ಗದಗ

ಮುಂಡರಗಿ: ನೂತನ ಪದಾಧಿಕಾರಿಗಳ ಆಯ್ಕೆ

Published On :

ಮುಂಡರಗಿ: ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಮುಂಡರಗಿ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆಯು ಈಚೆಗೆ ಜರುಗಿತು. ಸಂಘದ ನೂತನ ಅಧ್ಯಕ್ಷರಾಗಿ ಮುಂಡರಗಿ ಎಂ.ಎಸ್. ಡಂಬಳ ಕನ್ಯಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಿ.ಕೆ .ಪಾಟೀಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಂಬಳ ಜೆ.ಟಿ. ಪ್ರೌಢ ಶಾಲೆಯ ಎಸ್.ಬಿ. ಹೂಗಾರ, ಬಾಗೇವಾಡಿ ಪ್ರೌಢಶಾಲೆಯ ಆರ್.ಎಲ್. ಪಾಟೀಲ, ಕಾರ್ಯದರ್ಶಿಯಾಗಿ ವೆಂಕಟಾಲೂರ ಬಸವೇಶ್ವರ ಪ್ರೌಢಶಾಲೆಯ ಎಸ್.ಎಂ. ಅಗಡಿ, ಸಹ ಕಾರ್ಯದರ್ಶಿಯಾಗಿ ಮುಂಡರಗಿ ಜ.ಅ.ಸಂ.ಪ.ಪೂ. ಮಹಾವಿದ್ಯಾಲಯದ  ಎಸ್.ವಿ. ಮುಂಡರಗಿ, ಸಂಘಟನಾ ಕಾರ್ಯದರ್ಶಿಯಾಗಿ ಮುಂಡರಗಿ ಜೆ.ಟಿ.ಪ್ರೌಢಶಾಲೆಯ ಆರ್.ಟಿ. ಸಿಂಪಿ, ಖಜಾಂಚಿಯಾಗಿ ಪೇಠಾಲೂರ ಹಾಲಶಿವಯೋಗೀಶ್ವರ ಪ್ರೌಢ ಶಾಲೆಯ ಡಿ.ಆರ್. ಚೌಡಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಎಸ್.ಎಸ್. ಇನಾಮತಿ, ಬಿ.ಎಫ್. ಹೊಸಮನಿ, ಎಂ.ಕೆ. ರೋಣದ, ಆರ್.ಬಿ. ಕಾಡಯ್ಯನಮಠ, ಎನ್.ಎಸ್. ಅಲ್ಲಿಪುರ, ಎಸ್.ಎಚ್. ಬಂಡಿವಡ್ಡರ, ಸಿ.ಎಂ.ಚಿನ್ನಿಕಟ್ಟಿ, ಪಿ.ವಿ. ಪಾಟೀಲ, ಎಸ್.ಎಫ್. ಮಳ್ಳಿ, ಎಂ. ಪ್ರವೀಣ, ಎಸ್.ಎನ್. ಕಲ್ಲಿಗನೂರ, ಬಿ.ಎಸ್. ಕಣವಿ, ಎಂ.ಎಂ. ಗದ್ದೀಗೌಡ್ರ, ಎಸ್.ವಿ. ಕುಸುಗಲ್, ರಂಗಣ್ಣವರ, ಎಎಸ್.ಎಸ್. ವಾಲಿ ಆಯ್ಕೆಯಾಗಿದ್ದಾರೆ ಎಂದು ಪಿ.ಎಂ. ಪಾಟೀಲ, ಎಸ್.ಎಂ. ಹೊಸಮಠ, ಎಸ್.ಬಿ. ಇಟಗಿ, ಕೆ.ಎ. ಹಿರೇಮಠ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.