ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಜಯಂತಿ
ರೋಣ:
ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ಮೇ 17ರಂದು ರಾಜಋಷಿ ಭಗೀರಥರ ಜಯಂತ್ಯುತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಪೀಠದ ಜ. ಪುರುಷೋತ್ತಮಾನಂದ ಪುರಿ ಶ್ರೀಗಳು ಸಾನ್ನಿಧ್ಯ ವಹಿಸುವರು. ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ ಆಗಮಿಸುವರು. ಉದ್ಘಾಟನೆಯನ್ನು ಡಿ.ವೈ. ಉಪ್ಪಾರ ನೆರವೇರಿಸುವರು. ಅತಿಥಿಗಳಾಗಿ ಪ್ರಭಾಕರ ಚೀಣಿ, ಸಿಪಿಐ ಅಡಿವೇಶ ಗುದಿಗೊಪ್ಪ, ಡಾ. ಎಚ್.ಕೆ. ಕಾಳಪ್ಪ, ಲಕ್ಷ್ಮಣ್ಣ ಉಪ್ಪಾರ, ಯಂಕೋಬಾ, ಮಲ್ಲಪ ಚಿಣಿ, ಫಕೀರಪ್ಪ ಉಪ್ಪಾರ, ವಿಠ್ಠಲ ಚೌರಿ, ಫಕೀರಪ್ಪ ಚಳಗೇರಿ, ಡಾ. ಸರಸ್ವತಿ ಚಿಮ್ಮಲಗಿ, ಚಂದ್ರಕಲಾ ಚಿಣಿ, ನಾಗಪ್ಪ ಉಪ್ಪಾರ, ಅನಿಲ ಗರಗದ, ಗೀತಾ ಕುಲಕರ್ಣಿ, ಚಂದಪ್ಪ ಗುಡದೂರ, ಶ್ರೀಶೈಲಪ್ಪ ಹೆಗ್ಗಣ್ಣವರ, ಕಳಕಪ್ಪ ಮಂತ್ರಿ, ಎಂ.ಜಿ. ಸೋಮನಕಟ್ಟಿ, ಬಸವರಾಜ ಅಂಗಡಿ, ಭೀಮನಗೌಡ ಪಾಟೀಲ, ಈರಣ್ಣ ಹೊಸಳ್ಳಿ, ಜ್ಯೋತಿ ಸೂಡಿ ಮುಂತಾದವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ  ಹಲವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಲ್ಮೇಶ್ವರ ಶಾಲೆ ಫಲಿತಾಂಶ ಶೇ. 93
ಹೊಳೆಆಲೂರ:
ಸಮೀಪದ ಹುಲ್ಲೂರು ಗ್ರಾಮದ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲ್ಮೇಶ್ವರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 93ರಷ್ಚಾಗಿದ್ದು, ಕವಿತಾ ಹಡಪದ ವಿದ್ಯಾರ್ಥಿನಿಯು ಶೇ. 78.40 ಅಂಕ ಪಡೆದುಕೊಳ್ಳುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉಮಾ ಘಟ್ಟಿ ಶೇ. 78.04 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಸಂದೀಪ ಆರೇರ ಶೇ. 74.72 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕ ಬಳಗವನ್ನು ಸಂಸ್ಥೆಯ ಅಧಕ್ಷರು ಮತ್ತು ಸದಸ್ಯರು, ಮುಖ್ಯೋಪಾಧ್ಯಾಯ ಎಸ್.ಕೆ. ಉಳ್ಳಾಗಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ:
ನಗರದ ಎಸ್.ಎಂ. ಕೃಷ್ಣ ನಗರ, ಆಟೋ ಕಾಲೋನಿ, ಕುಂಬಾರ ಓಣಿಯಿಂದ ರಾಜಾಜಿ ರೋಡ್‌ವರೆಗೆ, ಬೆಟಗೇರಿಯ ಕಿಲ್ಲಾ, ಗಾರಗಿ ಪೇಟೆ, ಬೆಟಗೇರಿಯ ಒಕ್ಕಲಗೇರಿ, ಬ್ಯಾಳಿಯವರ ಲೈನ್, ಬುರಡೆ ಲೈನ್‌ನಿಂದ ಗೌರಿಗುಡಿಯ ವರೆಗೆ ಶುಕ್ರವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಅಕ್ರಮ ಮರಳು ವಶ
ಶಿರಹಟ್ಟಿ:
ಹೊಳೆ-ಇಟಗಿ ಗ್ರಾಮ ವ್ಯಾಪ್ತಿಯ ಹಾವೇರಿಗೆ ತೆರಳುವ ಮಾರ್ಗದ ತೆರದಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 200ಕ್ಕೂ ಹೆಚ್ಚು ಲಾರಿಯಷ್ಟು ಮರಳನ್ನು ಗುರುವಾರ ತಹಸೀಲ್ದಾರ್ ಆರ್.ಡಿ. ಉಪ್ಪಿನ ನೇತೃತ್ವದಲ್ಲಿ ಪತ್ತೆ ಹಚ್ಚಿ, ವಶಕ್ಕೆ ತೆಗೆದುಕೊಳ್ಳಲಾಗಿದೆ. ರು. 7.20 ಲಕ್ಷ ಮೌಲ್ಯದ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡು ಹರಾಜು ಮಾಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.