ಗದಗ

ಎಸ್‌ಎಸ್‌ಎಲ್‌ಸಿ: ಶೇ. 97 ಫಲಿತಾಂಶ

Published On :

ಮುಂಡರಗಿ:  ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 97 ರಷ್ಟಾಗಿದೆ. ಶಾಲೆಯ 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂವರು ಉನ್ನತ ದರ್ಜೆಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 9 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀಲಕ್ಷ್ಮಿ ರಿತ್ತಿ ಶೇ 89, ಮೇಘಾ ಅಬ್ಬಿಗೇರಿ ಶೇ 87, ಅಮೀರ ಖತೀಬ್ ಶೇ 85ರಷ್ಟು ಅಂಕ ಪಡೆದು ಕ್ರಮವಾಗಿ ಪ್ರಥಮ ದ್ವೀತಿಯ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮಿಗಳು, ಬಿಇಒ ಎಂ.ಎ. ರಡ್ಡೇರ ಮುಖ್ಯ ಶಿಕ್ಷಕಿ ಜೆ.ಎಸ್.ನಾರ್ಸಿ ಅಭಿನಂದಿಸಿದ್ದಾರೆ.

ರೋಟರಿ ಶಾಲೆ: ಶೇ. 96 ಫಲಿತಾಂಶ
ಮುಂಡರಗಿ: ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ. ಲಿಂಬಿಕಾಯಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇಕಡಾ 96 ರಷ್ಟಾಗಿದೆ. ಶಿಲ್ಪಾ ಅಲ್ಲಿಪುರ 550 ಅಂಕ ಪಡೆದು ಶೇ 88, ಸುಷ್ಮಾ ಅಂಗಡಿ 541 ಅಂಕಗಳನ್ನು ಪಡೆದು ಶೇ 86.56, ಉಮಾ ಶೀರಿ 531 ಅಂಕಗಳನ್ನು ಪಡೆದು ಶೇ 84.96 ಗಳಿಸಿದ್ದಾಳೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕೊಟ್ರೇಶ ಅಂಗಡಿ, ಮುಖ್ಯೋಪಾಧ್ಯಾಯ ಸಿ.ವಿ. ಪಾಟೀಲ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಬರದೂರ ಪ್ರೌಢಶಾಲೆ ಶೇ. 98.66 ಫಲಿತಾಂಶ
ಮುಂಡರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಬರದೂರ ಗ್ರಾಮದ ಎನ್.ಎನ್. ಗೋಡಿ ಸರ್ಕಾರಿ ಪ್ರೌಢಶಾಲೆಯು ಶೇ 98.66 ರಷ್ಟು ಫಲಿತಾಂಶ ಪಡೆದಿದೆ. ರೂಪಾ ತಿಪ್ಪಶೆಟ್ಟಿ 560 ಅಂಕಗಳಿಸಿ ಪ್ರಥಮ, ವಿಜಯಲಕ್ಷ್ಮಿ ಪಾಟೀಲ 559 ದ್ವಿತೀಯ, ಮಲ್ಲಮ್ಮ ಕೋಣನವರ 557 ತೃತೀಯ ಸ್ಥಾನ ಪಡೆದಿದ್ದಾಳೆ. ಒಟ್ಟು 75 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ: ಶೇ. 84.40 ಫಲಿತಾಂಶ
ಮುಂಡರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ  ಜ.ಅ. ವಿದ್ಯಾ ಸಮಿತಿಯ ಮಹಾಬಳೇಶ್ವರಪ್ಪ ಶಿವಲಿಂಗಪ್ಪ ಡಂಬಳ ಹೆಣ್ಣು ಮಕ್ಕಳ ಪ್ರೌಢಶಾಲೆಯು ಶೇ 84.40 ರಷ್ಟು ಫಲಿತಾಂಶ ಗಳಿಸಿದೆ. ನಮ್ರತಾ ಮುಂಡರಗಿ 575 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಪ್ರಗತಿ ಚೂರಿ 572 ಅಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಪುಷ್ಪಾ ಅಂಗಡಿ 565 ಅಂಕಗಳನ್ನು, ಶ್ವೇತಾ ಕುರುಡಗಿ 532 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಇಂದು ಸಾಯಿಬಾಬಾ ವಾರ್ಷಿಕೋತ್ಸವ
ಗದಗ: ನಗರದ ಹಾತಲಗೇರಿ ನಾಕಾದ ಶ್ರೀಸಾಯಿ ಬಡಾವಣೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದ 6ನೇ ವಾಷಿಕೋತ್ಸವವು ಮೇ 13ರಂದು ಜರುಗಲಿದೆ. ಬೆಳಗ್ಗೆ 5.30 ರಿಂದ 9 ಗಂಟೆಯವರೆಗೆ ಕಾಕಡಾರತಿ, ಬಾಬಾ ಮೂರ್ತಿಗೆ ಮಂಗಲ ಸ್ನಾನ, ರುದ್ರಾಭಿಷೇಕ, 9.30 ಗಂಟೆಯಿಂದ 12 ಗಂಟೆಯವರೆಗೆ ಪುಷ್ಪಾರ್ಚನೆ, 12ಕ್ಕೆ ಪಂಚಾರತಿ ನಂತರ ತೀರ್ಥ ಪ್ರಸಾದ ವಿತರಣೆ, ಸಂಜೆ ಸೂರ್ಯಾಸ್ತಕ್ಕೆ ದೂಪಾರತಿ 7ಕ್ಕೆ ಆಕಾಶವಾಣಿ ಕಲಾವಿದ ಶ್ರೀಕಾಂತ ಬಾಕಳೆ ಅವರಿಂದ ಸಂಗೀತ ಸೇವೆ, ರಾತ್ರಿ 9 ಗಂಟೆಗೆ ಪಲ್ಲಕ್ಕಿ ಸೇವೆ ನಂತರ 10 ಗಂಟೆಗೆ ಶೇಜಾರತಿಯೊಂದಿಗೆ ಮಂಗಲ ಜರುಗಲಿದೆ ಎಂದು ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಐ.ಕೆ. ಬಲೂಚಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುರಹಟ್ಟಿಯಲ್ಲಿ ಇಂದು ಸಾಮೂಹಿಕ ವಿವಾಹ
ರೋಣ: ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 13ರ ಮಧ್ಯಾಹ್ನ 12.22ಕ್ಕೆ ಸಾಮೂಹಿಕ ವಿವಾಹ ಕಾಯಕ್ರಮ ಜರುಗಲಿದೆ. ಮೇ 14 ರಂದು ಸಂಜೆ 5 ಗಂಟೆಗೆ ಲಘು ರಥೋತ್ಸವ ಜರುಗುವುದು. ಜಾತ್ರಾ ನಿಮಿತ್ತ ಜರುಗುವ ವಿವಿಧ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶಿವಲಿಂಗಪ್ಪ ದೇಸಾಯಿ ವಹಿಸುವರು. ಕೊತಬಾಳ ಅಡವಿಸಿದ್ಧೇಶ್ವರ ಸಂಸ್ಥಾನ ಮಠದ ಗಂಗಾಧರೇಶ್ವರ ಸ್ವಾಮಿಗಳು, ಬೆನಹಾಳದ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಾತ್ರಾಮಹೋತ್ಸವ ಅಂಗವಾಗಿ ಬಾವಿ ಬಸವೇಶ್ವರ ನಾಟ್ಯ ಸಂಘ ಇವರುಗಳ ಆಶ್ರಯದಲ್ಲಿ ಬಡವ ಸಾಕಿದ ಬಹದ್ದೂರ ಹುಲಿ ಎಂಬ ಸಾಮಾಜಿಕ ನಾಟಕವು ಮೇ 14 ರಂದು ರಾತ್ರಿ 10.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಮಾರುತೇಶ್ವರ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ನೀರು ಪೂರೈಕೆ ಮಾಹಿತಿ
ಗದಗ: ನಗರದ ಪಿ ಮತ್ತು ಟಿ ಕ್ವಾರ್ಟರ್ಸ್ ಹಾಗೂ ಕಳಸಾಪುರ ರಸ್ತೆಯ ಕೆಲವು ಭಾಗಗಳಲ್ಲಿ ಸೋಮವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.