ಗದಗ

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು: ವಿಜಯೋತ್ಸವ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 11
ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯಶಾಲಿಯಾಗಿದ್ದು, ಅದರಲ್ಲಿ ಎಚ್.ಕೆ. ಪಾಟೀಲರು ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಈಚೆಗೆ ಯುವ ಕಾಂಗ್ರೆಸ್ ಸಮಿತಿ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಗದಗ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅಶೋಕ ಮಂದಾಲಿ. ಕೆಪಿಸಿಸಿ ಅಲ್ಪಸಂಖ್ಯಾತರ ಜಂಟಿ ಕಾರ್ಯದರ್ಶಿ ಉಮರಫಾರುಕ ಹುಬ್ಬಳ್ಳಿ, ಎಪಿಎಂಸಿ ಉಪಾಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ಅಸ್ಲಂ ನರೇಗಲ್, ಗದಗ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕರೀಂಸಾಬ ಸುಣಗಾರ, ಚಾಂದ ಕೊಟ್ಟೂರ, ಜಾವೇದ ಸುಂಕದ, ರಿಯಾಜ ಅಹ್ಮದ ಈಟಿ, ಶಂಭು ಕೊಳೂರ, ಶಮೀರ ಚಟ್ನಾಳ, ಸರಫರಾಜ ಬಬರ್ಚಿ, ರಫೀಕ ಇನಾಂದಾರ, ಮುಸ್ತಾಕ ದೊಡ್ಡಮನಿ, ಖಾನಸಾಬ ಬಳ್ಳಾರಿ, ಜಬಿ ಬಬರ್ಚಿ, ಮುನ್ನಾ ರೇಶ್ಮಿ, ಜಹಾಂಗೀರ ಮುಳಗುಂದ, ಅಬ್ಬಾಸ ಬಾಗಲಕೋಟ, ಸುಧೀರ ಶಿವಪೂರ, ರವಿ ದೊಡ್ಡಮನಿ, ರಜಾಕ ಶಿರಹಟ್ಟಿ, ಗೌಸ ದಾದಾಪೀರ, ಅಬ್ದುಲ್ಲಾ ಕೊಟ್ಟೂರ, ಮಂಜುನಾಥ ದಾಮೋದರ, ರಿಯಾಜ ಬಬರ್ಚಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.