ಗದಗ

ಶಾಲೆ ಆವರಣದಲ್ಲಿ ಆಸ್ಪತ್ರೆ ತ್ಯಾಜ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 12
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಅಗತ್ಯ. ಶಾಲೆ-ಕಾಲೇಜುಗಳಲ್ಲಿ ಆರೋಗ್ಯಪೂರ್ಣ ವಾತಾವರಣ ಇರುವುದು ಅತಿ ಮುಖ್ಯ. ಆದರೆ, ಇಲ್ಲೊಂದು ಶಾಲೆ ಆಟದ ಮೈದಾನಕ್ಕೆ ಆಸ್ಪತ್ರೆಯ ಮಲಿನ ನೀರು ಹರಿದು ಬರುತ್ತಿರುವುದು ವಿಪರ್ಯಾಸ.
ಗದುಗಿನ ಮಧ್ಯವರ್ತಿ ಸ್ಥಳದಲ್ಲಿರುವ ವಿದ್ಯಾದಾನ ಸಮಿತಿಯ ಆವರಣಕ್ಕೆ ಹೊಂದಿಕೊಂಡು ಸರ್ಕಾರಿ ಹೆರಿಗೆ ಆಸ್ಪತ್ರೆ ಇದೆ. ಆಸ್ಪತ್ರೆಯ ಕಲುಷಿತ ನೀರು ಕಾಂಪೌಂಡ್ ಗೋಡೆಯಲ್ಲಿ ಬಸಿದು ವಿದ್ಯಾದಾನ ಸಮಿತಿಯ ಆವರಣದಲ್ಲಿ ಸಂಗ್ರಹವಾಗಿ, ಆಟದ ಮೈದಾನ ಹೊಂಡದಂತಾಗಿದೆ.
ಈ ಕೊಳಚೆ ನೀರಿನಲ್ಲಿ ಹಂದಿಗಳು ಸುಖವಾಗಿ ಈಜಾಡುತ್ತವೆ. ಮಹಿಳೆಯರು, ಮಕ್ಕಳು, ಪಾಲಕರು, ಶಿಕ್ಷಣ ಸಂಸ್ಥೆ ಹಾಗೂ ಇತರ ಕಚೇರಿ ಅಧಿಕಾರಿಗಳು ಇಲ್ಲಿಂದಲೇ ವಿದ್ಯಾದಾನ ಸಮಿತಿಯ ಶಿಕ್ಷಣ ಸಂಸ್ಥೆಗಳಿಗೆ ಹೋಗಬೇಕು. ಆದರೆ, ಈ ದುರ್ನಾತದ ನೀರನ್ನು ದಾಟಿಕೊಂಡು ಹೋಗುವುದೇ ದೊಡ್ಡ ಸಾಹಸ. ಈ ವಾತಾವರಣ ಅನೇಕ ರೋಗ-ರುಜಿನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಸಮಸ್ಯೆ ಕುರಿತು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಹಲವಾರು ಬಾರಿ ಪತ್ರ ಬರೆದು ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎನ್ನುವುದು ಶಾಲೆ ಆಡಳಿತ ಮಂಡಳಿಯ ಹೇಳಿಕೆ. ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ವರ್ಗ ಮತ್ತು ಎಲ್ಲ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳು ಹೋರಾಟ ಆರಂಭಿಸುವ ಮೊದಲು ಗದಗ-ಬೆಟಗೇರಿ ನಗರಸಭೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬುದು ಶಾಲೆ ಆಡಳಿತ ಮಂಡಳಿ ಆಗ್ರಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.