ವಿದೇಶ ಯಾತ್ರೆಗಳಿಂದ ಜ್ಞಾನವೃದ್ಧಿ
ಗದಗ: ವಿದೇಶ ಯಾತ್ರೆಗಳಿಂದ ಮನುಷ್ಯ ಹೊಸತನದ ಜತೆಗೆ ಅಭಿವೃದ್ಧಿಯ ಅಂಶಯಗಳನ್ನು ಅರಿಬಲ್ಲನೆಂದು ಡಾ. ಎನ್.ಎಸ್. ಬಿರಾದಾರ ಹೇಳಿದರು.
ಅವರು ನಗರದ ವಿಜಯಕುಮಾರ ಶೆಟ್ಟರ ನಿವಾಸದಲ್ಲಿ ಭಾನುವಾರ ಜರುಗಿದ ಸನ್ಮಾನ ಸಮಾರಂಭದಲ್ಲಿ ವಿದೇಶ ಯಾತ್ರೆಯ ಅನುಭವಗಳನ್ನು ಹಂಚಿಕೊಂಡು ಮಾತನಾಡಿದರು.
ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಮಾದರಿಯಾಗಿದ್ದು, ವಿದೇಶಗಳಲ್ಲೂ ಅವು ಪೂಜ್ಯನೀಯ ಸ್ಥಾನ ಹೊಂದಿವೆ. ಪ್ರಗತಿಯ ದೃಷ್ಟಿಯಿಂದ ನೋಡಿದಾಗ ಆರ್ಥಿಕವಾಗಿ ನಾವಿನ್ನೂ ಹಿಂದುಳಿದಿದ್ದೇವೆ. ವಿದೇಶಗಳಲ್ಲಿ ಸ್ವಚ್ಛತೆಗೆ ಮತ್ತು ಮಾನವೀಯತೆಗೆ ಮಹತ್ವ ನೀಡಲಾಗಿದೆ ಎಂದರು. ನಗರಸಭೆಯ ಮಾಜಿ ಅಧ್ಯಕ್ಷ ಡಾ. ಆರ್.ಎನ್. ಗೊಡಬೋಲೆ ಮಾತನಾಡಿ, ದೇಶ-ವಿದೇಶ ಸುತ್ತುವಿಕೆಯಿಂದ ಜ್ಞಾನ ವೃದ್ಧಿಸುವುದಲ್ಲದೆ ತಿಳಿವಳಿಕೆ ಮೂಡಿ ಬರುತ್ತದೆ ಎಂದರು.
ಡಾ. ಅನಂತ ಶಿವಪುರ ಮಾತನಾಡಿ, ಪ್ರಗತಿಯ ಪಥದಲ್ಲಿರುವ ವಿದೇಶಗಳ ಕಾರ್ಯವೈಖರಿ, ಜ್ಞಾನ ವಿಜ್ಞಾನಗಳನ್ನು ನಾವು ಇನ್ನಷ್ಟು ಅರಿಯಬೇಕಿದೆ ಎಂದರು. ನಗರಸಭೆ ಸದಸ್ಯ ಮಂಜುನಾಥ ಪೂಜಾರ, ಗದಗ-ಬೆಟಗೇರಿ ನಗರಸಭೆಯ ವಿರೋಧ ಪಕ್ಷದ ಮಾಜಿ ನಾಯಕ ವಿಜಯಕುಮಾರ ಶೆಟ್ಟರ್ ಹಾಗೂ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಶೇಖರ ಸಜ್ಜನರ ಮಾತನಾಡಿದರು. ಗದಗ-ಬೆಟಗೇರಿ ನಗರಸಭೆಯ ನಿವೃತ್ತ ಪೌರಾಯುಕ್ತ ಜಗದೀಶಚಂದ್ರ ನಾಡಗೌಡ್ರ, ಡಾ. ಚಾರುಮತಿ ಗೊಡಬೋಲೆ, ಡಾ. ವಾಣಿ ಶಿವಪುರ, ಡಾ. ಎಂ.ಬಿ.ನಿಂಬಣ್ಣವರ, ಬಸವರಾಜ ದಡೂತಿ, ವಿಶ್ವನಾಥ ಶೆಟ್ಟರ, ಗೋಪಾಲ ಮಳಗಿ ಮುಂತಾದವರು ಉಪಸ್ಥಿತರಿದ್ದರು. ಅಬ್ದುಲ್ರೆಹಮಾನ ಹುಯಿಲಗೋಳ ಸ್ವಾಗತಿಸಿ, ನಿರೂಪಿಸಿದರು. ರಾಜೇಶ್ವರಿ ಶೆಟ್ಟರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

