ಶರಣರಿಂದ ಸ್ತ್ರೀಯರಿಗೆ ಉನ್ನತ ಸ್ಥಾನ
ಕನ್ನಡಪ್ರಭ ವಾರ್ತೆ, ಗದಗ, ಮೇ 18
ಹಿಂದಿನ ಕಾಲದಲ್ಲಿ ಶರಣರು ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ್ದರು ಎಂದು ಕಪೋತಗಿರಿಯ ನಂದಿವೇರಿ ಮಠದ ಶಿವಕುಮಾರ ಶ್ರೀ ಹೇಳಿದರು.
ಈಚೆಗೆ ಅವರು ನಗರದ ಉಸುಗಿನ ಕಟ್ಟೆಯ ಗಂಜಿ ಬಸವೇಶ್ವರ ರಥೋತ್ಸವದ 51ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 12ನೇ ಶತಮಾನದಲ್ಲಿ ವಚನ ಸಾಹಿತ್ಯದಲ್ಲಿ ಮಹಿಳೆಯರು ಪ್ರಮುಖ ಸ್ಥಾನ ಪಡೆದಿದ್ದರು. ಬಸವಣ್ಣನವರು ಮಹಿಳೆಯರಿಗೆ ಎಷ್ಟು ಪ್ರಾಮುಖ್ಯತ ಕೊಟ್ಟಿದ್ದರೆಂದರೆ, ಆಗಿನ ಕಾಲದಲ್ಲಿ ಅನೇಕ ಮಹಿಳೆಯರು ವಿವಿಧ ರೀತಿಯ ಸಾಹಿತ್ಯವನ್ನು ರಚಿಸಿದ್ದು ಇಂದಿಗೂ ನಾವು ನೋಡಬಹುದು. ಇದರಿಂದ ಹಿಂದಿನ ಕಾಲದ ಶರಣರು ಮಹಿಳೆಯರಿಗೆ ಉನ್ನತ ಸ್ಥಾನ ಮಾನಗಳನ್ನು ನೀಡಿದ್ದರು ಎನ್ನುವುದು ಗೊತ್ತಾಗುತ್ತದೆ.
ಇಂದಿನ ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ನೀಡುವುದು ಅವಶ್ಯ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ನಗರ ಠಾಣೆಯ ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ ಮಾತನಾಡಿ, ಮಹಿಳೆಯರು ಕುಟುಂಬದ ಕಣ್ಣು. ಅಷ್ಟೇ ಅಲ್ಲಾ ಅವಳು ಸಮಾಜ, ದೇಶದ ಕಣ್ಣೂ ಆಗಿದ್ದಾಳೆ. ಮಹಿಳೆಯರಿಗೆ ಭಾರತದ ಸಂಸ್ಕೃತಿಯಲ್ಲಿ ವಿಶಿಷ್ಠ ಸ್ಥಾನಮಾನಗಳಿವೆ. ಮಹಿಳೆಯರು ಇಂತಹ ಮಹಿಳಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಉಪಯೋಗವನ್ನು ಪಡೆದುಕೊಳ್ಳುವಲ್ಲಿ ಮುಂದಾಗುವುದು ಅವಶ್ಯ ಎಂದರು.
ನಗರಸಭಾ ಸದಸ್ಯೆ ಕಮಲಾ ಹಾದಿಮನಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ವರ್ಣ, ಜಾತಿ ಬೇಧ ಹೋಗಲಾಡಿಸಿ, ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯರನ್ನು ಗೌರವದಿಂದ ಕಂಡರು. ಹೀಗಾಗಿ ಬಸವಣ್ಣನವರು ವಿಶ್ವ ಮಾನವರಾಗಿದ್ದಾರೆಂದು ಬಣ್ಣಿಸಿದರು. ಉಪನ್ಯಾಸಕಿ ಮಂಜುಳಾ ವೆಂಕಟೇಶಯ್ಯ, ವಿಜಯಲಕ್ಷ್ಮೀ ಅಂಗಡಿ ಹಾಗೂ ನಗರಸಭಾ ಸದಸ್ಯೆ ಪಾರ್ವತಿ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರುದ್ರಮ್ಮ ಕರಕಲಮಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಗೌರಮ್ಮದೇವಿ ಶಾಬಾದಿಮಠ, ಪಾರ್ವತಿದೇವಿ ಶಾಬಾದಿಮಠ, ರತ್ನಾ ಸಂಕಣ್ಣನವರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

