ಗದಗ

ಗದಗ: ನಾಳೆ ಚನ್ನಮ್ಮ ಪ್ರತಿಮೆಗೆ ಗೌರವ

Published On :

ಗದಗ: ಜಿಲ್ಲಾ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ವೀರರಾಣಿ ಕಿತ್ತೂರ ಚನ್ನಮ್ಮ 190ನೇ ವಿಜಯೋತ್ಸವದ ಅಂಗವಾಗಿ ಅ. 23ರ ಬೆಳಗ್ಗೆ 9ಕ್ಕೆ ನಗರದ ಕಾರವಾರ-ಬಳ್ಳಾರಿ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿನ ಚನ್ನಮ್ಮನ ಪ್ರತಿಮೆಗೆ ವೀರಶೈವ ಪಂಚಮಸಾಲಿ ಸಮಾಜದಿಂದ ಮತ್ತು ವೀರರಾಣಿ ಚನ್ನಮ್ಮನ ಅಭಿಮಾನಿಗಳ ವತಿಯಿಂದ ಮಾಲಾರ್ಪಣೆ ನಡೆಯುವುದು. ಎಫ್.ವಿ. ಮರಿಗೌಡ್ರ ಅಧ್ಯಕ್ಷತೆ ವಹಿಸುವರು. ನಿಂಗಪ್ಪ ಪಡಗದ, ವೀರಣ್ಣ ಕರಿಬಿಷ್ಠಿ, ಶಿವಣ್ಣ ನಾಗರಾಳ, ಜಗದೀಶ ಚನ್ನಪ್ಪಗೌಡ್ರ, ಮುತ್ತು ರೋಣದ, ಕಲ್ಲಪ್ಪ ಅಂಗಡಿ, ಪಂಚಮಸಾಲಿ ಸಮಾಜದ ಯುವ ಜಿಲ್ಲಾಧ್ಯಕ್ಷ ವಸಂತ ಪಡಗದ, ಶೇಖಣ್ಣ ಕನ್ಯಾಳ, ಅಮರೇಶ ಬೂದಿಹಾಳ, ಡಾ. ಜವಾಯಿ, ಸದ್ದು ಕರಿಗೌಡ್ರ, ಎಸ್.ವಿ. ನೇಗಲಿ, ಎಸ್.ಎಸ್. ಬಾವಳ್ಳಿ, ಸಿದ್ಧಣ್ಣ ತುರಖಾನಿ, ಮಹಿಳಾ ಅಧ್ಯಕ್ಷೆ ಪಾರ್ವತಿದೇವಿ ಮರಿಗೌಡ್ರ, ಸಾವಿತ್ರಿದೇವಿ ಪಾಟೀಲ, ನೀಲಮ್ಮ ಬುಳ್ಳಾನವರ, ಮೀನಾಕ್ಷಿ ಬೆನಕಣ್ಣವರ, ಜಾನಕಿಬಾಯಿ ಮಲ್ಲಾಪುರ ಮುಂತಾದವರು ಉಪಸ್ಥಿತರಿರುವರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಅಪ್ಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕಣ್ಣಿನ ತಪಾಸಣೆ
ಮುಂಡರಗಿ: ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅಂಗವಾಗಿ ಅ. 22ರ ಬೆಳಗ್ಗೆ 10 ಗಂಟೆಗೆ ಬಾಗೇವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ಸ್ವಾಮಿ ವಿವೇಕಾನಂದ ಸಾರ್ಧಶತಿ ಸಮಾರೋಪ ಸಮಿತಿ ಮುಂಡರಗಿ, ವಿವೇಕ ಜಾಗ್ರತ ಬಳಗ ಮುಂಡರಗಿ, ಜಿಲ್ಲಾ ಆಯುಷ್ ಇಲಾಖೆ ಗದಗ, ಸುಜಲಾನ್ ಎನರ್ಜಿ ಲಿಮಿಟೆಡ್ ಕಪ್ಪತಗುಡ್ಡ ಸೈಟ್, ತಾಲೂಕು ಆರೋಗ್ಯಾಧಿಕಾರಿಗಳು ಮುಂಡರಗಿ, ಔಷಧಿ ವ್ಯಾಪಾರಸ್ಥರ ಸಂಘ ಮುಂಡರಗಿ, ತ್ಯಾಗವೀರ ಶಿರಸಂಗಿ ಲಿಂಗರಾಜರ ಸೇವಾ ಸಂಸ್ಥೆ ಮುಂಡರಗಿ ಆಶ್ರಯದಲ್ಲಿ 18ನೇ ವರ್ಷದ ಬೃಹತ್ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಬಾಗೇವಾಡಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಕಂಪ್ಲಿ ಅಧ್ಯಕ್ಷತೆ ವಹಿಸುವರು. ಡಾ. ಬಿ.ಜಿ. ಪಾಟೀಲ, ಬಿ. ಪ್ರಹ್ಲಾದ ಭಾಗವಹಿಸುವರು ಎಂದು ಸಂಘಟಕ ಡಾ. ಪಿ.ಬಿ. ಹಿರೇಗೌಡರ, ನಾಗೇಶ ಹುಬ್ಬಳ್ಳಿ ತಿಳಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ಬೆಟಗೇರಿ ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಅ. 22ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಟಗೇರಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಬಳಗಾನೂರ, ಕಣಗಿನಹಾಳ, ಹೊಂಬಳ, ಬೆಟಗೇರಿ, ನಗರದ ಎಸ್.ಎಂ. ಕೃಷ್ಣ ನಗರ, ನರಸಾಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂನ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.