ಗದಗ

ಕ್ರೀಡೆಯಿಂದ ಭವಿಷ್ಯ ರೂಪಿಸಿಕೊಳ್ಳಿ

Published On :

ನರೇಗಲ್ಲ: ನಿತ್ಯ ಪಾಠಗಳತ್ತ ಗಮನ ನೀಡುವ ನೀವು ರಜೆ ದಿನಗಳಲ್ಲಿ ಆಟೋಟಗಳತ್ತ ಗಮನಹರಿಸಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.
ಅವರು ಸ್ಥಳೀಯ ಹಠಯೋಗಿ ಕ್ರೀಡಾ ಸಂಘದ ಆಶ್ರಯದಲ್ಲಿ ದಸರೆ ರಜೆಯಲ್ಲಿ ನರೇಗಲ್ಲ ಮತ್ತು ಸುತ್ತಲಿನ ಗ್ರಾಮಗಳ ಮಕ್ಕಳಿಗಾಗಿ ಸಂಘವು ಏರ್ಪಡಿಸಿದ್ದ ಯೋಗಾ ಸ್ಥಿರ ಮಲ್ಲಕಂಬ, ರೋಪ್ ಮಲ್ಲಕಂಬ ಮತ್ತು ಜಂಪ್‌ರೋಪ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದು ಕ್ರೀಡೆಗೆ ಹೆಚ್ಚಿನ ಮಹತ್ವವಿದೆ. ಕ್ರೀಡೆಗಳ ಮೂಲಕವೇ ನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಳ್ಳಬಹುದು. ಅದಕ್ಕಾಗಿ ಕ್ರೀಡೆಗಳತ್ತ ಒಲವು ಬೆಳೆಸಿಕೊಳ್ಳಿ ಎಂದು ಹೇಳಿದ ಅವರು, ಈ ಸಂಘವು ದಸರೆ ರಜೆಯಲ್ಲಿ ಕೈಗೊಂಡಿರುವ ತರಬೇತಿ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಕೆ.ಐ. ಬಿಸನಳ್ಳಿ ಮಾತನಾಡಿ, ಮಲ್ಲಕಂಬ, ಜಂಪ್‌ರೋಪ್‌ಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ಈ ನಿಟ್ಟಿನಲ್ಲಿ ನಮ್ಮ ನರೇಗಲ್ಲ ಪಟ್ಟಣದ ಅನೇಕ ವಿದ್ಯಾರ್ಥಿಗಳು ಹಲವಾರು ಸಾಧನೆ ಮಾಡಿದ್ದಾರೆ ಎಂದರು. ಹಠಯೋಗಿ ಕ್ರೀಡಾ ಸಂಘದ ಅಧ್ಯಕ್ಷ ಅಶೋಕ ಬೇವಿನಕಟ್ಟಿ ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡರ, ಸದಸ್ಯ ವರುಣ ಸಂಗನಾಳ, ತೋಟಗಂಟಿಯ ನಾಗರಾಜ ಹುಯಿಲಗೋಳ, ವೀರಣ್ಣ ಗುಜಮಾಗಡಿ, ಮುಖ್ಯ ತರಬೇತುದಾರ ವಿ.ಎ. ಕುಂಬಾರ, ಸಹಾಯಕ ತರಬೇತುದಾರ ಬಸವರಾಜ ಶಿದ್ನೆಕೊಪ್ಪ, ಶಿಕ್ಷಕ ಎಸ್.ಆರ್. ಕಿನ್ನಾಳ ಇದ್ದರು.
ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿ: ವನ್ನಾಲ
ಗಜೇಂದ್ರಗಡ: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಉತ್ತಮ ಕಾರ್ಯಕ್ಕೆ ಮುಂದಾಗುವ ಮೂಲಕ ಹೊಸ ಅಧ್ಯಾಯ ಬರೆಯೋಣ ಎಂದು ನೂತನ ಸ್ಥಾಯಿ ಸಮಿತಿ ಚೇರ್‌ಮನ್ ಅಶೋಕ ವನ್ನಾಲ ಹೇಳಿದರು. ಪುರಸಭೆಯ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಚೇರ್‌ಮನ್ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪುರಸಭೆ ಕಚೇರಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಅಧಿಕಾರಿಗಳು ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಪುರಸಭಾ ಆಡಳಿತಕ್ಕೆ ಸಹಕಾರ ನೀಡಬೇಕು ಎಂದರು. ಪುರಸಭಾ ಅಧ್ಯಕ್ಷೆ ಕವಿತಾ ಜಾಲಿಹಾಳ ಮಾತನಾಡಿದರು. ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಪ್ರಭು ಚವಡಿ, ಶರಣಪ್ಪ ರೇವಡಿ, ಮಂಜು ಬಡಿಗೇರ, ರವಿ ಕಲಾಲ, ಸುಮಿತ್ರಾ ತೊಂಡಿಹಾಳ, ಕಳಕಪ್ಪ ಗುಳೇದ, ಷಣ್ಮುಕಪ್ಪ ಚಿಲಝರಿ, ಬುಡ್ಡಪ್ಪ ಮೂಲಿಮನಿ, ಶಿವಪ್ಪ ಸಂಕನೂರ, ಶೇಕಣ್ಣ ಇಟಗಿ, ವಿಜಯಕುಮಾರ ರಾಯಬಾಗಿ, ಸಿ.ವಿ. ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.