ಗದಗ

ಅಲ್ಲಾನಿಂದ ಮಾನವರ ಪರೀಕ್ಷೆ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 16
ಅಲ್ಲಾಹನು ಜಗತ್ತಿನ ಎಲ್ಲ ಮನುಜರನ್ನು ತನ್ನ ಪ್ರೀತಿಗೆ ಪಾತ್ರರಾಗಲು ಪರೀಕ್ಷೆಗೊಳಪಡಿಸುತ್ತಾನೆ. ಆದರೆ ಪರೀಕ್ಷಿಸುವ ರೀತಿ ವಿಭಿನ್ನವಾಗಿರುತ್ತದೆ ಎಂದು ಮೌಲಾನಾ ಅಬ್ದುಲ್ ಲತೀಫ್ ಖತೀಬ ಹೇಳಿದರು.  
ಅವರು ಬುಧವಾರ ಪಟ್ಟಣದ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನೆರೆದ ಸಹಸ್ರಾರು ಸಂಖ್ಯೆಯ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದರು. ಆತ್ಮ ಸಾಕ್ಷಾತ್ಕಾರದ ಪವಿತ್ರ ರಂಜಾನ್ ಹಾಗೂ ತ್ಯಾಗ ಬಲಿದಾನಗಳ ಸಂಕೇತದ ಬಕ್ರೀದ್ ಮುಸ್ಲಿಂ ಧರ್ಮಕ್ಕೆ ಕೊಡುಗೆಯಾಗಿ ಬಂದಿರುವ ಧಾರ್ಮಿಕ, ನೈತಿಕತೆಯ ಹಬ್ಬಗಳಾಗಿವೆ. ಇಂದು ತ್ಯಾಗ ಬಲಿದಾನ ಗೈದವರನ್ನು ನೆನಪಿಸಿಕೊಳ್ಳುವ ಸುದಿನವಾಗಿದೆ ಎಂದರು.
ಮುಸ್ಲಿಂ ಬಾಂಧವರು ಬೆಳಗ್ಗೆ 9ಕ್ಕೆ ಪಟ್ಟಣದ ಜುಮ್ಮಾ ಮಸೀದಿಯಿಂದ ಅಲ್ಲಾನ ನಾಮಸ್ಮರಣೆ ಮಾಡುತ್ತ ಮೆರವಣಿಗೆ ಮೂಲಕ ಹೊರಟು ಹರಿಪುರ ಗ್ರಾಮದ ಹೊರವಲಯದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಹಾಜಿ ಅಬ್ಬು ಕುಬುಸದ, ಬಾಬುಸಾಬ ಮನಿಯಾರ, ಗೌಸುಸಾಬ್ ಕುಬುಸದ, ಎ.ಎ.ಪಠಾಣ, ಪಪಂ ಸದಸ್ಯ ಚಾಂದಸಾಬ್ ಮುಳಗುಂದ, ಹುಮಾಯೂನ ಮಾಗಡಿ, ಬುಡನಶ್ಯಾ ಮಕಾನದಾರ, ಶೌಖತ ಅಲಿ ಬುವಾಜಿ, ರಿಯಾಜಅಹ್ಮದ ಫಣಿಬಂದ, ಬಾಬು ತಹಸೀಲ್ದಾರ್, ಎ.ಎ. ಅತ್ತಾರ, ಎ.ಎಸ್. ಮಕಾನದಾರ, ಡಿ.ಎಚ್. ಸರಕವಾಸ, ಅಕ್ಬರ್ ಯಾದಗಿರಿ, ಎಚ್.ಎಚ್. ಖಾಜಿ, ಕೆ.ಎಫ್. ರಮಜಾನಿಯವರ, ನಜೀರ ಡಂಬಳ, ರಫೀಕ ಆದ್ರಳ್ಳಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.