ಇಂದು ಬೃಹತ್ ಸಾಮೂಹಿಕ ವಿವಾಹ
ಗದಗ: ಬಿ. ಶ್ರೀರಾಮುಲು ಅಭಿಮಾನಿ ಬಳಗ ಗದಗ ವತಿಯಿಂದ ಅ. 23ರ ಬೆಳಗ್ಗೆ 11ಕ್ಕೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ 7ನೇ ವರ್ಷದ ಬೃಹತ್ 555 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಫಕ್ಕೀರ ಸಿದ್ದರಾಮ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶ್ರೀಗಳು, ಸೊರಟೂರು ಹಿರೇಮಠದ ಫಕ್ಕೀರೇಶ್ವರ ಶ್ರೀಗಳು ವಹಿಸುವರು. ಮಾಜಿ ಸಚಿವ, ಶಾಸಕ ಬಿ. ಶ್ರೀರಾಮುಲು ಉದ್ಘಾಟಿಸುವರು. ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷ ಅನಿಲ ಮೆಣಸಿನಕಾಯಿ ಅಧ್ಯಕ್ಷತೆ ವಹಿಸುವರು. ಸಚಿವ ಎಚ್.ಕೆ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ, ವಿಪ ಸದಸ್ಯ ಮೃತ್ಯುಂಜಯ ಜಿನಗಾ, ಶಾಸಕ ಟಿ.ಎಚ್. ಸುರೇಶಬಾಬು, ಪಿ. ರಾಜೀವ, ಎಸ್. ತಿಪ್ಪೇಸ್ವಾಮಿ, ಚಲನಚಿತ್ರ ನಟಿ ಪೂಜಾ ಗಾಂಧಿ, ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಶ್ರೀಶೈಲಪ್ಪ ಬಿದರೂರ, ಡಿ.ಆರ್. ಪಾಟೀಲ, ಸಿ.ಎಸ್. ಮುತ್ತಿನಪೆಂಡಿಮಠ, ಗಂಗಣ್ಣ ಮಹಾಂತಶೆಟ್ಟರ, ಎಸ್.ಎನ್. ಪಾಟೀಲ, ಬಿ.ಎಸ್.ಆರ್. ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಸಿಇಒ ವೀರಣ್ಣ ತುರಮರಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಡಿ.ಬಿ. ಹುಯಿಲಗೋಳ, ಸರ್ಪರಾಜ ಉಮಚಗಿ, ಮೈಲಾನಾ ಮಾನ್ವಿ, ವೈ.ಎನ್. ಗೌಡರ, ಕರಿಬಸಪ್ಪ ಹಂಚಿನಾಳ, ಎಸ್.ಟಿ. ಮೇಲಗಿರಿ, ಶ್ರೀನಿವಾಸ ಹುಯಿಲಗೋಳ, ವಿಜಯಕುಮಾರ ಗಡ್ಡಿ, ಎಸ್.ಬಿ. ಸಂಕಣ್ಣವರ, ಎನ್. ರಾಮನಾಥ, ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ, ಸಂತೋಷ ಮೇಲಗಿರಿ, ರಾಘವೇಂದ್ರ ಯಳವತ್ತಿ, ನಾಗಲಿಂಗಪ್ಪ ಐಲಿ, ಶ್ರೀನಿವಾಸ ಕರಿ, ಚಿನ್ನವ್ವ ಮುಳಗುಂದ, ಜಯಶ್ರೀ ಬೈರವಾಡೆ, ತುಳಜನಸಾ ಕಬಾಡಿ, ಬಸಣ್ಣ ಮಲ್ಲಾಡದ, ಶಿರಾಜ ಬಳ್ಳಾರಿ ಮುಂತಾದವರು ಪಾಲ್ಗೊಳ್ಳುವರು.
ರು. 60 ಸಾವಿರ ಮೌಲ್ಯದ ಗಾಂಜಾ ವಶ
ಗದಗ: ಅಕ್ರಮವಾಗಿ ಹೊಲದಲ್ಲಿ ಬೆಳೆದಿದ್ದ ಗಾಂಜಾ ವಶ ಪಡಿಸಿಕೊಂಡ ಘಟನೆ ಮಂಗಳವಾರ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಜರುಗಿದೆ. ನೀಲಗುಂದ ಗ್ರಾಮದ ಶಿವಪ್ಪ ನಾಯ್ಕರ ಎಂಬುವವರ ಹೊಲದಲ್ಲಿ ಹತ್ತಿ ಬೆಳೆಯೊಂದಿಗೆ ಗಾಂಜಾಗಿಡವನ್ನು ಬೆಳೆಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಗದಗ ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಗದಗ ಪ್ರಭಾರಿ ಡಿವೈಎಸ್ಪಿ ವಿ.ಎಚ್. ನ್ಯಾಮಗೌಡ್ರ ಗದಗ ಪಿಎಸ್ಐ ಎಲ್.ಕೆ. ಜೂಲಿಕಟ್ಟಿ ಹಾಗೂ ಮುಳಗುಂದ ಪಿಎಸ್ಐ ಪರಮೇಶ್ವರ ಕವಟಗಿ ನೇತೃತ್ವದಲ್ಲಿ ದಾಳಿ ನಡೆಸಿ ರು. 60 ಸಾವಿರ ಬೆಲೆಬಾಳುವ ಸುಮಾರು 6 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ಎಂ.ಎಂ. ಕಲಹಾಳ, ಎಎಸ್ಐ ತಹಸೀಲ್ದಾರ, ಹುಬ್ಬಳ್ಳಿ, ತಿರಂಗಿ, ದಾಸರ, ನದಾಫ್ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

