ಜಯಕರ್ನಾಟಕ ಕಾರ್ಯ ಶ್ಲಾಘನೀಯ
ಕನ್ನಡಪ್ರಭ ವಾರ್ತೆ, ನರೇಗಲ್ಲ, ನ. 4
ಪಾಶ್ಚಿಮಾತ್ಯ ಭಾಷೆಗೆ ಮಾರುಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ತಾಯ್ನಾಡಿನ ಭಾಷೆ ಉಳಿಸುವಲ್ಲಿ ಜಯಕರ್ನಾಟಕ ಸಂಘಟನೆ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಸ್ಥಳೀಯ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಂಘಟನೆಯ ವಾರ್ಷಿಕೋತ್ಸವ ಹಾಗೂ ಪಪಂ ಸದಸ್ಯರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಉಳಿವಿಗಾಗಿ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿ, ಹುಯಿಲಗೋಳ ನಾರಾಯಣರಾವ್, ಸೂಡಿಯ ವಿರೂಪಾಕ್ಷಪ್ಪ ಹೀಗೆ ಇನ್ನೂ ಹಲವಾರು ಮಹಾನ್ ವ್ಯಕ್ತಿಗಳು ಕನ್ನಡ ಮತ್ತು ಕರ್ನಾಟಕವನ್ನು ಕಟ್ಟಿ ಬೆಳೆಸುವಲ್ಲಿ ಅವಿರತ ಪ್ರಯತ್ನ ನಡೆಸಿದ್ದರು. ಅಂತಹ ಮೇಧಾವಿಗಳು ಕರ್ನಾಟಕ ಏಕೀಕರಣಗೊಳಿಸುವಲ್ಲಿ ತಮ್ಮ ಪ್ರಾಣ ತ್ಯಾಗಕ್ಕೂ ಹಿಂಜರಿಯಲಿಲ್ಲ. ಅವರು ಭಾಷೆಯನ್ನೇ ತಮ್ಮ ತಾಯಿ ಎಂದು ಭಾವಿಸಿದ ಧೀಮಂತರು. ಅವರ ಕನಸಿನಂತೆ ಪ್ರತಿಯೊಬ್ಬ ಕನ್ನಡಿಗನೂ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು
ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಚಂದ್ರಕಾಂತ ಚೌಹಾಣ್ ಮಾತನಾಡಿ, ಕನ್ನಡ ನೆಲದಲ್ಲಿ ಭ್ರಷ್ಟಾಚಾರ ನಡೆಯುವುದನ್ನು ಜಯ ಕರ್ನಾಟಕ ಸಂಘಟನೆ ಸಹಿಸುವುದಿಲ್ಲ. ಎಲ್ಲಿ ಅರಾಜಕತೆ ತಾಂಡವವಾಡುತ್ತಿರುತ್ತದೆಯೋ ಅದನ್ನು ತಡೆಗಟ್ಟಲು ನಮ್ಮ ಸಂಘಟನೆ ಸದಾ ಮುಂದಿರುತ್ತೆ ಎಂದರು.
ರವೀಂದ್ರನಾಥ ದೊಡ್ಡಮೇಟಿ, ಪಪಂ ಮಾಜಿ ಅಧ್ಯಕ್ಷ ಉಮೇಶ ಸಂಗನಾಳಮಠ ಹಾಗೂ ಸಾನ್ನಿಧ್ಯ ವಹಿಸಿದ್ದ ರೋಣ ಗುಲಗಂಜಿಮಠದ ಗುರುಪಾದ ಶ್ರೀಗಳು ಮಾತನಾಡಿದರು.
ಅರುಣ ಕುಲಕರ್ಣಿ ಉಪನ್ಯಾಸ ನೀಡಿದರು. ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ನಾಯ್ಕರ, ಸಿ.ಜಿ. ಹುಡೇದಗಡ್ಡಿ ತಾಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ, ಪಪಂ ಅಧ್ಯಕ್ಷೆ ಬಸವ್ವ ಲಕ್ಕನಗೌಡ್ರ, ಉಪಾಧ್ಯಕ್ಷೆ ಅನ್ನಪೂರ್ಣಾ ಗಿಂಡಿ ಹಾಗೂ ಪಪಂ ಸದಸ್ಯರು, ಸಂಘಟನೆಯ ಸ್ಥಳೀಯ ಅಧ್ಯಕ್ಷ ಹುಲಗಪ್ಪ ಬಂಡಿವಡ್ಡರ, ಕಾರ್ಯದರ್ಶಿ ಅಂದಪ್ಪ ತೋಟಗೇರ, ಶೇಖಪ್ಪ ಜುಟ್ಲ ಮುಂತಾದವರು ಉಪಸ್ಥಿತರಿದ್ದರು.
ರಾಜಶ್ರೀ ಕುಲಕರ್ಣಿ ಪ್ರಾರ್ಥಿಸಿದರು. ಶಿಕ್ಷಕ ಶಿವಾನಂದ ಗೋಗೇರಿ ನಿರೂಪಿಸಿದರು. ಪ್ರಭುಸ್ವಾಮಿ ಅರವಟಗಿಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

