ದೇವಸ್ಥಾನ ಅಭಿವೃದ್ಧಿಗೆ ದಾನಿಗಳ ಸಹಕಾರ ಅವಶ್ಯ: ಶಿವಾಚಾರ್ಯ ಶ್ರೀ
ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 25
ದೇವಸ್ಥಾನದ ಅಭಿವೃದ್ಧಿಗೆ ದಾನಿಗಳ ಸಹಕಾರ ಅವಶ್ಯ. ದಾನಿಗಳು ಹೆಚ್ಚು ಹೆಚ್ಚು ಮುಂದೆ ಬಂದು ಜನೋಪಯೋಗಿ ಕೆಲಸಗಳಿಗೆ ಕೈಜೋಡಿಸಬೇಕು ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.
ಸೋಮವಾರ ತಾಲೂಕಿನ ಶಿಂಗಟಾಲೂರು ಸುಕ್ಷೇತ್ರ ವೀರಭದ್ರ ದೇವರಿಗೆ ಶಿದ್ಲಿಂಗಪ್ಪ ಕರ್ಜಗಿ ಇವರ ನೇತೃತ್ವದಲ್ಲಿ ವೀರಭದ್ರೇಶ್ವರ ಮಠಕ್ಕೆ 21 ಕೆಜಿ ಬೆಳ್ಳಿಯ ವೀರಭದ್ರದೇವರ ಉತ್ಸವ ಮೂರ್ತಿ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಶಿಂಗ್ಟಾಲೂರು ವೀರಭದ್ರದೇವರಿಗೆ ರಾಜ್ಯದ ವಿವಿಧೆಡೆ ಅನೇಕ ಭಕ್ತರು, ದಾನಿಗಳಿದ್ದಾರೆ. ಶ್ರೀಮಠಕ್ಕಾಗಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಚಿನ್ನದ ಕಿರೀಟ ನೀಡಿದ್ದಾರೆ. ಭಕ್ತರು ಈ ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಈ ದಾನಗುಣ ಭಕ್ತರಲ್ಲಿ ಹೀಗೆ ಮುಂದುವರಿಯಬೇಕು ಎಂದರು.
ಕಲಕೇರಿ ವಿರೂಪಾಪುರ ಮಠದ ಮುಧುಕೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಕೊಡುವ ಭಕ್ತರು ಇರುವವರೆಗೂ ಯಾವುದೇ ಶುಭಕಾರ್ಯಗಳಾಗಲಿ ನಿರ್ವಿಘ್ನವಾಗಿ ನಡೆಯುತ್ತವೆ. ಮುಂಬರುವ ದಿನಗಳಲ್ಲಿ ಶಿಂಗ್ಟಾಲೂರು ಸುಕ್ಷೇತ್ರವನ್ನು ಸುಂದರವಾದ ತಾಣವನ್ನಾಗಿ ಮಾಡಲು ಎಲ್ಲ ಭಕ್ತರು ಶ್ರಮಿಸಬೇಕು ಎಂದರು. ಸಿದ್ದಲಿಂಗಪ್ಪ ಕರ್ಜಗಿ ಮಾತನಾಡಿದರು. ಸಿದ್ದಲಿಂಗಪ್ಪ ಕರ್ಜಗಿ ಹಾಗೂ ಶಿಲ್ಪಿ ನಾಗರಾಜ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ವೀರಭದ್ರೇಶ್ವದ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಮಲ್ಲಣ್ಣ ಕೋರಿಶೆಟ್ಟರ, ಶೇಖಣ್ಣ ಬಾಲೇಹೊಸೂರ, ವೀರಣ್ಣ ಶೆಟ್ಟರ, ಶೇಖರಗೌಡ ಪಾಟೀಲ, ಫಕೀರಡ್ಡಿ ನೀರಲಗಿ, ಶಿವಣ್ಣ ಜಂತ್ಲಿ, ಸುಭಾಷ ಬಾಗೇವಾಡಿ, ಕಾಶಯ್ಯ ಬೆಂತೂರಮಠ, ಈರಣ್ಣ ನವಲಿ, ಶ್ರೀಕಂಠಯ್ಯ ಬೀಳಗಿಮಠ, ಶಿವಾನಂದಪ್ಪ ಹಡಪದ, ಕೊಟ್ರಗೌಡ ಪಾಟೀಲ, ಅಣ್ಣಯ್ಯ ಪಾಟೀಲ, ಬಸವರಾಜ ಹುಮ್ನಾಬಾದ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

