ಎಲ್ಲ ವರ್ಗಕ್ಕೆ ಸೌಲಭ್ಯ
ಹಿರೇಕೆರೂರು: ತಾಲೂಕಿನ ಹಿರಿಯರ ಹಾಗೂ ದೈವ ಬಲದ ಆಶೀರ್ವಾದದಿಂದ ಅನೇಕ ವರ್ಷಗಳ ಬಳಿಕ ಶಾಸಕನಾಗಿದ್ದೇನೆ. ಸರ್ಕಾರದಿಂದ ಎಲ್ಲ ವರ್ಗದ ಜನತೆಗೆ ದೊರೆಯುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಮೂಲಕ ನನ್ನ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಶಾಸಕ ಸ್ಥಾನಕ್ಕಿಂತ ಜನತೆ ಪ್ರೀತಿ, ಅಭಿಮಾನ ಮುಖ್ಯ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ವಡೆಯನಪುರದ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಎಲ್ಲ ಗ್ರಾಮಗಳ ಸಂಪರ್ಕ ಇರುವುದರಿಂದ ಪ್ರತಿ ಗ್ರಾಮದಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಗ್ರಾಮಸ್ಥರು ಆ ಬಗ್ಗೆ ಗಮನಹರಿಸದಿದ್ದರೂ ನಾನೇ ಮೊದಲು ಅವುಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸುತ್ತೇನೆ. ನಿತ್ಯ ಜನತೆಗೆ ಲಭ್ಯವಾಗುವ ಉದ್ದೇಶದಿಂದ ಶೀಘ್ರದಲ್ಲಿ ಜನ ಸಂಪರ್ಕ ಕಾರ್ಯಾಲಯ ತೆರೆಯುತ್ತೇನೆ. ಜನತೆಗೆ ಯಾವುದೇ ಸಮಸ್ಯೆಗಳು ಎದುರಾದರೂ ನೇರವಾಗಿ ತಮ್ಮನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ತಾಪಂ ಸದಸ್ಯ ಬಸನಗೌಡ ಕಳ್ಳೇರ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಪ್ರಭು ಮಳವಳ್ಳಿ, ರವಿ ಚಿಂದಿ, ಗ್ರಾಪಂ ಸದಸ್ಯರಾದ ಬಸಲಿಂಗಪ್ಪ ಮಳವಳ್ಳಿ, ಪ್ರಕಾಶ ಒಡೆಯರಹಳ್ಳಿ, ಫಕೀರಪ್ಪ ಚಲವಾದಿ, ಬಸಲಿಂಗಪ್ಪ ಗದ್ದೇರ, ನಾಗಪ್ಪ ಮಳವಳ್ಳಿ, ಶೇಖಪ್ಪ ಬೊಗಸಮುದ್ರ, ರುದ್ರಪ್ಪ ಹೊಂಡದ, ಮಹೇಶ ಅಗಸನಹಳ್ಳಿ, ಈರಪ್ಪ ಮಡಿವಾಳರ ಹಾಗೂ ಗ್ರಾಮ ಮುಖಂಡರು ಹಾಜರಿದ್ದರು. ಕರಬಸಪ್ಪ ಮಳವಳ್ಳಿ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

