ಗದಗ

ರಾಷ್ಟ್ರ ಮಟ್ಟದ ಅಟ್ಯಾ-ಪಟ್ಯಾದಲ್ಲಿ ತೃತೀಯ ಸ್ಥಾನ

Published On :

ನರೇಗಲ್ಲ: ಪಟ್ಟಣದ 6 ವಿದ್ಯಾರ್ಥಿನಿಯರನ್ನು ಒಳಗೊಂಡಿದ್ದ ರಾಜ್ಯ ಅಟ್ಯಾಪಟ್ಯಾ ತಂಡವು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಗಳಿಸಿದೆ ಎಂದು ತರಬೇತುದಾರ ಕೆ.ಸಿ. ಜೋಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್‌ನ ಛತ್ರಪತಿ ಶಿವಾಜಿ ಮಹಾರಾಜ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಅಟ್ಯಾ-ಪಟ್ಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವು ನರೇಗಲ್ಲದ ಲಕ್ಷೀ ಯಕ್ಕುಂಡಿ ನಾಯಕತ್ವದಲ್ಲಿ ಭಾಗವಹಿಸಿತ್ತು. ತಂಡದಲ್ಲಿ ನೇತ್ರಾ ರೋಣದ, ವೀಣಾಶ್ರೀ ಮರಿನಾಯ್ಕರ, ಪುಷ್ಪಾ ಗೋಡಿ. ವಿಜಯಲಕ್ಷೀ ಜೋಗಿ, ಸೌಮ್ಯ ಹೊಸಮನಿ (ನರೇಗಲ್ಲನ 6 ವಿದ್ಯಾರ್ಥಿನಿಯರು) ಸವಿತಾ ಕುಲಕರ್ಣಿ, ಪೂಜಾ ಗಾಳಿ (ಯಾವಗಲ್), ಸವಿತಾ, ಕೆಂಚಮ್ಮ (ಹುಬ್ಬಳ್ಳಿ) ಸಿಂಧು (ಬೆಳಗಾವಿ), ಗಿರಿಜಾ (ಗೋಕಾಕ) ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅತ್ಯಂತ ತುರುಸಿನಿಂದ ಕೂಡಿದ್ದ ಈ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವು ಆರಂಭದಲ್ಲಿ ಓಡಿಸ್ಸಾ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳ ತಂಡಗಳನ್ನು ಸೋಲಿಸಿ ಸೆಮಿಫೈನಲ್ ಪಂದ್ಯದಲ್ಲಿ ಪಾಂಡಿಚೇರಿ ವಿರುದ್ಧ ರಾಜ್ಯ ತಂಡವು ಪರಾಭವನ್ನು ಹೊಂದುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು. ತಂಡದೂಂದಿಗೆ ತರಬೇತುದಾರ ಶಿಕ್ಷಕ ಕೆ.ಸಿ. ಜೋಗಿ, ಕೆ.ಟಿ. ನಡಮನಿ, ಆರ್.ಎಚ್. ರೇವಡಿಗಾರ ತೆರಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.