ಪಾಟೀಲರ ಶಿಕ್ಷಣ ಪ್ರೇಮ ಶ್ಲಾಘನೀಯ
ಕನ್ನಡಪ್ರಭ ವಾರ್ತೆ, ಗದಗ, ನ. 3
ನ್ಯಾಯವಾದಿ ಪಾಟೀಲರು ಒಬ್ಬ ವ್ಯಕ್ತಿಯಾಗಿರದೇ ಸಾಮಾಜಿಕ ಶಕ್ತಿಯಾಗಿ ಬೆಳದಿದ್ದವರು. ಅವರ ಶಿಕ್ಷಣ ಪ್ರೇಮ ಇತರರಿಗೆ ಮಾದರಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದ ಪ್ರಭುರಾಜೇಂದ್ರ ಶಾರೀರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಎ.ಎಚ್. ಪಾಟೀಲ(ಹಾಳಕೇರಿ) ವಕೀಲರ ತೃತೀಯ ಪುಣ್ಯಾರಾಧನೆಯ ಸಂತರ್ಪಣೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನು ತಜ್ಞರಾಗಿ, ಶಿಕ್ಷಣ ಪ್ರೇಮಿಯಾಗಿ ಹಾಗೂ ಕವಿಯಾಗಿ ಪಾಟೀಲರು ಮಾಡಿದ ಸೇವೆ ಅಮೋಘವಾದದ್ದು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಈ ಮೂರು ಅಂಗಗಳು ಉತ್ತಮವಾಗಿ ಕಾರ್ಯಮಾಡಿದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಜಿಲ್ಲಾ ನ್ಯಾಯಾಂಗದಲ್ಲಿ ಎ.ಎಚ್. ಪಾಟೀಲರ ನೇರ, ದಿಟ್ಟ, ನಿಲುವಿನ ವ್ಯಕ್ತಿಯಾಗಿದ್ದರು ಎಂದರು.
ಶಿರಹಟ್ಟಿಯ ಫಕ್ಕೀರಸಿದ್ಧರಾಮ ಶ್ರೀಗಳು ಮಾತನಾಡಿ, ಮನುಷ್ಯನು ಪಂಚ ಋಣಗಳನ್ನು ತೀರಿಸಬೇಕು ಅಂದಾಗ ಮುಕ್ತಿ ಹೊಂದಲು ಸಾಧ್ಯ. ಪಾಟೀಲರು ಸಾಮಾಜಿಕವಾಗಿ, ಸಾರ್ವಜನಿಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ರಾಷ್ಟ್ರದ ಆದರ್ಶ ವ್ಯಕ್ತಿಗಳಲ್ಲಿ ಬಹುಪಾಲು ನ್ಯಾಯವಾದಿಗಳು ಎಂದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಮನುಷ್ಯ ಜನ್ಮ ಪಾವನವಾದದ್ದು, ಬದುಕಿನಲ್ಲಿ ಉತ್ತಮ ಕಾರ್ಯಗಳ ಮೂಲಕ ಪಡೆದು ಬಂದ ಜನ್ಮವನ್ನು ಸಾರ್ಥಕ ಪಡೆಸಿಕೊಳ್ಳಬೇಕು ಎಂದರು.
ರೋಣ ಶಾಸಕ ಜಿ.ಎಸ್. ಪಾಟೀಲ, ಡಾ. ಬಿ.ಎಸ್. ಸಾಸನೂರ, ವಾಸಣ್ಣ ಕುರುಡಗಿ, ವಿ.ಬಿ. ಹುಬ್ಬಳ್ಳಿ, ಅನಿಲ ಗರಗ, ಗಿರಿಜಾದೇವಿ ಪಾಟೀಲ, ಡಾ. ರಾಜೀವ ರೋಖಡೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಕೆ. ಮೇಟಿ, ಎಂ.ಟಿ. ಮಿಸ್ಕೀನ, ಸಿ.ಸಿ. ರಾಚಯ್ಯನವರು, ಲೇಖಕ ಎಫ್.ಪಿ. ಲಕ್ಷ್ಮೇಶ್ವರಮಠ, ಬಾಬಣ್ಣ ಶಾಬಾದಿಮಠ, ರೇಖಾ ಪೊಲೀಸ್ಪಾಟೀಲ, ಗೀತಾಂಜಲಿ ಮೆಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಎಸ್.ಬಿ.ಪಾಟೀಲ ಸ್ವಾಗತಿಸಿದರು. ಡಾ. ಅಂದಾನಯ್ಯ ಹಿರೇಮಠ, ಗೀತಾಂಜಲಿ ಮೆಣಸಿನಕಾಯಿ ನಿರೂಪಿಸಿದರು. ವಿ.ಎ. ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

