ನಾಳೆ ವೀರಭದ್ರೇಶ್ವರ ರಥೋತ್ಸವ
ಕನ್ನಡಪ್ರಭ ವಾರ್ತೆ, ರೋಣ, ಮೇ 16
ರೋಣ ಪಟ್ಟಣದ ಆರಾಧ್ಯ ದೇವ ವೀರಭದ್ರೆಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಮೇ 18ರಂದು ಶನಿವಾರ ಸಂಜೆ 6ಕ್ಕೆ ಜರುಗಲಿದೆ. ರಥೋತ್ಸವ ನಿಮಿತ್ತವಾಗಿ ಬೆಳಗ್ಗೆ ಗುಗ್ಗಳ ಮೆರವಣಿಗೆ ಜರುಗಲಿದೆ. ಮೇ 22ರಂದು ಕಳಸ ವಿಸರ್ಜನೆ (ಕಂಕಣ ಬಿಚ್ಚುವದು) ನಡೆಯುವುದು.
ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ರೋಣ ಪಟ್ಟಣವನ್ನು ಈ ಹಿಂದೆ ದ್ರೋಣಾಪುರವೆಂದು ಕರೆಯಲಾಗುತ್ತಿತ್ತು. ಕಾಲ ಕ್ರಮೇಣ ರೋಣ ಎಂಬ ಪದನಾಪಕ್ಕೆ ತಿರುಗಿತು. ದ್ವಾಪರ ಯುಗದಲ್ಲಿ ಆಚಾರ್ಯ ದ್ರೋಣಾಚಾರ್ಯರು ಇಲ್ಲಿ ನೆಲೆಸಿರುವರೆಂದು ಪುರಾಣಗಳಿಂದ ತಿಳಿದುಬರುತ್ತದೆ. ರೋಣ ಪಟ್ಟಣವು ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂಬುದಕ್ಕೆ ಇಲ್ಲಿ ಪ್ರಾಚೀನ ಕಾಲದ ಅನೇಕ ದೇಗುಲಗಳನ್ನು ಕಾಣಬಹುದಾಗಿದೆ.
ಸಣ್ಣದಿದ್ದ ದೇವಸ್ಥಾನವು 1969ರಲ್ಲಿ ವೀರಭದ್ರೇಶ್ವರ ಟ್ರಸ್ಟ್ ಕಮೀಟಿ ಶ್ರಮ ಮತ್ತು ದಾನಿಗಳ ನೆರವಿನಿಂದ ವಿಶಾಲವಾದ ದೇವಸ್ಥಾನ ನಿರ್ಮಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ರಥೋತ್ಸವ ಜರುಗುತ್ತಾ ಬಂದಿದೆ. ಪಟ್ಟಣದಲ್ಲಿ ನೆಲೆ ನಿಂತ ವೀರಭದ್ರ ದೇವರಿಗೆ ಜನತೆ ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮೊದಲು ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. ಇಂದಿಗೂ ಪಟ್ಟಣದ ಕುಲಕರ್ಣಿಯವರ ಮನೆತನದವರು ವೀರಭದ್ರೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಜಾತ್ರಾ ಸಂದರ್ಭದಲ್ಲಿ 9 ದಿನಗಳ ವರೆಗೆ ನಂದಾದೀಪ ಬೆಳಗಿಸಲಾಗುತ್ತಿದೆ. ದೀಪದ ಪ್ರಕರತೆಯಂತೆ ಪಟ್ಟಣ ಕಂಗೊಳಿಸಲಿ ಎಂಬ ಸೇವಾ ಮನೊಧರ್ಮದಿಂದ ಆರಾಧ್ಯ ದೇವನಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ ಎಂದು ಟ್ರಸ್ಟ್ನ ಸದಸ್ಯರೊಬ್ಬರು ತಿಳಿಸಿದರು.
ರುದ್ರಾಭಿಷೇಕ, ಭಕ್ತರ ಮುಡುಪು, ಹರಕೆ ತಿರುಸಲು ಬಂದ ಭಕ್ತರಿಗೆ ತಂಗಲು, ಮದುವೆ, ಮುಂಜಿ, ಧಾರ್ಮಿಕ ಚಿಂತನಗೊಷ್ಠಿ ಮುಂತಾದ ಕಾರ್ಯಕ್ರಮಕ್ಕೆ ಬಂದ ದೇಣಿಗಿಯಿಂದ ಅಕ್ಕಮಹಾದೇವಿ ಮಹಾಮನೆ ಹಾಗೂ ವೀರಭದ್ರೇಶ್ವರ ಕಲ್ಯಾಣ ಮಂಟಪವನ್ನು ವೀರಭದ್ರೇಶ್ವರ ಟ್ರಸ್ಟ್ ಕಮೀಟಿ ನಿರ್ಮಿಸಿದೆ. ಜಾತ್ರಾ ನಿಮಿತ್ತ ಮೇ 18ರಿಂದ ಮೇ 22ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ವೀರಭದ್ರೇಶ್ವರ ಟ್ರಸ್ಟ್ ಕಮೀಟಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

