ಗದಗ

ಔಷಧಿ ಅಂಗಡಿಗಳು ಬಂದ್

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 11
ಎಐಓಸಿಡಿ ಅವರ ಆದೇಶದ ಮೇರೆಗೆ ಮುಂಡರಗಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಶುಕ್ರವಾರ ತಾಲೂಕಿನ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, 20 ವರ್ಷಗಳ ಹಿಂದೆ ನಿಗದಿಪಡಿಸಿರುವ ಔಷಧಿ ವ್ಯಾಪಾರಸ್ಥರ ಲಾಭಾಂಶ ಕಡಿತಗೊಳಿಸುವ ಕುರಿತು 2013ರಲ್ಲಿ ತಿದ್ದುಪಡಿಗೆ ಸೂಚಿಸಲಾಗಿರುವ ಲಾಭಾಂಶ ಕಡಿತಗೊಳಿಸಲಾರದೆ ಈಗಿದ್ದ ಹಾಗೇಯೇ ಮುಂದುವರಿಸಬೇಕು. ಔಷಧಿ ವ್ಯಾಪಾರದಲ್ಲಿನ ನಿರತರಾಗಬೇಕಿದ್ದ ಔಷಧಿ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುತ್ತಿರುವ ಪಾಲುದಾರ ಅಥವಾ ಮಾಲಕನಿಗೆ ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯಲ್ಲಿ ಔಷಧಿ ಮಾರಾಟಕ್ಕೆ ಮನ್ನಣೆ ನೀಡುವುದು. ಔಷಧ ಮತ್ತು ಕಾಂತಿವರ್ಧಕ ಕಾಯ್ದೆ 1940ರ ಕಲಂ 19ರ ಉಲ್ಲಂಘನೆಗೆ ಔಷಧಿ ಮಾರಾಟಗಾರ ತಾನು ಖರೀದಿಸಿದ್ದ ಮತ್ತು ದಾಸ್ತಾನು ಮಾಡಿದ ದಾಖಲೆ ಹೊಂದಿರುವುದನ್ನು ಪರಿಶೀಲಿಸಿ ಆತನನ್ನು ಆರೋಪಿಯನ್ನಾಗಿ ಮಾಡುವ ಬದಲು ಆತನು ತಪ್ಪಿತಸ್ಥ ಎಂಬುದು ಪುರಾವೆ ಹಾಗೂ ಅವರಿಗೆ ಶಿಕ್ಷಾರ್ಹ ಕಲಂಗಳ ಜಾರಿಯನ್ನು ಹಿಂದೆಪಡೆಯಬೇಕು. ಔಷಧಿ ವಿತರಣೆಯಲ್ಲಿ ದೇಶದಲ್ಲಿ 25 ಲಕ್ಷ ಕುಟುಂಬದವರು ನಿರತರಾಗಿದ್ದರಿಂದ ಔಷಧಿಯ ವಹಿವಾಟನ್ನು ವಿದೇಶಿ ಹಣದ ಹೂಡಿಕೆಯಿಂದ ಮುಕ್ತಗೊಳಿಸಬೇಕು ಎನ್ನುವ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಸತೀಶ ಕುಲಕರ್ಣಿ, ಮಹಾವೀರಕುಮಾರ  ಜೈನ್, ಶರಣಪ್ಪ ಕಲ್ಲೂರ, ಶಶಿಕುಮಾರ ಕಲ್ಲಕುಟಗರ್, ಹನಮಂತಪ್ಪ ಅಬ್ಬಿಗೇರಿ, ಜಗನ್ನಾಥ ಅಳವಂಡಿ, ರಾಜೇಂದ್ರ ನಡವಿ, ಬಿ.ಎಸ್. ಗಿಂಡಿಮಠ, ಮಲ್ಲನಗೌಡ ಪಾಟೀಲ, ವೀರಭದ್ರಪ್ಪ ಮೇಟಿ, ಹನುಮಂತ ಕಾಟ್ರಹಳ್ಳಿ, ಎನ್.ವೈ. ಗೌಡರ, ರಮೇಶ  ಸಂಪಗಿ, ಆರ್.ವಿ. ಪಾಟೀಲ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.