ಮತದಾರರಿಂದ ತಕ್ಕ ಫಾಠ: ಆರಗಿದ್ದಿ
ಗಜೇಂದ್ರಗಡ: ರೋಣ ಮತಕ್ಷೇತ್ರದಲ್ಲಿ ಈ ಬಾರಿಯೂ ಗೆಲುವು ನನ್ನದೆ, ಜತೆಗೆ ಹ್ಯಾಟ್ರಿಕ್ ಗೆಲುವು ಸಾಧಿಸುತ್ತೇನೆಂದು ಬೀಗುತ್ತಿದ್ದ ಕಳಕಪ್ಪ ಬಂಡಿಯ ದುರಹಂಕಾರದ ಮಾತಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುಭಾನಸಾಬ ಆರಗಿದ್ದಿ ಹೇಳಿದರು.
ಅವರು ಬುಧವಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಮೂಲಕ ಸಚಿವ ಕಳಕಪ್ಪ ಬಂಡಿ ಗೋಲ್ಮಾಲ್ ಮಾಡಿರುವ ಕೋಟ್ಯಂತರ ಅನುದಾನ ಹೂರಣವನ್ನು ಶೀಘ್ರದಲ್ಲೇ ಬಯಲಿಗೆ ಎಳೆಯುತ್ತೇವೆ. ಸಾರ್ವಜನಿಕರು ಪಾವತಿಸಿದ ಹಣವನ್ನು ಲಪಾಟಾಯಿಸಿರುವುದು ಭಹಿರಂಗ ಸತ್ಯವಾಗಿದೆ. ಅದನ್ನು ತನಿಖೆಗೆ ಒಳ ಪಡಿಸಲು ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು.
9 ವರ್ಷದಿಂದ ಸಚಿವ ಕಳಕಪ್ಪ ಬಂಡಿಯ ಏಕ ಚಕ್ರಾಧಿಪತ್ಯದಿಂದ ಹೊರಬಂದ ಕ್ಷೇತ್ರದ ಜನತೆಗೆ ನೆಮ್ಮದಿಯ ಜೀವನ ಸಾಗಿಸಲು ಕಾಂಗ್ರೆಸ್ ಪಕ್ಷ ಜನ ಸೇವೆಗಾಗಿ ಸದಾ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ರೋಣ ಮತಕ್ಷೇತ್ರದಲ್ಲಿ ಜನಪರ, ಅಭಿವೃದ್ಧಿ ಪರ, ಬಡವರ, ರೈತರ ಪರ, ಹಲವಾರು ಕಾರ್ಯಗಳನ್ನು ಮಾಡುವ ಮೂಲಕ ರೋಣ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯ ಕ್ಷೇತ್ರವನ್ನಾಗಿಸುವ ಕನಸು ಕಂಡ ನೂತನ ಶಾಸಕ ಜಿ.ಎಸ್. ಪಾಟೀಲರ ಆಸೆಗೆ ಕ್ಷೇತ್ರದ ಜನತೆಯೂ ಸಹಕಾರ ನೀಡಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

