ವಾಲ್ಮೀಕಿ ಜಯಂತಿ ಆಚರಣೆ, ಮೆರವಣಿಗೆ
ನರಗುಂದ: ವಾಲ್ಮೀಕಿ ಜಯಂತಿ ಅಂಗವಾಗಿ ಶುಕ್ರವಾರ ಪಟ್ಟಣದ ಸೋಮಾಪುರ ಮಾರುತೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಹಿಂದಿನ ಶತಮಾನದಲ್ಲಿ ವಾಲ್ಮೀಕಿ ಋಷಿ ಮೊದಲು ಒಬ್ಬ ಬೇಟೆಗಾರರಾಗಿದ್ದು, ನಂತರ ದಿನಗಳಲ್ಲಿ ಅವರಿಗೆ ಜ್ಞಾನೋದ ಯವಾದ ನಂತರ ರಾಮಾಯಣ ಗ್ರಂಥವನ್ನು ರಚನೆ ಮಾಡಿ ಈ ಸಮಾಜಕ್ಕೆ ದೊಡ್ಡ ಕೊಡಗೆ ನೀಡಿದ್ದಾರೆ ಎಂದರು. ಬನಹಟ್ಟಿ ಕಾಲೇಜಿನ ಉಪನ್ಯಾಸಕ ಪಿ.ಬಿ. ಬಡಿಗೇರ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಬಿ.ನೀಲಣ್ಣವರ, ವೈ.ಎಫ್. ಸಂಗ್ರೀಶ, ಸಿ.ಬಿ. ಪಾಟೀಲ, ಮಹೇಶ ಬಡಿಗೇರ, ಎಫ್.ವೈ. ದೊಡಮನಿ, ಎಂ.ಬಿ. ಅರಹುಣಸಿ, ದೇವರಡ್ಡಿ ವೆಂಕರಡ್ಡಿ, ವಿಠಲ ಶಿಂಧೆ, ಎಂ.ಎಂ. ಮುಳ್ಳೂರ, ದ್ಯಾಮಣ್ಣ ಸವದತ್ತಿ, ನಾಗಪ್ಪ ನವಲಗುಂದ, ಜ್ಯೋತಿ ಪತ್ರಿ, ಗುರುಪಾದಪ್ಪ ಕುರಹಟ್ಟಿ, ಡಾ. ಎಲ್.ಎಚ್. ಕರಮಡಿ, ಲಕ್ಷ್ಮಣ ಮಲ್ಲಾಪುರ ಮುತಾಂದವರು ಹಾಜರಿದ್ದರು. ಸರಸ್ವತಿ ಗಜಕೋಶ ಸ್ವಾಗತಿಸಿದರು. ಶಾಂತಕುಮಾರ ಭಜಂತ್ರಿ ನಿರೂಪಿಸಿದರು. ಟಿ.ಜಿ. ಶಂಕರಮೂರ್ತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

