ಗದಗ

ಅಭಿವೃದ್ಧಿಯಲ್ಲಿ ತಾರತಮ್ಯ ಧೋರಣೆ ಸಲ್ಲ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 5
ಸ್ವಾತಂತ್ರ್ಯ ದೊರಕಿ 6 ದಶಕಗಳೂ ಕಳೆದರೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿರುವ ರೇಲ್ವೆ ಯೋಜನೆಗಳು ಸಾಕಾರಗೊಳ್ಳದಿರುವುದು ವಿಷಾದನೀಯ ಸಂಗತಿಯಾಗಿದ್ದು, ಕೇಂದ್ರ ರೇಲ್ವೆ ಮಂತ್ರಾಲಯದ ಮಲತಾಯಿ ಧೋರಣೆಯನ್ನು ಉತ್ತರ ಕರ್ನಾಟಕ ಜನತೆ ಸಹಿಸುವುದಿಲ್ಲ ಎಂದು ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ಹೇಳಿದರು.
ಸೋಮವಾರ ನಗರದ ರೇಲ್ವೆ ನಿಲ್ದಾಣದ ಬಳಿ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ 5ನೇ ವರ್ಷದ ಯಶಸ್ವಿ ಹೋರಾಟದ ವಿಜಯ ಸಂಕಲ್ಪ ದಿನಾಚರಣೆ ಹಾಗೂ ಗದಗ-ವಾಡಿ, ಗದಗ-ಹಾವೇರಿ ಹೊಸ ರೈಲು ಮಾರ್ಗ ಸೇರಿದಂತೆ ಗದಗ ಬಾಗಲಕೋಟೆ ಜಿಲ್ಲೆಯ ಜನರಿಗೆ ಸಮರ್ಪಕ ರೈಲು ಸೌಲಭ್ಯ ದೊರಕಿಸಿಕೊಡುವಂತೆ ಮುಖ್ಯಮಂತ್ರಿ, ರೇಲ್ವೆ ಸಚಿವರಿಗೆ ಪತ್ರ ಚಳವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಶೈಕ್ಷಣಿಕ,. ಆರ್ಥಿಕ, ಔದ್ಯೋಗಿಕವಾಗಿ ಅಭಿವೃದ್ಧಿಯಾಗುವುದು ಅತಿ ಅವಶ್ಯವಿದ್ದು, ಹೊಸಪೇಟೆ-ಹರಿಹರ ಕೊಟ್ಟೂರು ಮಾರ್ಗವಾಗಿ ಬ್ರಾಡ್‌ಗೇಜ್ ಕಾಮಗಾರಿ ಪೂರ್ಣಗೊಂಡು 2 ವರ್ಷ ಕಳೆದರೂ ರೈಲು ಸೇವೆಯನ್ನು ಪ್ರಾರಂಭಿಸದಿರುವುದು ವಿಷಾದನೀಯ.
ಈ ವಿಷಯ ಬಗ್ಗೆ ನೈಋತ್ಯ ರೇಲ್ವೆಯ ಜನರಲ್ ಮ್ಯಾನೇಜರ್ ಗಮನಕ್ಕೆ ತಂದರೂ ಹಾರಿಕೆಯ ಉತ್ತರ ನೀಡಿ ಜಾರಿಗೊಳ್ಳುತ್ತಿರುವುದು ಸಮಂಜಸವಲ್ಲ. ಈ ಕುರಿತು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಪತ್ರ ಚಳವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಿ. ಸುಬ್ರಹ್ಮಣ್ಯಂ ರಡ್ಡಿ ಮಾತನಾಡಿ, ಗದಗ-ವಾಡಿ ನೂತನ ರೈಲು ಮಾರ್ಗವನ್ನು ಈ ಹಿಂದೆ ಸರ್ವೇ ಮಾಡಿದಂತೆ ನರೇಗಲ್ಲ, ಗಜೇಂದ್ರಗಡ ಮಾರ್ಗವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಗದಗ ಜಿಲ್ಲಾ ಘಟಕದ ಹೋರಾಟ ಸಮಿತಿ ಅಧ್ಯಕ್ಷ ನಿಸ್ಸಾರ್ ಅಹ್ಮದ ಖಾಜಿ, ವಿಜಯ ಮುಳಗುಂದ, ಬಸವಣ್ಣೆಯ್ಯ ಹಿರೇಮಠ, ಶಿವಕುಮಾರ ರಾಮನಕೊಪ್ಪ, ಎನ್.ಕೆ. ಕೋರ್ಲಹಳ್ಳಿ ಮಾತನಾಡಿದರು.
ಸೊರಟೂರು ಹಿರೇಮಠದ ಫಕ್ಕೀರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಮೇಶ ಕೋನರಡ್ಡಿ, ರಾಮು ಬಳ್ಳಾರಿ, ದಾಸ, ಚಿನ್ನು, ಮಹೇಶ ನವಲಿಕರ, ಅಬ್ದುಲ್ ಖಾದರ ಗಡಾದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.