ಗದಗ

ತೋಂಟದ ಶ್ರೀಗಳು ಸಂಗೀತ ರಂಗದ ಜ್ಞಾನಿ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 3
ಗದುಗಿನ ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಕೇವಲ ಧರ್ಮ, ಆಧ್ಯಾತ್ಮ ರಂಗದ ಸಾಧಕರಲ್ಲ. ಸಂಗೀತದ ಎಲ್ಲ ದಿಗ್ಗಜರು, ಸಂಗೀತದ ಎಲ್ಲ ಆಯಾಮಗಳನ್ನು ತಿಳಿದಿರುವ ದಿವ್ಯ ಜ್ಞಾನಿಗಳು ಎಂದು ಗಾನಕಲಾ ಪರಿಪತ್ ಅಧ್ಯಕ್ಷ ಆರ್.ಕೆ. ಪದ್ಮನಾಭ ಹೇಳಿದರು.
ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ಜ. ತೋಂಟದ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಈಚೆಗೆ ಜರುಗಿದ 2139ನೇ ಶಿವಾನುಭವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಖಾಂಡ ಅಧ್ಯಯನಶೀಲರು, ಜ್ಞಾನ ಸಾಧಕರಾಗಿರುವ ಜ. ತೋಂಟದ ಸಿದ್ದಲಿಂಗ ಶ್ರೀಗಳು ಎಲ್ಲ ವಿಷಯಗಳ ಅರಿತ ಮಹಾನ್ ಪಂಡಿತರಾಗಿದ್ದಾರೆ. ಅವರ ಸಾನ್ನಿಧ್ಯದಲ್ಲಿ ನಡೆವ ಶಿವಾನುಭವದಲ್ಲಿ ತಮಗೆ ಸನ್ಮಾನ ದೊರೆತಿದ್ದು ಮರೆಯಲಾರೆ ಎಂದರು.
ಲಕ್ಷ್ಮೇಶ್ವರದ ಚಂದನ ಶಾಲಾ ಸಂಸ್ಥೆ ಸಂಸ್ಥಾಪಕ ಚೇರ್‌ಮನ್ ಟಿ. ಈಶ್ವರ ಮಾತನಾಡಿ, ಜ. ತೋಂಟದ ಶ್ರೀಗಳು ಇಂದು ಕಣ್ಣಿಗೆ ಕಾಣುವ ಬಸವಣ್ಣನವರಾಗಿದ್ದಾರೆ. ಪೂಜ್ಯರ ನೇತೃತ್ವದಲ್ಲಿ ಪ್ರತಿ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮಗಳು ಜ್ಞಾನಜಾಗೃತಿಯ ಸಾಧನವಾಗಿವೆ ಎಂದರು.
 ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಶ್ರೀಗಳು ಆಶೀರ್ವಚನ ನೀಡಿದರು. ಬಸವರಾಜ ಜಿಗಜೇವಣಿ ಹಾಗೂ ರಂಗನಗೌಡ ಮಾಲಗಿತ್ತಿ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಚಿಂತನ ನಡೆಯಿತು. ಈ ಸಂದರ್ಭ ಪ್ರಾ. ಎಸ್.ಎಚ್. ಪಾಟೀಲ ಡಾ. ಎಸ್.ಕೆ. ಮೇಟಿ, ಚನ್ನಪ್ಪ ಯಳವತ್ತಿ, ಹುಲಗಪ್ಪ ತಳವಾರ, ಚಂದನ್ ಮುಂತಾದವರನ್ನು ತೋಂಟದ ಶ್ರೀಗಳು ಆಶೀರ್ವದಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹ ಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿ ಚೇರ್‌ಮನ್ ಪ್ರೊ. ಎಸ್.ಎನ್. ಆದಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಜಿ.ಪಿ. ಕಟ್ಟಿಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.