ಗದಗ

ಸಂಭ್ರಮಾಚರಣೆ

Published On :

ಗದಗ: ಸಿದ್ದರಾಮಯ್ಯ ಸೋಮವಾರ ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಡಂಬಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಿದ್ದರಾಮಯ್ಯ ಪರ ಜಯ ಘೋಷಣೆಗಳನ್ನು ಕೂಗಿ, ಸಿಹಿ ಹಂಚಿ, ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಾಚರಿಸಿದರು. ಡಂಬಳದ ತೋಂಟದಾರ್ಯ ಮಠದಿಂದ ಆರಂಭಗೊಂಡು ಸಿಎಂ ಸಿದ್ದರಾಮಯ್ಯ ಭಾವಚಿತ್ರ ಮೆರವಣಿಗೆ ನಗರದ ಅಶೋಕ ವೃತ್ತ, ಚವಡಿ ವೃತ್ತ, ಮೈಲಾರಲಿಂಗೇಶ್ವರ ದೇವಸ್ಥಾನ, ಹಾಲೇಶ್ವರ ದೇವಸ್ಥಾನ, ಬಜಾರ ರಸ್ತೆ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ವಿವಿಧ ವಾದ್ಯಗಳ ಅದ್ದೂರಿ ಮೆರವಣಿಗೆ ಜರುಗಿತು. ಜಿ.ಆರ್. ಸೊರಟೂರ, ಸೋಮಣ್ಣ ಗುಡ್ಡದ, ಬಸವರಾಜ ಪೂಜಾರ, ಗ್ರಾಪಂ ಮಾಜಿ ಅಧ್ಯಕ್ಷ ಮಹ್ಮದಗೌಸ್ ತಾಂಬೋಟಿ, ಸಿ.ಟಿ. ಪ್ಯಾಟಿ, ಶಂಕ್ರಪ್ಪ ಡೊಳ್ಳಿನ, ಹನುಮವ್ವ ಕರಿಗಾರ, ರಾಜಬಿ ಮನಿಯಾರ ಮುಂತಾದವರು ಪಾಲ್ಗೊಂಡಿದ್ದರು.
ನಾಳೆ ಕಸಾಪ ಸಭೆ
ಗದಗ: ಮೇ 16ರ ಸಂಜೆ 5 ಗಂಟೆಗೆ ನಗರದ ಗಾಂಧಿ ವೃತ್ತದ ಬಳಿ ಇರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಸರ್ವ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಗದಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು.   ಅಧ್ಯಕ್ಷತೆಯನ್ನು ತಾಲೂಕಾ ಘಟಕದ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ವಹಿಸುವರು. ಜಿಲ್ಲಾ ಅಧ್ಯಕ್ಷ ಶಿವಣ್ಣ ಕುರಿ ಉಪಸ್ಥಿತರಿರುವರು.  ಸಭೆಗೆ ಗದಗ ತಾಲೂಕಾ ಕಸಾಪದ ಸರ್ವ ಪದಾಧಿಕಾರಿಗಳು ತಪ್ಪದೇ ಹಾಜರಿರಬೇಕು ಎಂದು ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ಪ್ರಕಟಣೆಯ ಮೂಲಕ ಕೋರಿದ್ದಾರೆ.
ಇಂದು ಶಿವಾನುಭವ
ಗದಗ
: ನಗರದ ಹಾಲಕೆರೆ ಆನಂದಾಶ್ರಮದಲ್ಲಿ ಮೇ 15ರ ಸಂಜೆ 6.30ಗಂಟೆಗೆ ಶಿವಾನುಭವ ಸಂಪದ-98 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿನವ ಅನ್ನದಾನ ಶ್ರೀಗಳು ಸಾನ್ನಿಧ್ಯ ವಹಿಸುವರು. ಪ್ರೊ. ಎಚ್.ಎಸ್. ಬಸವರಾಜ ಅವರು ಜಾನಪದ ಮತ್ತು ವಚನ ಸಾಹಿತ್ಯ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡುವರು. ಅತಿಥಿಗಳಾಗಿ ಎಸ್.ಎನ್. ಕಾಳೆ ಆಗಮಿಸುವರು. ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸುವರು. ಎಸ್.ಕೆ. ಪುಲಾರಿ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ಜರುಗುವುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಇಂದು ಕಳಸಾರೋಹಣ
ಗದಗ:
ತಾಲೂಕಿನ ಕೋಟುಮಚಗಿ ಗ್ರಾಮದ ಗ್ರಾಮ ದೇವತೆ ದೇವಸ್ಥಾನದ ಕಳಸಾರೋಹಣ ಹಾಗೂ ಮಹಾ ಗಣಪತಿ ಪೂಜೆಯು ಮೇ 15ರ ಬೆಳಗ್ಗೆ 5 ಗಂಟೆಗೆ ಜರುಗಲಿದೆ. ಸಾನ್ನಿಧ್ಯವನ್ನು ಜಿಗಳೂರಿನ ಆಡಿ ಸಂಸ್ಥಾನಮಠದ ಸಿದ್ಧೇಶ್ವರ ಶ್ರೀಗಳು, ನವಲಗುಂದದ ಅಜಾತನಾಗಲಿಂಗ ಶ್ರೀಗಳ ಮಠದ ವೀರಯ್ಯ ಶ್ರೀಗಳು, ಹರ್ಲಾಪುರದ ಗುರುಮೌನ ಚಿದಾನಂದಪ್ಪಜ್ಜನ ಮಠದ ಮುತ್ತಪ್ಪಜ್ಜನವರು ವಹಿಸುವರು. ಗಿಣಗೇರಾ, ಗದಗ, ಹುಬ್ಬಳ್ಳಿ ಹಾಗೂ ಹೊಸಪೇಟಿಯ ವಿವಿಧ ಆಚಾರ್ಯರುಗಳ ಪೌರೋಹಿತ್ಯದಲ್ಲಿ ದೇವತಾ ಪೂಜೆ, ಹೋಮ, ಚಂಡಿ ಹೋಮ, ಸಂಕ್ಷಿಪ್ತ ಪೂರ್ಣಾಹುತಿ, ದಾನ್ಯಾಧಿವಾಸ ಹಾಗೂ ಮಂಗಳಾರತಿ ನಡೆಯುವುದು. ಸಂಜೆ 5ಕ್ಕೆ ಧರ್ಮ ಸಭೆ ಜರುಗಲಿದ್ದು, ಸಿದ್ದೇಶ್ವರ ಶ್ರೀಗಳು, ಮುತ್ತಪ್ಪಜ್ಜನವರು ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಅಭಿಯಂತರ ಸಿ.ಎ. ಹಳ್ಳಿಗುಡಿ ವಹಿಸುವರು. ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ ಆಗಮಿಸುವರು. ಅನಿಲ ಮೆಣಸಿನಕಾಯಿ, ಮಂಜುನಾಥ ಅಬ್ಬಿಗೇರಿ, ರಾಜೀವ ಕಿದಿಯೂರ, ಸಂಗಣ್ಣ ಬಂಗಾರಶೆಟ್ರ ಉಪಸ್ಥಿತರಿರುವರು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಇಂದು 193ನೇ ಶಿವಾನುಭವ
ಗದಗ
: ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಜುಕ್ತಿ ಹಿರೇಮಠದಲ್ಲಿ ಉಮಾಪತಿ ಶಿವಾಚಾರ್ಯರ ಪುಣ್ಯಾರಾಧನೆಯ ಸುವರ್ಣ ಮಹೋತ್ಸವದ ಅಂಗವಾಗಿ 193ನೇ ಶಿವಾನುಭವ ಕಾರ್ಯಕ್ರಮವನ್ನು ಮೇ 15ರ ರಾತ್ರಿ 8 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ವಹಿಸುವರು. ಕದಾಂಪುರದ ಚರಮೂರ್ತಿಸ್ವಾಮಿ ಹಿರೇಮಠ ಅವರಿಂದ ಶಿವಕಿರ್ತನೆ ಜರುಗಲಿದೆ. ಸರ್ವರೂ ಶಿವಾನುಭವದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.