ಗದಗ

ಪುಟ್ಟರಾಜರ ಕಾರ್ಯ ಸ್ಮರಣೀಯ

Published On :

ಗದಗ: ಜಾತಿ, ಮತ, ಭೇದ ಎಣಿಸದೇ ಸರ್ವ ಜನರಿಗೆ ಸಮಾನತೆಯಿಂದ ಧರ್ಮ ಪಥವನ್ನು ತಿಳಿಸಿ ಅಂಧ ಅನಾಥರ ಬಾಳಿಗೆ ಬೆಳಕು ನೀಡಿದವರು ಪರಮಪೂಜ್ಯ ಪುಟ್ಟರಾಜ ಕವಿಗವಾಯಿಗಳವರು ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.
ಅವರು ಈಚೆಗೆ ಅಂತೂರ ಬೆಂತೂರ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ನಡೆದ ಪೂಜ್ಯ ಪುಟ್ಟರಾಜ ಗವಾಯಿಗಳವರ ತೃತೀಯ ಪುಣ್ಯಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವೀರೇಶ್ವರ ಪುಣ್ಯಾಶ್ರಮವು ಸರ್ವ ಧರ್ಮದವರ ಸಮನ್ವಯದ ಕೇಂದ್ರವಾಗಿದ್ದು ಇಲ್ಲಿ ನಿರಂತರ ತ್ರಿವಿಧ ದಾಸೋಹ ಭಕ್ತ ಸಮೂಹದ ಸಹಾಯದಿಂದ ಇದುವರೆಗೂ ನಡೆದು ಬಂದಿದ್ದು, ಅದೇ ಪರಂಪರೆಯನ್ನು ಮುನ್ನಡೆಸಿಕೊಂಡು ಬರಲಾಗಿದೆ ಎಂದರು. ಸಾನ್ನಿಧ್ಯ ವಹಿಸಿ ಮಾತನಾಡಿದ ಅಡ್ನೂರ ದಾಸೋಹಮಠದ ಪೂಜ್ಯ ಪಂಚಾಕ್ಷರ ಶಿವಾಚಾರ್ಯರು, ಪುಣ್ಯ ಪುರುಷರ ಮಾಲಿಕೆಯಲ್ಲಿ ಚಿರಾಯು ಸ್ಥಾನ ಪಡೆದ ಪುಟ್ಟರಾಜ ಕವಿ ಗವಾಯಿಗಳು ಭಕ್ತರ ಹೃದಯ ಮಂದಿರದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದರು.
ಸಂಗೀತ ಕಾರ್ಯಕ್ರಮ: ನೇತೃತ್ವ ವಹಿಸಿದ್ದ ನೀಲಗುಂದದ ಗುದ್ನೇಶ್ವರ ಮಠದ ಪೂಜ್ಯ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಶರಣರು ಹಾಗೂ ದೈವಿ ಪುರುಷರು ಧರ್ಮ ಪಥದ ತಿರುಳನ್ನು ಭಕ್ತರಿಗೆ ನೀಡಿ ಭವದ ಭವಣೆಯನ್ನು ನೀಗಲು ಶ್ರಮಿಸಿದ್ದು ಪುಟ್ಟರಾಜರು ಭಕ್ತರ ಮನದಾಳದಲ್ಲಿ ನೆಲೆಸಿ ಅಜರಾಮರಾಗಿದ್ದಾರೆ ಎಂದರು. ಉಪನ್ಯಾಸಕ, ಗಾನಕಲಾ ಪರಿಷತ್ತಿನ ಅಧ್ಯಕ್ಷ ಶಿವಲಿಂಗಯ್ಯ ಶಾಸ್ತ್ರೀ ಸಿದ್ದಾಪುರ ಮಾತನಾಡಿ, ಮಹಾತ್ಮರ ಹಾಗೂ ಪುಣ್ಯ ಜೀವಿಗಳ ನಡೆ ನುಡಿ ಸದಾ ಆದರ್ಶಮಯ ಎಂದರು. ನಿರ್ಮಲ ಮೂಶಪ್ಪನವರ ಹಾಗೂ ಅಕ್ಷತಾ ಹೂಗಾರ ಸಂಗೀತ ಪ್ರಸ್ತುತಪಡಿಸಿದರು.
ಮಲ್ಲಿಕಾರ್ಜುನ ಹೂಗಾರ ಪ್ರಾರ್ಥಿಸಿದರು. ಬಸವರಾಜ ಶೆಟ್ರ ಚಿಂಚಲಿ ಸ್ವಾಗತಿಸಿದರು. ವೀರಣ್ಣ ಮದ್ನೂರ ನಿರೂಪಿಸಿದರು. ರಾಮಣ್ಣ ಹಾವೇರಿ ವಂದಿಸಿದರು. ನಂತರ ಅನ್ನಸಂತರ್ಪಣೆ ಜರುಗಿತು.
ಬೆಳಗ್ಗೆ ಗ್ರಾಮದ ವಿವಿಧೆಡೆ ಹಲವು ಕಲಾತಂಡಗಳಿಂದ ಮತ್ತು ಮುತ್ತೈದೆಯರ ಕಳಸ, ಮಂಗಲ ವಾದ್ಯಗಳೊಂದಿಗೆ ಪುಟ್ಟರಾಜರ ಬೃಹತ್ ಭಾವಚಿತ್ರದ ಮೆರವಣಿಗೆ ಗ್ರಾಮದ ವಿವಿಧೆಡೆ ಸಂಚರಿಸಿತು.
ವೀರೇಶ್ವರ ಪುಣ್ಯಾಶ್ರಮವು ಸರ್ವ ಧರ್ಮದವರ ಸಮನ್ವಯದ ಕೇಂದ್ರವಾಗಿದ್ದು ಇಲ್ಲಿ ನಿರಂತರ ತ್ರಿವಿಧ ದಾಸೋಹ ಭಕ್ತ ಸಮೂಹದ ಸಹಾಯದಿಂದ ಇದುವರೆಗೂ ನಡೆದು ಬಂದಿದ್ದು, ಅದೇ ಪರಂಪರೆಯನ್ನು ಮುನ್ನಡೆಸಿಕೊಂಡು ಬರಲಾಗಿದೆ.
- ಕಲ್ಲಯ್ಯಜ್ಜ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.