ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 21
ತಾಲೂಕಿನಾದ್ಯಂತ ದನಗಳು, ಕುರಿಗಳು ಕಾಲುಬಾಯಿ ಬೇನೆಯಿಂದ ಬಳಲುತ್ತಿದ್ದು, ಪಟ್ಟಣದ ಸರ್ಕಾರಿ ಪಶು ವೈದ್ಯಕೀಯ ಇಲಾಖೆಯಲ್ಲಿ ರೋಗ ನಿಯಂತ್ರಣಕ್ಕೆ ಸರಿಯಾಗಿ ಔಷಧಿ ನೀಡುತ್ತಿಲ್ಲ ಎಂದು ಪಟ್ಟಣದ ರೈತರು ಇಲಾಖೆಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಿಂಗಪ್ಪ ತುಳಿ, ಲಕ್ಷ್ಮಣ ಕುರಿ ಮಾತನಾಡಿ, 3 ತಿಂಗಳಿಂದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಸಿಬ್ಬಂದಿಯೂ ಸರಿಯಾಗಿ ಬರುತ್ತಿಲ್ಲ. ನಿತ್ಯ ಕಾಯಿಲೆ ಪೀಡಿತ ದನಕರುಗಳನ್ನು ತೆಗೆದುಕೊಂಡು ರೈತರು ಆಸ್ಪತ್ರೆಗೆ ಬಂದರೆ, ಇಲ್ಲಿನ ಸಿಬ್ಬಂದಿ ಔಷಧಿಯಿಲ್ಲ. ವೈದ್ಯರಿಲ್ಲ ನಡೆಯಿರಿ ಎಂದು ಕಳುಹಿಸುತ್ತಿದ್ದಾರೆ. ಹೊರಗಡೆ ಔಷಧಿ ತೆಗೆದುಕೊಳ್ಳುವಂತೆ ಚೀಟಿ ಬರೆದು ಕೊಡುತ್ತಿದ್ದಾರೆ ಎಂದು ದೂರಿದರು.
ಜಾನುವಾರಿಗೆ ಬರುವ ಎಲ್ಲ ಕಾಯಿಲೆಯ ಔಷಧಿಯನ್ನು ಪೂರೈಕೆ ಮಾಡುವ ವ್ಯವಸ್ಥೆ ಸರ್ಕಾರದಿಂದ ಆಗಬೇಕು. ಆಸ್ಪತ್ರೆಯಲ್ಲಿ ಮೂಲ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದ್ದು, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡುವ ಜತೆಗೆ ಅಧಿಕಾರಿಗಳು ರೈತರೊಂದಿಗೆ ಸಂದಿಸಬೇಕು. ಕಾಯಂ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ತಾಲೂಕಿನ ಶೆಟ್ಟಿಕೇರಿಯ ಸೋಮಪ್ಪ ಗೂಳಪ್ಪ ಮಾಗಡಿ ಎಂಬುವವರಿಗೆ ಸೇರಿದ ಎಚ್ಚೆತ್ತು ಸರಿಯಾದ ಸಮಯಕ್ಕೆ ಔಷಧಿ ಸಿಗದೆ ಕಾಲು ಮತ್ತು ಬಾಯಿ ಬೇನೆಯಿಂದ ನರಳಿ ಸತ್ತು ಹೋಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚತ್ತು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಆಗಮಿಸಿ ಜಾನುವಾರಿಗೆ ಕಾಣಿಸಿಕೊಂಡಿರುವ ತೀವ್ರ ತರಹದ ಕಾಯಿಲೆಗಳಿಗೆ ಸಮರ್ಪಕ ಔಷಧಿ ನೀಡುವಂತೆ ಒತ್ತಾಯಿಸಿದರು. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಡಿ. ಮೋಹನ್ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ, ಇದ್ದ ವೈದ್ಯರು ಅನಾರೋಗ್ಯದಿಂದ ರಜೆ ಮೇಲೆ ತೆರಳಿದ್ದಾರೆ. ತುರ್ತಾಗಿ ಬೇರೆ ವೈದ್ಯರನ್ನು ಹಾಗೂ ಸಿಬ್ಬಂದಿ ನೇಮಕ ಮಾಡುವ ಜತೆಗೆ ಯಾವುದೇ ತರಹದ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.
ಅರಣ್ಯಪ್ಪ ಹಾಲಪ್ಪನವರ, ದೇವಪ್ಪ ಇಟ್ಟೇಕಾರ, ಅಶೋಕ ಆಡಿನ್, ಶೇಖಪ್ಪ ಮುರಶಿಳ್ಳಿ, ಪ್ರಕಾಶ ಯಾದಗೀರಿ, ಫಕ್ಕೀರೇಶ ಯಾದಗೀರಿ, ಮಹಾಂತೇಶ ತುಳಿ, ಫಕ್ಕೀರೇಶ ಕುರಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

