ಹಿರೇಮಠ ನಿಧನ: ಸಂತಾಪ
ಹೊಳೆಆಲೂರು: ಸಾಹಿತಿ ಹಾಗೂ ಕನಕದಾಸ ಶಿಕ್ಷಣ ಸಮಿತಿ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿ.ಬಿ. ಹಿರೇಮಠ ನಿಧನಕ್ಕೆ ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತು ಹಾಗೂ ಗದಗ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಸಂತಾಪ ಸೂಚಿಸಿದೆ. ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ, ಡಾ. ಸಿದ್ದಣ್ಣ ಜಕಬಾಳ, ಚನ್ನಪ್ಪ ಅಂಗಡಿ, ಡಾ. ಎಂ.ಎನ್. ಅಂಬಲಿಯವರ, ಚಂದ್ರಶೇಖರ ವಸ್ತ್ರದ, ಮಂಜುನಾಥ ಬಮ್ಮನಕಟ್ಟಿ, ಅಶೋಕ ಬಣ್ಣದ, ಡಾ. ಬಸಯ್ಯ ಗದಗಿನಮಠ, ಚನ್ನಪ್ಪ ಹುಡೇದಗಡ್ಡಿ, ಎಂ.ಎಸ್. ಪಾಟೀಲ, ಶಕುಂತಲಾ ಸಿಂಧೂರ, ಡಾ. ಪ್ರಭು ಗಂಜಿಹಾಳ, ರಮೇಶ ಕಲ್ಲನಗೌಡರ, ಡಾ. ರಿಯಾಜ ಭಾಷಾ, ರಾಜಶೇಖರ ದಾನರಡ್ಡಿ, ಆರ್.ಎಸ್. ತಿಗಡಿ, ಎಫ್.ಎನ್. ಕುರಬರ, ಸಿ.ಎಂ. ಕಾಳಣ್ಣವರ, ಎಚ್.ಆರ್. ಕಲ್ಮನಿ ಸಂತಾಪ ಸೂಚಿಸಿದ್ದಾರೆ.
ನಾಳೆ ಕಥಾ ಸ್ಪರ್ಧೆ
ಗದಗ: ನವಂಬರ್ ತಿಂಗಳಾದ್ಯಂತ ನಡೆಯುವ ಕನ್ನಡ ನುಡಿಹಬ್ಬ ಕಾರ್ಯಕ್ರಮದ ಅಂಗವಾಗಿ ಗದಗ ತಾಲೂಕು ಕಸಾಪ ನೇತೃತ್ವದಲ್ಲಿ ಗದಗ ತಾಲೂಕಿನ ಪ್ರೌಢಶಾಲಾ ಮಕ್ಕಳಿಗಾಗಿ ನ. 7ರಂದು ನಗರದ ವಿದ್ಯಾದಾನ ಸಮಿತಿಯ ಹೆಣ್ಣು ಮಕ್ಕಳ ಪ್ರೌಢಶಾಲೆಯ ಆವರಣದಲ್ಲಿ ಮಧ್ಯಾಹ್ನ 1 ಗಂಟೆಗೆ ದೃಶ್ಯಕಥಾ (ದೃಶ್ಯ ನೋಡಿ ಕಥೆ ಬರೆಯುವ) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಗದಗ ತಾಲೂಕಿನ ಎಲ್ಲ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ತಮ್ಮ ಶಾಲೆಯ ಪತ್ರದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನ್ನಡದಲ್ಲಿ ಮಾತ್ರ ಕಥೆಯನ್ನು ರಚಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಯ ನಂತರ ಕಥಾ ರಚನೆಯ ಕುರಿತು ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆಗದಗ ತಾಲೂಕು ಕಸಾಪ ಸದಸ್ಯ ಬಿ.ಎನ್. ತಾರಾ (8970731022), ಗದಗ ಕಸಾಪ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ (9845956302) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಥೆ ಬರೆಯುವ ಸ್ಪರ್ಧೆ
ಗದಗ: ನವೆಂಬರ್ ತಿಂಗಳಾದ್ಯಂತ ನಡೆಯುವ ನುಡಿಹಬ್ಬ ಕಾರ್ಯಕ್ರಮದ ಅಂಗವಾಗಿ ಗದಗ ತಾಲೂಕು ಕಸಾಪ ವತಿಯಿಂದ ಅಂಚೆ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ. ಕನ್ನಡ ಸಾಹಿತ್ಯದ ಪ್ರಕಾರದಲ್ಲಿ ಸಣ್ಣ ಕಥೆಯನ್ನು ಪ್ರೋತ್ಸಾಹಿಸುವ ಮಹತ್ವಾಕಾಂಕ್ಷೆಯಿಂದ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಆಸಕ್ತ ಲೇಖಕರು ಅಂಚೆ ಕಾರ್ಡಿನ ಒಂದೇ ಮಗ್ಗುಲಲ್ಲಿ ಸಣ್ಣ ಕಥೆಯನ್ನು ಬರೆದು ಕಾರ್ಡಿನ ಇನ್ನೊಂದು ಬದಿಯಲ್ಲಿ ಲೇಖಕರು ತಮ್ಮ ಹೆಸರು ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದು ಪ್ರೊ. ಕಿಶೋರಬಾಬು ನಾಗರಕಟ್ಟಿ ಅಧ್ಯಕ್ಷರು ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 3ನೇ ಅಡ್ಡರಸ್ತೆ ಪಂಚಾಕ್ಷರ ನಗರ ಗದಗ ಇವರಿಗೆ ನ. 20ರ ಒಳಗಾಗಿ ಅಂಚೆ ಕಳಿಸಬೇಕು. ಹೆಚ್ಚಿನ ಮಾಹಿತಿಗೆ ಕಸಾಪದ ಗದಗ ತಾಲೂಕು ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ (9845956302) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

