ಗದಗ

ಮುಂಡರಗಿ:26ರಂದು ಕಿತ್ತೂರ ಚನ್ನಮ್ಮ ವಿಜಯೋತ್ಸವ

Published On :

ಮುಂಡರಗಿ: ಸ್ವಾತಂತ್ರ್ಯ ಹೋರಾಟಗಾರ್ತಿ, ವೀರಶೈವ ಪಂಚಮಸಾಲಿ ಸಮಾಜದ ವೀರರಾಣಿ ಕಿತ್ತೂರ ಚನ್ನಮ್ಮನವರ 190 ವಿಜಯೋತ್ಸವವನ್ನು ಅ. 24ರಂದು ನರಗುಂದ, 25ರಂದು ಯಾದಗಿರಿ, 26ರಂದು ಮುಂಡರಗಿಯಲ್ಲಿ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ದಾವಣಗೆರೆಯಿಂದ ಮುಂಡರಗಿ ಮಾರ್ಗವಾಗಿ ನರಗುಂದಕ್ಕೆ ತೆರಳುವ ಸಂದರ್ಭದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಹಾಗೂ ಪ್ರತಿಭಾವಂತ ಪಂಚಮಸಾಲಿ ಸಮಾಜದ ಹಿರಿಯರಿಗೆ, ಯುವಕರಿಗೆ, ವಿದ್ಯಾರ್ಥಿಗಳು, ಮುಂಡರಗಿ ಪುರಸಭೆಯ 23 ಸದಸ್ಯರಿಗೆ ಸನ್ಮಾನಿಸಲಾಗುವುದು. ಈ ಹಿಂದೆ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಬೇಕೆಂದು ಮುಂಡರಗಿಯಿಂದಲೇ ಹೋರಾಟ ಆರಂಭಿಸಲಾಯಿತು. ಅದಕ್ಕಾಗಿ ಹಿಂದಿನ ಸರ್ಕಾರ ವಿಶೇಷ ಸಮಿತಿಯೊಂದನ್ನು ನೇಮಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರವೂ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದೆ. ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಗೆ ಮುಂದಾಗಬೇಕು. ಈ ವಿಜಯೋತ್ಸವವು ಈ ಬಾರಿ 1 ತಿಂಗಳ ಕಾಲ ಜರುಗಲಿದೆ ಎಂದರು.
ಆರ್.ಬಿ. ಹಕ್ಕಂಡಿ, ಎಸ್.ವಿ. ಪಾಟೀಲ, ರಜನೀಕಾಂತ ದೇಸಾಯಿ, ಸೋಮಣ್ಣ ಭಾವಿಹಳ್ಳಿ, ಕೋಟ್ರಗೌಡ ಪಾಟೀಲ, ಪ್ರೊ. ಎ.ವೈ. ನವಲಗುಂದ, ಯಲ್ಲಪ್ಪ ಹೊಂಬಳಗಟ್ಟಿ, ಅನ್ನಪೂರ್ಣ ದೇಸಾಯಿ, ರೇಖಾ ಮೋಹನ್ ದೇಸಾಯಿ, ಸುರೇಶ ಮಾಳೆಕೊಪ್ಪ, ಪ್ರಭು ಅಬ್ಬಿಗೇರಿ, ಶಂಕರಗೌಡ ಪಾಟೀಲ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.