ಬರವಣಿಗೆಯಲ್ಲಿ ಶುದ್ಧತೆ ಕಾಪಾಡಿ: ಪ್ರೊ. ರವೀಂದ್ರ
ಕನ್ನಡಪ್ರಭ ವಾರ್ತೆ, ಗದಗ, ನ. 3
ಕನ್ನಡ ಭಾಷೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳ ಅಭಿವ್ಯಕ್ತಿಗೆ ತಕ್ಕುದಾಗುವಂತೆ ಪ್ರಯತ್ನಗಳನ್ನು ಮಾಡಬೇಕು. ಆಡಳಿತ ಹಾಗೂ ನಿತ್ಯ ಬದುಕಿನ ಸಂವಹನ, ಬರವಣಿಗೆಯಲ್ಲಿ ಭಾಷೆ ಶುದ್ಧತೆಯನ್ನು ಕಾಪಾಡಿಕೊಳ್ಳುವಂತಾಗಬೇಕು. ಗಡಿನಾಡು ಪ್ರದೇಶಗಳಲ್ಲಿಯ ಕನ್ನಡಿಗರ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಪ್ರೊ. ರವೀಂದ್ರ ಕೊಪ್ಪರ ಅಭಿಪ್ರಾಯಿಸಿದರು.
ಅವರು ಶುಕ್ರವಾರ ನಗರದ ಸಮರ್ತನಂ ಅಂಗವಿಕಲರ ಸಂಸ್ಥೆಯಲ್ಲಿ ಗದಗ ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿದ ಮಾತನಾಡಿದರು. ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಪ್ರಭುರಾಜಗೌಡ ಪಾಟೀಲ, ಸಮರ್ಥನಂ ಸಂಸ್ಥೆಯ ದೀಪಿಕಾ ಸಾವಂತ ಮಾತನಾಡಿ, ಇಂದಿನ ಜಾಗಿತಿಕ ದಿನಮಾನಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವಂಥ ಪ್ರವೃತ್ತಿ ಕಡಿಮೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಯಾವುದೇ ವ್ಯಕ್ತಿ ತಾನು ಹುಟ್ಟಿದ ದೇಶ, ಭಾಷೆಯನ್ನು ಮರೆಯಬಾರದು. ದೇಶದಲ್ಲಿ ಜನ್ಮತಳೆದ ನಾವೆಲ್ಲರೂ ದೇಶ ಹಾಗೂ ಕನ್ನಡ ಭಾಷೆಯ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಕನ್ನಡ ಜಾಗೃತಿ ವೇದಿಕೆ ಸದಸ್ಯ ಚೇತನಕುಮಾರ ಹುಡೇದ, ಭೂಷಣ್ ಅಣ್ಣಿಗೇರಿ, ಸಂಸ್ಥೆಯ ಶಿಕ್ಷಕ ಸಂತೋಷ, ವೀರೇಶ ಹೂಗಾರ, ಶೇಖರಗೌಡ ಮಲ್ಲನಗೌಡ್ರ, ದಯಾನಂದ ಹಿರೇಮಠ, ಲೋಕೇಶ ಶೋಭಾ, ಮಾರುತಿ ಗೋಡೂರ, ಗೀತಾ ಮೆಣಸಗಿ, ಶಂಕ್ರಮ್ಮ, ವಿಜಯಲಕ್ಷ್ಮೀ ಪಾಟೀಲ, ಶಿಲ್ಪಾ ರಡ್ಡೇರ ಇದ್ದರು.
ಗೋಪಿ ಬರಗೂರು, ರೇಣುಕಾ ವಿಭೂತಿ ಪ್ರಾರ್ಥಿಸಿದರು. ದಿನೇಶ ಎನ್. ಸ್ವಾಗತಿಸಿದರು. ಸವಿತಾ ಉಮಚಗಿ, ಗೋಪಿ ಬರಗೂರು ನಿರೂಪಿಸಿದರು. ಗಂಗಾಧರ ಬಡಿಗೇರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

