ಗದಗ

ಬನಶಂಕರಿ ಪುರಾಣ ಮಂಗಲ

Published On :

ಬ್ಯಾಡಗಿ: ಅಸುರರನ್ನು ಸಂಹರಿಸಿ ದುಷ್ಟಶಕ್ತಿಗಳ ಪ್ರಾಬಲ್ಯವನ್ನು ಮೆಟ್ಟಿ ನಿಂತು ದೇವರನ್ನೇ ರಕ್ಷಿಸಿದ ಕೀರ್ತಿ ತಾಯಿ ಬನಶಂಕರಿಗೆ ಸಲ್ಲುತ್ತದೆ ಎಂದು ರೇವಣಶಿದ್ಧಯ್ಯ ಶಾಸ್ತ್ರಿ ತಿಳಿಸಿದರು. ತಾಲೂಕಿನ ಆಣೂರು ಗ್ರಾಮದ ಶ್ರೀ ಬನಶಂಕರಿದೇವಿ ಭಜನಾ ಮಂಡಳಿ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಬನಶಂಕರಿದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ತಿಕ ವರ್ಗ ತನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಅನುಗುಣವಾಗಿ ದೇವಿ ಅವರ ಇಷ್ಟಾರ್ಥ ನೆರವೇರಿಸುತ್ತಾಳೆ. ನವರಾತ್ರಿಯ 9 ದಿನಗಳಲ್ಲಿ ಮುತ್ತೈದೆಯರು ಉಪವಾಸ ಕೈಗೊಂಡಿದ್ದಾರೆ. ದೇವಿ ಅವರ ಶಕ್ತಿಯನ್ನು ಇಮ್ಮಡಿಗೊಳಿಸಿ, ನಿರಂತರ ಕಾಪಾಡುವ ಭರವಸೆ ನೀಡಿದ್ದಾಳೆ ಎಂದರು. ಒಂಬತ್ತು ದಿನ ಉಪವಾಸ ಆಚರಿಸಿದ ಸುಮಂಗಲಿಯರಿಗೆ ಗ್ರಾಮಸ್ಥರು ಉಣಬಡಿಸಿ, ವ್ರತ ಅಂತ್ಯಗೊಳಿಸಿದರು.
ಭಜನಾ ಮಂಡಳಿ ಅಧ್ಯಕ್ಷ ಶಂಕ್ರಪ್ಪ ಗೂಳೇರ, ಮಲ್ಲಿಕಾರ್ಜುನಸ್ವಾಮಿ ಪಾಟೀಲ, ಗ್ರಾಪಂ ಸದಸ್ಯ ಬಸವರಾಜ ಹಲ ಗೇರಿ, ಭರಮಪ್ಪ ಗೂಳೇರ, ಶಿವಪ್ಪ ರಿತ್ತಿ, ಪರಮೇಶಪ್ಪ ಹೊಸಗೌಡ್ರ, ಸಂಕಪ್ಪ ಹಲಗೇರಿ ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.