ಗದಗ

ಗಂಡುಮೆಟ್ಟಿನ ಭಾಷೆ ಕನ್ನಡ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 3
ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಷೆ ಎಂದರೆ ಅಚ್ಚು ಕನ್ನಡ ಭಾಷೆಯಾಗಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶುಕ್ರವಾರ ಪಟ್ಟಣದ ಜಾಗೃತ ವೃತ್ತದಲ್ಲಿ ಕನ್ನಡಕ್ರಾಂತಿ ಸೇನೆ ಏರ್ಪಡಸಿದ್ದ 58ನೇ ಕನ್ನಡ ರಾಜ್ಯೋತ್ಸವವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಜಧಾನಿ ಬೆಂಗಳೂರಿನಿಂದ ಹಿಡಿದು ಬಹುತೇಕವಾಗಿ ಎಲ್ಲೆಡೆಯೂ ಇಂಗ್ಲಿಷ್ ಭಾಷೆ ತನ್ನ ಪ್ರಭಾವನ್ನು ಹೊಂದಿದೆ. ಕನ್ನಡ ನಮ್ಮ ಹೃದಯಭಾಷೆ. ಅದನ್ನು ಎಂದಿಗೂ ಮರೆಯಬಾರದು ಕನ್ನಡಿಗರಾದ ನಾವೆಲ್ಲರೂ ಜಾಗೃತರಾಗುವುದು ಅವಶ್ಯವಾಗಿದೆ. 15 ವರ್ಷಗಳಿಂದ ಕನ್ನಡ ಕ್ರಾಂತಿಸೇನೆ ಅನೇಕ ಕನ್ನಡ ಪರವಾದ ಕೆಲಸ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಮುಂಬರುವ ದಿನಗಳಲ್ಲಿ ತಾಲೂಕಿನ ಒಂದು ಗ್ರಾಮವನ್ನು ದತ್ತು ಪಡೆದು ಅಲ್ಲಿನ ಶೌಚಾಲಯ, ಶಿಕ್ಷಣ, ಕನ್ನಡ ಭಾಷೆ ಹಾಗೂ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಮುಂದಾಗಬೇಕು. ಅದಕ್ಕೆ ಬೇಕಾಗುವ ಎಲ್ಲ ಸಹಾಯ-ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ, ದೇವಪ್ಪ ಇಟಗಿ, ಮಂಜುನಾಥ ಇಟಗಿ ಮಾತನಾಡಿದರು.
ಕನ್ನಡಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ಪಾಲಾಕ್ಷಿ ಗಣದಿನ್ನಿ, ಲಿಂಗರಾಜಗೌಡ ಪಾಟೀಲ, ಮುದಿಯಪ್ಪ ಕುಂಬಾರ, ವೀರೇಶ ಸಜ್ಜನರ, ಬಸವರಾಜ ಗಣಾಚಾರಿ, ಪವನ್ ಚೋಪ್ರಾ, ಶೇಕರಾಜ ಹೊಸಮನಿ, ಎ.ಪಿ. ದಂಡಿನ, ವೀರಣ್ಣ ತುಪ್ಪದ, ಕೃಷ್ಣಾ ರಾಮೇನಹಳ್ಳಿ, ಪರಶುರಾಮ ಕರಡಿಕೊಳ್ಳ, ಪ್ರಭು ಗುಗ್ಗರಿ, ಅಬ್ದುಲ್ ಖುರೇಶಿ, ಬಸವರಾಜ ಬಣಕಾರ, ಅಶೋಕ ಸವಣೂರ, ರಾಮು ಡೊಣ್ಣಿ, ನೀಲಪ್ಪ ಚಿಕ್ಕನ್ನವರ, ಮಂಜುನಾಥ ಕುಂಬಾರ, ಮಾರುತಿ ಅಳವಂಡಿ, ಮಾರುತಿ ಯಾವಗಲ್, ನಾಗರಾಜ ಕೋಳಿ, ಸುರೇಶ ಕೆಂಜೋಡಿ, ಈರಣ್ಣ ಹಡಗಲಿ, ರವಿ ಅರಿಸಿನದ, ಮಹಾದೇವ್ ಡೊಣ್ಣಿ, ಶ್ರೀನಿವಾಸ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು. ಸಂತೋಷ ಹಿರೇಮನಿ ಸ್ವಾಗತಿಸಿ, ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.