ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕ ಸಹಕಾರಿ: ಮಿಥುನ ಪಾಟೀಲ
ರೋಣ: ದೇಶ ಸುತ್ತಿ ಪಡೆವ ಜ್ಞಾನದಷ್ಟೇ ಕೋಶ (ಪುಸ್ತಕ) ಓದುವುದರಿಂದ ಲಭಿಸುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳು ಸಹಕಾರಿ ಎಂದು ಹಾವೇರಿ ಲೋಕಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಹಳೆ ಸಂತೆ ಬಜಾರ್ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರೋಣ ಘಟಕ ಇವರುಗಳ ವತಿಯಿಂದ ಶಾಂತಿ ಪ್ರಕಾಶನ ರಜತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಶಾಂತಿಗಾಗಿ ಸಾಹಿತ್ಯ ಅಭಿಯಾನ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಹು ಧರ್ಮೀಯ ದೇಶವೊಂದರಲ್ಲಿ ಶಾಂತಿ, ಸಹಬಾಳ್ವೆ, ಕೋಮು ಸೌಹಾರ್ದತೆ ನೆಲೆಸಬೇಕಾದರೆ, ಧರ್ಮಗಳ ಕುರಿತಂತೆ ಅತ್ಯಂತ ಸ್ಪಷ್ಟ ಮತ್ತು ತಿಳಿವಳಿಕೆ ಅತ್ಯಗತ್ಯ. ಆ ದಿಶೆಯಲ್ಲಿ ನಮಗೆ ಸಾಹಿತ್ಯಿಕ ಪುಸ್ತಕಗಳು ಸಹಕಾರಿಯಾಗುತ್ತವೆ. ಪರಸ್ಪರ ಸೌಹಾರ್ದತೆ, ಮಾನವಿಯ ಮೌಲ್ಯಗಳು, ಜೀವನದಲ್ಲಿ ಸಾಮರಸ್ಯತೆ ಹಾಗೂ ಪುಸ್ತಕಗಳು ಮನುಷ್ಯ ಜೀವನದಲ್ಲಿ ಯಾವ ರೀತಿಯ ಪಾತ್ರವನ್ನು ನಿರ್ವಹಿಸುತ್ತವೆ ಎಂಬುದರ ಕುರಿತು ಎಲ್ಲೆಡೆ ಶಾಂತಿ ಪ್ರಕಾಶನ ರಜತ ಮಹೋತ್ಸವ ನಿಮಿತ್ತ ಮಹತ್ವಪೂರ್ಣ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಇನಾಯತ ತರಫದಾರ ಮುಂತಾದವರು ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ರೋಣ ಘಟಕ ಅಧ್ಯಕ್ಷ ಮಹ್ಮದ್ಬಾಬರ ಬೇಗ ಅಧ್ಯಕ್ಷತೆ ವಹಿಸಿದ್ದರು. ಗುಲಗಂಜಿ ಮಠದ ಗುರುಪಾದ ಸ್ವಾಮೀಜಿಸಾನ್ನಿಧ್ಯ ವಹಿಸಿ ಮಾತನಾಡಿದರು. ಅಬ್ದುಲ್ರಜಾಕ್ ಶೇಖ ಕುರಾಣ ಪಠಣ ಮಾಡಿದರು. ಪಿ.ಎಚ್. ಕಡಿವಾಲ ಮತ್ತು ಶಿವರಾಜ ಗುರಿಕಾರ ಉಪನ್ಯಾಸ ನೀಡಿದರು. ಹುಚ್ಚಪ್ಪ ನವಲಗುಂದ, ರಡ್ಡೇರ, ಶಫೀಕ ಮೂಗನೂರ, ವಿಶ್ವನಾಥ ಜಿಡ್ಡಿಬಾಗೀಲ, ಅಬುಬಕರ್ ತರಪದಾರ್, ರೀಯಾಜ ಕೊಪ್ಪಳ, ಕಲೀಲ ರಾಮದುರ್ಗ, ಎಂ.ಎಫ್. ಕೊಪ್ಪಳ, ಸಲೀಂ ಉದರಿ, ರಹಿಮಾನ ಗದಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಬಶೀರಅಹ್ಮದ್ ಕೊಪ್ಪಳ ನಿರೂಪಿಸಿದರು. ಮಹ್ಮದಕಾಶೀಂ ಜಾಲಿಹಾಳ ಸ್ವಾಗತಿಸಿದರು. ಪೈಜಅಹ್ಮದ್ ಕಲಾದಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

