ಗದಗ

ಕಾಯಕ ಯೋಗಿಗಳಾಗಿರಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಮೇ 16
ಸಮಾಜದಲ್ಲಿ ಪ್ರತಿಯೊಂದು ಜೀವಿ ಸಮಾನತೆಯಿಂದ ಬದುಕಬೇಕು. ಪ್ರತಿಯೊಬ್ಬರೂ ಕಾಯಕ ಯೋಗಿಗಳಾಗಬೇಕೆಂದು ಶಿವಮೊಗ್ಗದ ಖ್ಯಾತ ಸಂಗೀತಗಾರ ಸಂಗಮೇಶ ಶಾಸ್ತ್ರಿ ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರಸ್ವಾಮಿ ವಿರಕ್ತಮಠದಲ್ಲಿ ಬಸವ ಜಯಂತಿ, ಹಾಗೂ 18ನೇ ವರ್ಷದ ಶ್ರೀ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರಾರಂಭೋತ್ಸವ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜಕ್ಕೆ ಕಂಠಕವಾಗಿರುವ ಜಾತಿ, ವರ್ಣ, ಲಿಂಗ ಭೇದ ಅಸಮಾನತೆ, ನಿರುದ್ಯೋಗ ಎಲ್ಲ ಸಮಸ್ಯೆಗಳನ್ನು ಬಸವಣ್ಣನವರು ಹಲವಾರು ವರ್ಷಗಳ ಹಿಂದೆಯೇ ಹೊಡೆದೊಡಿಸವ ಕಾರ್ಯ ಮಾಡಿದ್ದಾರೆ ಎಂದರು. ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣವರು ಒಂದು ಧರ್ಮ, ಒಬ್ಬ ವ್ಯಕ್ತಿಯ ಅಭಿವೃದ್ಧಿಯನ್ನು ಸಹಿಸದೆ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದರು ಎಂದರು.
ಈ ಸಂದರ್ಭದಲ್ಲಿ ಹಿರೇಮಣ್ಣೂರಿನ ವಿರೂಪಾಕ್ಷಯ್ಯ ಶಾಸ್ತ್ರಿಗಳು, ಶಿವಯ್ಯ ಹಿರೇಮಠ, ಗದಗೆಪ್ಪ ಹಾನಗಲ್ಲ, ಧರ್ಮರಾಜಪ್ಪ ತೆಗ್ಗಿನಮನಿ, ಬಸಪ್ಪ ಐನಾಪುರ, ಭೀರಪ್ಪ ಹಾದಿಮನಿ, ಬಸಪ್ಪ ಬದ್ನೂರ, ಬಸಪ್ಪ.ರಾ. ಐನಾಪುರ, ರಾಮಣ್ಣ ಅಪೋಜಿ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.