ಕರಮುಡಿ: ಇಂದು ಜಾತ್ರಾಮಹೋತ್ಸವ
ಹೊಳೆಆಲೂರ: ಸಮೀಪದ ಕರಮುಡಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾಮಹೋತ್ಸವ ಮೇ 13ರಂದು ನಡೆಯಲಿದೆ. ಬೆಳಗ್ಗೆ 6ಕ್ಕೆ ಈರಯ್ಯ ಹಿರೇಮಠರ ಸಾನ್ನಿಧ್ಯದಲ್ಲಿ ಬೀರಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ 12.15ಕ್ಕೆ ಶ್ರೀಗಳ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹಗಳು ನೆರವೇರಲಿವೆ. ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ, ಮಧ್ಯಾಹ್ನ 3ಕ್ಕೆ ಪಾಲಕಿ ಉತ್ಸವ ಜರುಗಲಿದೆ. ಮೇ 14 ರಂದು ಬೆಳಗ್ಗೆ 8ಕ್ಕೆ 2 ಹಲ್ಲಿನ ಟಗರಿನ ಕಾಳಗ ಮತ್ತು ಓಪನ್ ಟಗರಿನ ಕಾಳಗ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9164381339, 9731696091, 9611385503, 8105169799 ಗೆ ಸಂಪರ್ಕಿಸಬಹುದು.
ನಾಳೆ ಉಪನ್ಯಾಸ ಕಾರ್ಯಕ್ರಮ
ಗದಗ: ಗದಗ ತಾಲೂಕು ಸರ್ಕಾರಿ ಲಿಂಗವಂತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೇ 14ರಂದು ಬೆಳಗ್ಗೆ 10.30ಕ್ಕೆ ಗದುಗಿನ ಸಂಭಾಪುರ ರಸ್ತೆಯ ಕಾಶೀ ವೈದಿಕ ಪಾಠಶಾಲೆಯ ಸಭಾಂಗಣದಲ್ಲಿ ಬಸವ ಜಯಂತಿ ನಿಮಿತ್ತ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಅತಿಥಿ ಉಪನ್ಯಾಸಕರಾಗಿ ಆಗಮಿಸುವ ಹೊಂಬಳದ ಸ.ಪ.ಪೂ ಕಾಲೇಜಿನ ಪ್ರೊ. ಎಸ್.ಎನ್. ಆದಿ ಬಸವಣ್ಣನವರ ವಚನಗಳ ಮಾರ್ಮಿಕತೆ ಕುರಿತು ಮಾತನಾಡುವರು. ಸಂಘದ ಅಧ್ಯಕ್ಷ ಎಸ್.ಎಂ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಸಹ ಕಾರ್ಯದರ್ಶಿ ಪಿ. ಗೊಡಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

