಲ್ಲಿ ಮೆರವಣಿಗೆ ಸಮಾಪ್ತವಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫಕ್ರುಸಾಬ ಚಿಕ್ಕಮಣ್ಣೂರ ಮಾತನಾಡಿ, ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಕ್ಷದ ಮಡಿಲಿಗೆ ಬಂದಿದೆ. ಇದಕ್ಕೆ ಯಾವಗಲ್ ಅವರ ಅವಿರತ ಸಂಘಟನೆ, ಗೆಲ್ಲಲೇಬೇಕೆಂಬ ಹಠ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಶ್ರಮ, ಉತ್ಸುಕತೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ಯಾವಗಲ್ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಬಸವೇಶ್ವರ ಸಂಘದ ಪದಾಧಿಕಾರಿಗಳು 101 ತೆಂಗಿನಕಾಯಿ ಒಡೆದು ಸಂಭ್ರಮಿಸಿದರು. ಕಾಂಗ್ರೆಸ್ ಮುಖಂಡ ಮಲ್ಲಣ್ಣ ಕೋಳೇರಿ, ಡಿ.ಎಸ್. ಶೆಲ್ಲಿಕೇರಿ, ಮಲ್ಲಪ್ಪ ಸಜ್ಜನರ, ಫಕ್ರುಸಾಬ ಚಿಕ್ಕಮಣ್ಣೂರ, ಬಾಪೂಜಿ ಗದ್ದಿನ, ಬಸವರಾಜ ಬೀರನೂರ, ಶೇಖಣ್ಣ ಕೋಳೇರಿ, ಮಲ್ಲು ಗಾಣಿಗೇರ, ಬಸವರಾಜ ಸಜ್ಜನರ, ಮಹಾಂತೇಶ ಪಾಟೀಲ, ಮುತ್ತಣ್ಣ ಸಂಗಳದ, ಬಸವರಾಜ ಪಾಟೀಲ, ಶರಣಪ್ಪ ಉಮಚಗಿ, ಶರಣಪ್ಪ ಸಜ್ಜನರ, ರವಿ ಗಾಣಿಗೇರ, ಶರಣಪ್ಪ ಅಮಾತ್ಯಗೌಡ್ರ, ನಾಸೀರ ಅನಸಾರಿ, ಮಕ್ತುಂ ಚಿಕ್ಕಮಣ್ಣೂರ, ಯಮನೂರ ನದಾಫ, ಫಕ್ರುಸಾಬ ಅನಸೇರಿ, ಶಶಿ ಭಿಕ್ಷಾವತಿಮಠ, ಅಬ್ದುಲ್ಸಾಬ ಮನಿಯಾರ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

