ಶಿಶು ಸಂರಕ್ಷಣೆ ಅಗತ್ಯ: ಜಯಶ್ರೀ ನವಲಗುಂದ
ರೋಣ: ಮಕ್ಕಳಲ್ಲಿನ ಅಪೌಷ್ಟಿಕತೆ ನಿಯಂತ್ರಿಸಲು ತಾಯಿಯ ಪಾತ್ರ ಪ್ರಮುಖವಾಗಿದ್ದು, ಗರ್ಭಿಣಿ ತಾಯಂದಿರು ಮಗು ಸದೃಢವಾಗಿ ಬೆಳೆಯಲು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ಪುರಸಭೆ ಸದಸ್ಯೆ ಜಯಶ್ರೀ ನವಲಗುಂದ ಹೇಳಿದರು. ಅವರು ಪಟ್ಟಣದ ಶಿವಪೇಟೆ 5 ಕ್ರಾಸ್ನಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 5 ಮತ್ತು 16ರಲ್ಲಿ ಜರುಗಿದ ಗರ್ಭಿಣಿ ಹಾಗೂ ಬಾಣಂತಿ ತಾಯಂದಿರಿಗಾಗಿ ಏರ್ಪಡಿಸಿದ್ದ ಪೌಷ್ಟಿಕಾಂಶ ಪದಾರ್ಥಗಳ ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕಾಂಶ ಪದಾರ್ಥಗಳಾದ ಹಣ್ಣು, ತರಕಾರಿ, ಮೊಟ್ಟೆ, ಹಾಲು ಸೇರಿದಂತೆ ವಿವಿಧ ಪದಾರ್ಥಗಳನ್ನು ತಾಯಂದಿರು ನಿತ್ಯ ಸೇವಿಸಬೇಕು. ಗರ್ಭಿಣಿಯರು ತಮ್ಮ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದರು. ಆರೋಗ್ಯ ಸಹಾಯಕಿ ಕೆ.ಎಲ್. ಅಟಗಲ್ ಮಾತನಾಡಿದರು. ವಿಜಯಲಕ್ಷ್ಮೀ ಸಣ್ಣಕ್ಕಿ, ಶಾಂತಾ ಬಡಿಗೇರ ಸುವರ್ಣಾ ಲಿಂಗನಗೌಡ್ರ, ಪೀಪಾ ನಲೆ, ಶಿವಕ್ಕ ಹಕಾರಿ, ಸಾವಿತ್ರಿ ಗಾಣಿಗೇರ, ಲಾಲಬೀ ಬೊದ್ಲೆಖಾನ, ಪುಷ್ಪಾ ಬಡಿಗೇರ, ಅನಿತಾ ಚಂಗಳಿ, ಜನ್ನತ್ತಬಿ ನರಗುಂದ, ಗಿರಾಜ ಬಡಿಗೇರ ಮುಂತಾದವರು ಇದ್ದರು. ಅಂಗನವಾಡಿ ಕಾರ್ಯಕರ್ತೆ ಸಂಗಮ್ಮ ಬಡಿಗೇರ ನಿರೂಪಿಸಿ, ವಂದಿಸಿದರು.
ನಾಳೆ ಸಾಹಿತ್ಯ ಉಪನ್ಯಾಸ ಮಾಲೆ
ಗದಗ: ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಅ. 3ರ ಬೆಳಗ್ಗೆ 10.30ಕ್ಕೆ ನಗರದ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪಪೂ ಕಾಲೇಜಿನಲ್ಲಿ ಗೋಕಾಕ ಸಾಹಿತ್ಯ ಉಪನ್ಯಾಸ ಮಾಲೆ-12 ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸುವರು. ಗೋಕಾಕರ ನಾಟಕ ವಚನ ಕುರಿತು ರಂಗಕರ್ಮಿ ಸುಶೀಲೇಂದ್ರ ಜೋಶಿ ಹಾಗೂ ಗೋಕಾಕರ ನಾಟಕಗಳು ಕುರಿತು ಡಾ. ಬಾಳಾಸಾಹೇಬ ಲೋಕಾಪುರ ವಾಚನ ಮಾಡಲಿದ್ದಾರೆ. ಡಾ. ಪಿ.ಟಿ. ಲಕ್ಕಣ್ಣವರ, ಡಾ. ಅರ್ಜುನ ಗೋಳಸಂಗಿ, ಮಂಜುಳಾ ರಾಶಿನಕರ, ಡಾ. ಪ್ರಭು ಗಂಜಿಹಾಳ ಉಪಸ್ಥಿತರಿರುವರು ಎಂದು ಉಪನ್ಯಾಸ ಮಾಲೆಯ ಸಂಯೋಜಕ ಜಿನದತ್ತ ದೇಸಾಯಿ, ಸತೀಶ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಿಚಾರ ಸಂಕಿರಣ
ಗದಗ: ವಾರ್ತಾ ಇಲಾಖೆ ಗದಗ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಗದಗ ಇವರ ಸಹಯೋಗದಲ್ಲಿ ಮಹಾತ್ಮಾಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ವಿಚಾರಧಾರೆ ಕುರಿತು ವಿಚಾರ ಸಂಕಿರಣವು ಅ. 2ರ ಬೆಳಗ್ಗೆ 8ಕ್ಕೆ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಆರ್.ಕೆ. ಜಮಾದಾರ ಉದ್ಘಾಟಿಸುವರು. ಕಾಲೇಜಿನ ಪ್ರಾ. ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಉಪನ್ಯಾಸಕ ಜಿ.ಎನ್. ಕುರ್ತಕೋಟಿ, ಬಿ.ವಿ. ಸಜ್ಜನರ ಆಗಮಿಸುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ನಾಳೆ ಅಹವಾಲು ಸ್ವೀಕಾರ
ಗದಗ: ಜಿಲ್ಲೆಯ ಮಾಜಿ ಸೈನಿಕರ, ಮಾಜಿ ಸೈನಿಕರ ಅವಲಂಬಿತರ ಕುಂದು ಕೊರತೆಗಳನ್ನು ವಿಚಾರಿಸಲು, ಅಹವಾಲುಗಳನ್ನು ಸ್ವೀಕರಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಿಬ್ಬಂದಿಯವರು ಅ. 3ರಂದು ಬೆಳಗ್ಗೆ 10 ಗಂಟೆಗೆ ನಗರದ ಮುಳಗುಂದ ನಾಕಾ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಅಂದು ಮಾಜಿ ಸೈನಿಕರ ಅವಲಂಬಿತರು ತಮ್ಮ ಮೂಲ ದಾಖಲೆಗಳು ಹಾಗೂ ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಅವರನ್ನು ಭೇಟಿಯಾಗಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ನಾಳೆ ಜಿಲ್ಲಾ ವಕೀಲರ ಸಂಘದ ಚುನಾವಣೆ
ಗದಗ: ಜಿಲ್ಲಾ ವಕೀಲರ ಸಂಘದ 2013-15ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಪ್ರಕ್ರಿಯೆ ಪ್ರಕಟಗೊಂಡಿದ್ದು, ಅ. 3ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ನಂತರ ಮತಗಣನೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಅಹ್ವಾನ
ಗದಗ: 2013-14ನೇ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ವಿವಿಧ ಅರೆವೈದ್ಯಕೀಯ ಕೋರ್ಸ್ಗಳಲ್ಲಿ ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನರ್ಸಿಂಗ್ ತರಬೇತಿಯನ್ನು ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಇಮೇಲ್ ವಿಳಾಸ ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ಮೂಲಕ ಅರ್ಜಿ ಸಲ್ಲಿಸಲು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

