ಗದಗ

ಚಿಕ್ಕ ನಿವೇಶನದಲ್ಲಿ ಪ್ರೌಢಶಾಲೆ ನಿರ್ಮಾಣಕ್ಕೆ ವಿರೋಧ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 23
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಾತಲಗೇರಿ ಗ್ರಾಮದಲ್ಲಿ ಮೂಲ ಸೌಲಭ್ಯ ಒದಗಿಸಲು ಸಾಧ್ಯವಾಗದ ಹಾಗೂ ಚಿಕ್ಕ ನಿವೇಶನದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಿಸಲು ಹೊರಟಿರುವುದನ್ನು ವಿರೋಧಿಸಿ ಸಾರ್ವಜನಿಕರು ಇತ್ತೀಚಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆರ್.ಎಂ.ಎಸ್.ಎ. ಯೋಜನೆ ಅಡಿಯಲ್ಲಿ ಮಂಜೂರಾದ ಪ್ರೌಢಶಾಲೆ ನಿರ್ಮಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಗುರುತಿಸಿರುವ ನಿವೇಶನ ಕೇವಲ 110 ಅಡಿ ಉದ್ದ ಹಾಗೂ 30 ಅಡಿ ಅಗಲವಿದೆ. ಅದೇ ಜಾಗೆಯಲ್ಲಿ ಕೆರೆ, ಬೃಹತ್ ಗಾತ್ರದ ಓವರ್ ಹೆಡ್ ಟ್ಯಾಂಕ್, ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದೆ. ಇದೇ ನಿವೇಶನಕ್ಕೆ ಹೊಂದಿಕೊಂಡು ಕೃಷಿ ವಿಜ್ಞಾನ ಕೇಂದ್ರದ ಕಟ್ಟಡ ಇರುವುದಲ್ಲದೆ ಗ್ರಾಮದ ದೊಡ್ಡ ಕೆರೆಗೆ ಈ ನಿವೇಶನ ಮೂಲಕವೇ ನೀರು ಹರಿದು ಬರುತ್ತದೆ. ಇಂತಹ ನಿವೇಶನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾಪಂ ಅಧ್ಯಕ್ಷರು ಆಯ್ಕೆ ಮಾಡಿದ್ದು ಅವೈಜ್ಞಾನಿಕವಾಗಿದೆ.
ಗದಗ ನಗರದಿಂದ 5 ಕಿ.ಮೀ. ದೂರದಲ್ಲಿರುವ ಹಾತಲಗೇರಿ ಗ್ರಾಮವು ತೀರಾ ಹಿಂದುಳಿದಿದ್ದು, ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರ ಮಾಡಿದೆ. ಆದರೆ ಒಂದು ಪ್ರೌಢಶಾಲೆಗೆ ಕನಿಷ್ಠ 2 ಎಕರೆ ಜಾಗ ಬೇಕು ಎಂಬ ಸಾಮಾನ್ಯ ಜ್ಞಾನ ಇರದ ಅಧಿಕಾರಿಗಳು ಸ್ಥಳೀಯ ಪ್ರತಿನಿಧಿಗಳೊಂದಿಗೆ ಕೈ ಜೋಡಿಸಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಕೋಟ್ಯಂತರ ವೆಚ್ಚದ ಕಾಮಗಾರಿಯನ್ನು ಇಕ್ಕಟ್ಟಾದ ಜಾಗೆಯಲ್ಲಿ ಕೈಗೊಳ್ಳುತ್ತಿರುವುದರ ಹಿಂದೆ ಅನುದಾನದ ದುರುಪಯೋಗದ ಉದ್ದೇಶ ಇರುವುದು ಸ್ಪಷ್ಟ. ಕಾರಣ ಜಿಲ್ಲಾಧಿಕಾರಿ ಕೂಡಲೇ ಕಾಮಗಾರಿಯನ್ನು ನಿಲ್ಲಿಸಲು ಆದೇಶಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಪುರುಷೋತ್ತಮ ಪೂಜಾರ, ಮಾಹಾಂತೇಶ ಮಾಲ್ದಾರ್, ಕೆ.ಎನ್. ಮಾಲ್ದಾರ, ಬಿ.ಎಫ್. ಬನ್ನಿಕೊಪ್ಪ, ದ್ಯಾಮಣ್ಣ ಪೂಜಾರ, ಎಸ್.ಟಿ. ಪೂಜಾರ, ರಾಮಣ್ಣ ಕರಡಿ, ಸುಸವ್ವ ಪೂಜಾರ, ಮಲ್ಲವ್ವ ಮಾಲ್ದಾರ, ಎಸ್.ಆರ್. ಪೂಜಾರ, ಪಿ.ಎಂ. ಪೂಜಾರ, ವಿ.ವೈ. ಮೂಲಿಮನಿ, ಎಂ.ಬಿ. ಪೂಜಾರ, ಡಿ.ಎಂ. ಬಡಿಗೇರ, ಎಸ್.ಪಿ. ಹಾದಿಮನಿ, ಯಲ್ಲಪ್ಪ ಹಾದಿಮನಿ, ನಾಗಪ್ಪ ಹಡಪದ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.