ಗದಗ

ರೋಣದಲ್ಲಿ ಬಕ್ರೀದ್ ಆಚರಣೆ

Published On :

ಕನ್ನಡಪ್ರಭ ವಾರ್ತೆ, ರೋಣ, ಅ. 16
ಬಕ್ರೀದ್ ಹಬ್ಬದ ಪ್ರಯುಕ್ತ ಬುಧವಾರ ರೋಣ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮುಸ್ಲಿಂ ಬಾಂಧವರು ಮಸೀದಿ ಮತ್ತು ಈದ್ಗಾ ಮೈದಾನಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಂಭ್ರಮದಿಂದ ಬಕ್ರೀದ್ ಆಚರಿಸಿದರು.
ರೋಣದಲ್ಲಿ ಮಂಗಳವಾರ ರಾತ್ರಿ ಮಳೆಯಾಗಿದ್ದರಿಂದ ಪ್ರತಿವರ್ಷದಂತೆ ಈ ಬಾರಿ ಅಂಜುಮನ್ ಪ್ರೌಢಶಾಲೆ ಮೈದಾನದಲ್ಲಿ ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸದೇ ಪಟ್ಟಣದಲ್ಲಿ ವಿವಿಧೆಡೆ ಇರುವ ಮಸೀದಿ ಹಾಗೂ ಹಳೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಾಲೂಕಿನ ಮಾರನಬಸರಿ, ಸೂಡಿ, ಹಿರೇಹಾಳ, ಹೊಸಳ್ಳಿ, ಅರಹುಣಸಿ, ಜಕ್ಕಲಿ, ಸವಡಿ, ಮಲ್ಲಾಪುರ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಗ್ರಾಮಗಳಲ್ಲಿನ ಮಸೀದಿಗಳಲ್ಲಿ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಮೌಲಾನ ಮೆಹಬೂಬ ಹುರಕಡ್ಲಿ ಅವರು ಕುರಾನ ಪಠಿಸುವ ಮೂಲಕ ಶುಭ ಸಂದೇಶ ಸಾರಿದರು. ಅಕ್ಬರಅಲಿ ಹುಲ್ಲೂರ, ಮಕ್ತುಮ್ ಸೈಯದ್, ಶಬ್ಬೀರ ಖಾಜಿ, ಭಾಷಾಸಾಬ್ ದೇಸಾಯಿ, ವಿ.ಎಸ್. ಗದಗ, ರಾಜೇಸಾಬ ಯಲಿಗಾರ, ಜೀವನಸಾಬ ದೇಸಾಯಿ, ಖಾದೀರಸಾಬ ಸಂಕನೂರ, ಕಲೀಲ ರಾಮದುರ್ಗ, ಹಸನಸಾಬ ಅತ್ತಾರ, ಅಮೀನಸಾಬ ಜಾಲಿಹಾಳ, ಫಕ್ರುಸಾಬ ಕಂಪ್ಲಿ, ಮಲಿಕಸಾಬ್ ವಡಗೇರಿ, ಇನಾಯತ ತರಫದಾರ, ಯಮನೂರಸಾಬ ನಧಾಪ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.