ವೃತ್ತಿ ನಿಷ್ಠೆ ಇರುವವರೆ ನಿಜ ಶರಣರು
ನರೇಗಲ್ಲ: ಯಾರು ತಮ್ಮ ವೃತ್ತಿಯಲ್ಲಿ ಕಾಯಾ, ವಾಚಾ, ನಿಷ್ಠೆಯಿಂದ ಕಾರ್ಯೋನ್ಮುಖವಾಗಿ ನಡೆಯುವವರೊ ಅವರೇ ನಿಜವಾದ ಶರಣರು ಎಂದು ಮುಗಳಖೋಡ ಶಾಖಾ ಅಬ್ಬಿಗೇರಿ-ನರಗುಂದ ಮಠದ ಬಸವರಾಜ ಶ್ರೀಗಳು ಹೇಳಿದರು.
ಅವರು ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಈಚೆಗೆ ಗುರುಸಿದ್ಧರಾಮೇಶ್ವರ ಭೋವಿ ಯುವಕರ ಸಮಿತಿಯಿಂದ ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸನ್ಮಾನ ಹಾಗೂ ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಮನುಷ್ಯರು ತಮ್ಮ ವೃತ್ತಿಯಲ್ಲಿನ ಕೀಳರಿಮೆಯನ್ನು ಮರೆಮಾಚಿ ಧರ್ಮದಿಂದ ಮುನ್ನಡೆದಲ್ಲಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಸಮಾಜ ಅವರ ಪ್ರಾಮಾಣಿಕತೆಗೆ ಅನುಗುಣವಾಗಿ ಗೌರವಿಸುತ್ತದೆ. ಭೋವಿ ಸಮಾಜದ ಜನ ತಮ್ಮ ಸುತ್ತಲಿನ ಸರ್ವ ಜನಾಂಗದವರ ಸೂರುಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ತಾವು ಮಾತ್ರ ಬಡವರಾಗಿಯೇ ಉಳಿಯುತ್ತಾರೆ. ಅಂತವರನ್ನು ಸರ್ಕಾರ ಹಾಗೂ ಸಂಬಂಧಿಸಿದ ಕಾರ್ಮಿಕ ಇಲಾಖೆ ಅವರಿಗೆ ಮೀಸಲಿರುವ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಬೇಕು ಎಂದರು.
ಕಾರ್ಮಿಕರ ಕಾರ್ಡ್ ವಿತರಿಸಿದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಭೋವಿ ಸಮಾಜ ತಮ್ಮಲ್ಲಿರುವ ತಾತ್ಸಾರ ಮನೋಭಾವವನ್ನು ತೊರೆದು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಆಧುನಿಕತೆಯ ಜೀವನಕ್ಕೆ ಕರೆ ತನ್ನಿರಿ. ಹಿಂದುಳಿದ ಮಕ್ಕಳಿಗಾಗಿ ಸರ್ಕಾರ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಪ್ರಮುಖವಾಗಿ ಅನ್ನಭಾಗ್ಯ, ಕ್ಷೀರಭಾಗ್ಯದಂತ ಸೌಕರ್ಯಗಳನ್ನು ನೀಡುತ್ತಿರುವುದರಿಂದ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯನ್ನು ಹೊಂದಿರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧರಾಮೇಶ್ವರ ಭೋವಿ ಯುವಕ ಸಮಿತಿಯ ಮುತ್ತಣ್ಣ ಬಂಡಿವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ಗ್ರಾಪಂ ಅಧ್ಯಕ್ಷೆ ಶೇಖಮ್ಮ ನೀರಲೋಟಿ, ವೀರಣ್ಣ ಹರದಾರಿ, ಅಂದಪ್ಪ ವೀರಾಪುರ, ದುರಗಪ್ಪ ಬಂಡಿವಡ್ಡರ, ಸಂಗನಗೌಡ ಪಾಟೀಲ, ಎಚ್.ಡಿ. ಬಸವರಡ್ಡೇರ, ಯುಸೂಫ ಇಟಗಿ, ಬಾಲಪ್ಪ ಬಂಡಿವಡ್ಡರ, ಮಾರುತಿ ಬಂಡಿವಡ್ಡರ ಪಾಲ್ಗೊಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

